ಕೆಪಿಎಲ್: ವಿನಯ್ ಸ್ಫೋಟಕ ಅರ್ಧಶತಕ, ಹುಬ್ಳಿಗೆ ಶರಣಾದ ಬೆಂಗಳೂರು

ಮೈಸೂರು, ಆಗಸ್ಟ್ 27: ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಅದೃಷ್ಟವೇ ಸರಿಯಿದ್ದಂತಿಲ್ಲ. ಆಡಿರುವ 6 ಪಂದ್ಯಗಳಲ್ಲಿ ಒಂದೇ ಗೆಲುವು ದಾಖಲಿಸಿರುವ ಬೆಂಗಳೂರು, ಮಂಗಳವಾರ (ಆಗಸ್ಟ್ 27) ಹುಬ್ಳಿ ಟೈಗರ್ಸ್ ವಿರುದ್ಧ 7 ವಿಕೆಟ್ ಸೋಲನುಭವಿಸಿದೆ. ಆದರೆ ಈ ಗೆಲುವಿನೊಂದಿಗೆ ಹುಬ್ಳಿ ತಂಡ ಪ್ಲೇ ಆಫ್‌ಗೆ ಪ್ರವೇಶಿಸಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಟೇಡಿಯಂನಲ್ಲಿ ನಡೆದ ಕೆಪಿಎಲ್ 20ನೇ ಪಂದ್ಯದಲ್ಲಿ ನಾಯಕ ವಿಜಯ್ ಕುಮಾರ್ ಸ್ಫೋಟಕ ಅರ್ಧಶತಕದಿಂದಾಗಿ ಹುಬ್ಳಿ ಟೈಗರ್ಸ್, 3ನೇ ಗೆಲುವು ದಾಖಲಿಸಿದೆ. ಹುಬ್ಳಿ ಆಡಿರುವ 6ರಲ್ಲಿ 3 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು ಬ್ಲಾಸ್ಟರ್ಸ್ ಪರ ಭರತ್ ದೂರಿ ಬಿಟ್ಟರೆ ಯಾರೂ ಅಂಥ ಬ್ಯಾಟಿಂಗ್ ಬೆಂಬಲ ನೀಡಲಿಲ್ಲ. ದೂರಿ 42 ರನ್ ಸೇರಿಸಿದರು. ಅದು ಬಿಟ್ಟರೆ ಕುಲದೀಪ್ ಕುಮಾರ್ 19, ಮನೋಜ್ ಎಸ್ ಭಂಡಾಜೆ 28 ರನ್ ಸೇರಿಸಿದ್ದೇ ಹೆಚ್ಚೆನಿಸಿತು.
ಬ್ಲಾಸ್ಟರ್ಸ್ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 158 ರನ್ ಮಾಡಿತು. ಗುರಿ ಬೆಂಬತ್ತಿದ ಹುಬ್ಳಿ ಟೈಗರ್ಸ್, ಮೊಹಮ್ಮದ್ ತಾಹ 48 (31 ಎಸೆತ), ವಿನಯ್ ಕುಮಾರ್ 81 (51) ರನ್‌ನೊಂದಿಗೆ 17.4 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 164 ರನ್ ಗಳಿಸಿತು. ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಹುಬ್ಳಿಯ ಡೇವಿಡ್ ಮಥೀಯಸ್ 4, ಆದಿತ್ಯ ಸೋಮಣ್ಣ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications