ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2018: ಅಭಿಮನ್ಯು, ಉತ್ತಪ್ಪ, ನಿಧೀಶ್ ದುಬಾರಿ ಆಟಗಾರರು!

KPL 2018 : ಇಂದು ಕೆಪಿಎಲ್ ಹರಾಜು ಪ್ರಕ್ರಿಯೆ ಆರಂಭ | Oneindia Kannada

KPL auction 2018: All eyes on Robin Uthappa, unheralded names

ಬೆಂಗಳೂರು, ಜುಲೈ 21: ಕುತೂಹಲ ಮೂಡಿಸಿರುವ ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ 2018ರ ಆಟಗಾರರ ಹರಾಜು ಕೆ.ಎಸ್.ಸಿ.ಎ. ಸಮ್ಮುಖದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಏಳು ಫ್ರಾಂಚೈಸಿಗಳು ಈ 7ನೇ ಆವೃತ್ತಿ ಕೆಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಂಡಿದ್ದವು.

ಕುತೂಹಲ ಮೂಡಿಸಿದ್ದ ರಾಬಿನ್ ಉತ್ತಪ್ಪ ಹರಾಜಿನಲ್ಲಿ 7.90 ಲಕ್ಷಕ್ಕೆ ಬೆಂಗಳೂರು ಬ್ಲಾಸ್ಟರ್ಸ್ ಪಾಲಾದರು. ಪೂಲ್ 1ರಲ್ಲಿ ದಾಖಲೆ ಬೆಲೆಗೆ ಮಾರಾಟವಾದವರು ಅಭಿಮನ್ಯು ಮಿಥುನ್. ಶಿವಮೊಗ್ಗ ಲಯನ್ಸ್ ಫ್ರಾಂಚೈಸಿ ಮಿಥುನ್ ಅವರನ್ನು 8.30 ಲಕ್ಷಕ್ಕೆ ಖರೀದಿಸಿತು. ಪೂಲ್ ಒಂದರಲ್ಲಿ ಎರಡನೇ ದುಬಾರಿ ಆಟಗಾರನಾಗಿ ರಾಬಿನ್ ಉತ್ತಪ್ಪ ಕಾಣಿಸಿಕೊಂಡಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ನಿಧೀಶ್ ಎಂ 5.85 ಭರ್ಜರಿ ಮೊತ್ತಕ್ಕೆ ಬೆಳಗಾವಿ ಪ್ಯಾಂಥರ್ಸ್ ಪಾಲಾಗಿದ್ದಾರೆ. ಜೋನಾಥನ್ ಆರ್ ಅವರು 5.45 ಲಕ್ಷ ರೂ.ಗೆ ಶಿವಮೊಗ್ಗ ಲಯನ್ಸ್ ನಿಂದ ಖರೀದಿಸಲ್ಪಟ್ಟು ಗಮನ ಸೆಳೆದರು.

ಆಲ್ ರೌಂಡರ್ಸ್ ವಿಭಾಗದಲ್ಲಿ ಮೇಲು ಕ್ರಾಂತಿ ಕುಮಾರ್ ದುಬಾರಿ ಆಟಗಾರರಾಗಿ ಗುರುತಿಸಿಕೊಂಡಿದ್ದು, 3.50 ಲಕ್ಷ ರೂ. ಭರ್ಜರಿ ಮೊತ್ತಕ್ಕೆ ಹುಬ್ಳಿ ಟೈಗರ್ಸ್ ಪಾಲಾಗಿದ್ದಾರೆ. ಮತ್ತೊಬ್ಬ ಆಟಗಾರ ಸುನಿಲ್ ರಾಜು ಅವರು 3.50 ಲಕ್ಷ ರೂ. ಗೆ ಬಿಜಾಪುರ್ ಬುಲ್ಸ್ ಸೇರಿಕೊಂಡಿದ್ದಾರೆ.

ಆಟಗಾರರ ಹರಾಜು ಕಾರ್ಯಕ್ರಮವನ್ನು ಪ್ರೊ ಕಬಡ್ಡಿ ಲೀಗ್ ನ ನಿರ್ದೇಶಕ, 2008ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಒ ಆಗಿದ್ದ ಚಾರು ಶರ್ಮಾ ನಡೆಸಿಕೊಟ್ಟರು. ಕೆಪಿಎಲ್ 2018ರಲ್ಲಿ ಒಟ್ಟು 7 ತಂಡಗಳು ಕಾದಾಡಲಿದ್ದು ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ಈ ಮೂರು ತಾಣಗಳಲ್ಲಿ ಪಂದ್ಯಾಟಗಳು ನಡೆಯಲಿವೆ.

ಲಕ್ಷ್ಮೀ ವಿಲಾಸ್ ಬ್ಯಾಂಕ್ ಸಹಯೋಗದೊಂದಿದೆ ಕಾರ್ಬನ್ ಸ್ಮಾರ್ಟ್ ಫೋನ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕೆಪಿಎಲ್ 2018ರ ಈ ಸೀಸನ್ ನಲ್ಲಿ ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರ್ ವಾರಿಯರ್ಸ್, ಶಿವಮೊಗ್ಗ ಲಯನ್ಸ್, ಬೆಂಗಳೂರು ಬ್ಲಾಸ್ಟರ್ಸ್ ಹೀಗೆ ಏಳು ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯಲಿದ್ದು ಪಂದ್ಯಾಟ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

Jul 21, 2018, 4:06 pm IST

ಆಟಗಾರರ ಹರಾಜು ಮುಕ್ತಾಯಗೊಂಡಿದೆ. ಮೈಸೂರು ವಾರಿಯರ್ಸ್ ಹೊರತುಪಡಿಸಿ ಉಳಿದ ಆರು ತಂಡಗಳು ತಲಾ 18 ಆಟಗಾರರನ್ನು ಹೊಂದಿವೆ. ಮೈಸೂರು ತಂಡದಲ್ಲಿ 16 ಆಟಗಾರರಿದ್ದಾರೆ.

Jul 21, 2018, 4:04 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಕೆ ಗೌತಮ್, ಮೈಸೂರ್ ವಾರಿಯರ್ಸ್, 25 ಸಾವಿರ.

Jul 21, 2018, 4:01 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಪ್ರವೀನ್ ಕುಮಾರ್, ಬಿಜಾಪುರ್ ಬುಲ್ಸ್, 20 ಸಾವಿರ.

Jul 21, 2018, 4:01 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ವಿ‍ಷ್ಣು ಪ್ರಿಯನ್, ಬೆಳಗಾವಿ ಪ್ಯಾಂಥರ್ಸ್, 20 ಸಾವಿರ.

Jul 21, 2018, 3:59 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ವಿಶ್ವನಾಥ್, 20 ಸಾವಿರ, ಬೆಂಗಳೂರು ಬ್ಲಾಸ್ಟರ್ಸ್.

Jul 21, 2018, 3:57 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ರುತುರಾಜ್, ಬಿಜಾಪುರ್ ಬುಲ್ಸ್, 20 ಸಾವಿರ.

Jul 21, 2018, 3:56 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಮನೋಜ್ ಕೆ, ಮೈಸೂರ್ ವಾರಿಯರ್ಸ್, 20 ಸಾವಿರ.

Jul 21, 2018, 3:55 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಅಭಿಲಾಷ್ ಶೆಟ್ಟಿ, ಬೌಲರ್, ಶಿವಮೊಗ್ಗ ಲಯನ್ಸ್.

Jul 21, 2018, 3:54 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಹೊಯ್ಸಳ, 20 ಸಾವಿರ, ಶಿವಮೊಗ್ಗ ಲಯನ್ಸ್.

Jul 21, 2018, 3:52 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಶಿವರಾಜ್, 20 ಸಾವಿರ, ಹುಬ್ಳಿ ಟೈಗರ್ಸ್.

Jul 21, 2018, 3:52 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ರಾಹುಲ್ ನಾಯ್ಕ್, ಆಲ್ ರೌಂಡರ್, 75 ಸಾವಿರ, ಹುಬ್ಳಿ ಟೈಗರ್ಸ್.

Jul 21, 2018, 3:48 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಸ್ವಪ್ನಿಲ್, 3.50 ಲಕ್ಷ ರೂ. ಭರ್ಜರಿ ಮೊತ್ತಕ್ಕೆ ಬಳ್ಳಾರಿ ಟಸ್ಕರ್ಸ್ ಸೇರಿಕೊಂಡರು.

Jul 21, 2018, 3:44 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಸುನಿಲ್ ಕುಮಾರ್, ವಿಕಿ-70 ಸಾವಿರ, ಹುಬ್ಳಿ ಟೈಗರ್ಸ್.

Jul 21, 2018, 3:43 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಮೊಹಮ್ಮದ್ ಸೈಫ್, 20 ಸಾವಿರ, ಬಳ್ಳಾರಿ ಟಸ್ಕರ್ಸ್.

Jul 21, 2018, 3:42 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಚಿರಂಜೀವಿ-ವಿಕೆಟ್ ಕೀಪರ್, 95 ಸಾವಿರ, ಬಳ್ಳಾರಿ ಟಸ್ಕರ್ಸ್.

Jul 21, 2018, 3:40 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಅವಿನಾಶ್, ಬೆಂಗಳೂರು-20 ಸಾವಿರ.

Jul 21, 2018, 3:40 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಕುಶಾಲ್, ಮೈಸೂರ್ ವಾರಿಯರ್ಸ್, 50 ಸಾವಿರ.

Jul 21, 2018, 3:38 pm IST

ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ: ಶರತ್ ಶ್ರೀನಿವಾಸ್, ಮೈಸೂರ್ ವಾರಿಯರ್ಸ್, 20 ಸಾವಿರ.

Jul 21, 2018, 3:36 pm IST

ಬೌಲರ್: ಅಮನ್ ಖಾನ್, ಬೆಳಗಾವಿ ಪ್ಯಾಂಥರ್ಸ್, 20 ಸಾವಿರ.

Jul 21, 2018, 3:21 pm IST

ಆಟಗಾರರ ಹರಾಜು ಮುಂದುವರೆಯಲಿದೆ. ಸದ್ಯ ಬಿಡುವು (ಟಿ ಬ್ರೇಕ್) ನೀಡಲಾಗಿದೆ.

Jul 21, 2018, 3:19 pm IST

ಬ್ಯಾಟ್ಸ್ಮನ್: ಮಯಾಂಕ್ ಅಗರ್ವಾಲ್, ಹುಬ್ಳಿ ಟೈಗರ್ಸ್ ಪಾಲಾಗಿದ್ದಾರೆ.

Jul 21, 2018, 3:17 pm IST

ಬ್ಯಾಟ್ಸ್ಮನ್: ಮೀರ್ ಕೆ ಅಬ್ಬಾಸ್, ಬಿಜಾಪುರ್ ಬುಲ್ಸ್, 3 ಲಕ್ಷ.

Jul 21, 2018, 3:10 pm IST

ವಿಕೆಟ್ ಕೀಪರ್ಸ್: ರಕ್ಷಿತ್ ಎಸ್., 1.80 ಲಕ್ಷ ರೂ.ಗೆ ಬೆಳಗಾವಿ ಪ್ಯಾಂಥರ್ಸ್ ಪಾಲಾಗಿದ್ದಾರೆ.

Jul 21, 2018, 3:05 pm IST

ವಿಕೆಟ್ ಕೀಪರ್ಸ್: ರೋಹಿತ್ ಸಬರ್ವಾಲ್, 25 ಸಾವಿರ, ಬಳ್ಳಾರಿ ಟಸ್ಕರ್ಸ್.

Jul 21, 2018, 3:03 pm IST

ವಿಕೆಟ್ ಕೀಪರ್ಸ್: ಶ್ರೀಜಿತ್, ಬಿಜಾಪುರ್ ಬುಲ್ಸ್, 55 ಸಾವಿರ.

Jul 21, 2018, 3:02 pm IST

ವಿಕೆಟ್ ಕೀಪರ್ಸ್: ನಿತಿನ್ ಬಿಲ್ಲೆ, 1.30 ಲಕ್ಷಕ್ಕೆ ಹುಬ್ಳಿ ಟೈಗರ್ಸ್ ಪಾಲು.

Jul 21, 2018, 3:00 pm IST

ವಿಕೆಟ್ ಕೀಪರ್ಸ್: ಲವನಿತ್ ಸಿಸೋಡಿಯಾ, 80 ಸಾವಿರ, ಮೈಸೂರ್ ವಾರಿಯರ್ಸ್.

Jul 21, 2018, 2:58 pm IST

ವಿಕೆಟ್ ಕೀಪರ್ಸ್: ಅನುರಾಗ್, 60 ಸಾವಿರ, ಬಿಜಾಪುರ್ ಬುಲ್ಸ್

Jul 21, 2018, 2:56 pm IST

ಬ್ಯಾಟಿಂಗ್ ವಿಭಾಗ: ನಿಶ್ಚಲ್ ಡಿ., 55 ಸಾವಿರ, ಬಳ್ಳಾರಿ ಟಸ್ಕರ್ಸ್.

Jul 21, 2018, 2:55 pm IST

ಬ್ಯಾಟಿಂಗ್ ವಿಭಾಗ: ಪೃಥ್ವಿ ವರದರಾಜನ್, ಶಿವಮೊಗ್ಗ ಲಯನ್ಸ್, 20 ಸಾವಿರ.

Jul 21, 2018, 2:51 pm IST

ಬ್ಯಾಟಿಂಗ್ ವಿಭಾಗ: ನಿಧೀಶ್ ಎಂ., 5.85 ಲಕ್ಷ ಭರ್ಜರಿ ಮೊತ್ತಕ್ಕೆ ಬೆಳಗಾವಿ ಪ್ಯಾಂಥರ್ಸ್ ಪಾಲಾಗಿದ್ದಾರೆ.

Jul 21, 2018, 2:45 pm IST

ಬ್ಯಾಟಿಂಗ್ ವಿಭಾಗ: ಸುಜಿತ್, 35 ಸಾವಿರ, ಹುಬ್ಳಿ ಟೈಗರ್ಸ್.

Jul 21, 2018, 2:44 pm IST

ಬ್ಯಾಟಿಂಗ್ ವಿಭಾಗ: ನಿಕಿನ್ ಜೋಶ್, ಬೆಳಗಾವಿ ಪ್ಯಾಂಥರ್ಸ್, 65 ಸಾವಿರ.

Jul 21, 2018, 2:42 pm IST

ಬ್ಯಾಟಿಂಗ್ ವಿಭಾಗ: ಕೆಬಿ ಪವನ್, 4.55 ಲಕ್ಷ ರೂ., ಬೆಂಗಳೂರು ಬ್ಲಾಸ್ಟರ್ಸ್.

Jul 21, 2018, 2:32 pm IST

ಬ್ಯಾಟಿಂಗ್ ವಿಭಾಗ: ಗೌರವ್ ಧಿಮಾನ್, ಬೆಂಗಳೂರು ಬ್ಲಾಸ್ಟರ್ಸ್, 20 ಸಾವಿರ.

Jul 21, 2018, 2:31 pm IST

ಬ್ಯಾಟಿಂಗ್ ವಿಭಾಗ: ವಿನೀತ್ ಯಾದವ್, ಬೆಂಗಳೂರು ಬ್ಲಾಸ್ಟರ್ಸ್, 20 ಸಾವಿರ.

Jul 21, 2018, 2:29 pm IST

ಬ್ಯಾಟಿಂಗ್ ವಿಭಾಗ: ಅಕ್ಷಯ್ ಬಲ್ಲಾಳ್, ಬೆಳಗಾವಿ ಪ್ಯಾಂಥರ್ಸ್, 25 ಸಾವಿರ.

Jul 21, 2018, 2:26 pm IST

ಆಟಗಾರರ ಹರಾಜು ಮತ್ತೆ ಆರಂಭವಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಜೋನಾಥನ್ ಆರ್ ಅವರು 5.45 ಲಕ್ಷ ರೂ.ಗೆ ಶಿವಮೊಗ್ಗ ಲಯನ್ಸ್ ಪಾಲಾಗಿದ್ದಾರೆ.

Jul 21, 2018, 1:30 pm IST

ಇನ್ನೂ ಬಿಡ್ ಮುಂದುವರೆಯಲಿದ್ದು ವಿರಾಮ ನೀಡಲಾಗಿದೆ.

Jul 21, 2018, 1:25 pm IST

* ಆಲ್ ರೌಂಡರ್ಸ್ ವಿಭಾಗ: ಪೃಥ್ವಿರಾಜ್ ಶೇಖಾವತ್, ಶಿವಮೊಗ್ಗ ಲಯನ್ಸ್, 60 ಸಾವಿರ.

Jul 21, 2018, 1:23 pm IST

* ಆಲ್ ರೌಂಡರ್ಸ್ ವಿಭಾಗ: ಮೇಲು ಕ್ರಾಂತಿ ಕುಮಾರ್, 3.50 ಲಕ್ಷ ರೂ. ಭರ್ಜರಿ ಮೊತ್ತಕ್ಕೆ ಹುಬ್ಳಿ ಟೈಗರ್ಸ್ ಪಾಲಾಗಿದ್ದಾರೆ.

Jul 21, 2018, 1:18 pm IST

* ಆಲ್ ರೌಂಡರ್ಸ್ ವಿಭಾಗ: ಭರತ್ ದೇವರಾಜ್, 30 ಸಾವಿರ, ಬೆಂಗಳೂರು ಬ್ಲಾಸ್ಟರ್ಸ್.

Jul 21, 2018, 1:18 pm IST

* ಆಲ್ ರೌಂಡರ್ಸ್ ವಿಭಾಗ: ಆದಿತ್ಯ, ಶಿವಮೊಗ್ಗ ಲಯನ್ಸ್, 20 ಸಾವಿರ.

Jul 21, 2018, 1:16 pm IST

* ಆಲ್ ರೌಂಡರ್ಸ್ ವಿಭಾಗ: ಅರ್ಷ್ ದೀಪ್ ಸಿಂಗ್, 1.20 ಲಕ್ಷ, ಬೆಂಗಳೂರು ಬ್ಲಾಸ್ಟರ್ಸ್,

Jul 21, 2018, 1:13 pm IST

* ಆಲ್ ರೌಂಡರ್ಸ್ ವಿಭಾಗ: ರಾಜು ಭಟ್ಕಳ್, ಮೈಸೂರ್ ವಾರಿಯರ್ಸ್, 20 ಸಾವಿರ.

Jul 21, 2018, 1:11 pm IST

* ಆಲ್ ರೌಂಡರ್ಸ್ ವಿಭಾಗ: ಶೋಯೇಬ್ ಮ್ಯಾನೇಜರ್, 1.55 ಲಕ್ಷ ರೂ., ಮೈಸೂರ್ ವಾರಿಯರ್ಸ್.

Jul 21, 2018, 1:08 pm IST

* ಆಲ್ ರೌಂಡರ್ಸ್ ವಿಭಾಗ: ಭವೇಶ್ ಎಂ., 60 ಸಾವಿರ, ಬಿಜಾಪುರ್ ಬುಲ್ಸ್ ಪಾಲಾಗಿದ್ದಾರೆ.

Jul 21, 2018, 1:05 pm IST

* ಆಲ್ ರೌಂಡರ್ಸ್ ವಿಭಾಗ: ಮನೋಜ್ ಭಂಡಾಜೆ, ಬೆಂಗಳೂರು ಬ್ಲಾಸ್ಟರ್ಸ್, 80 ಸಾವಿರ.

Jul 21, 2018, 1:03 pm IST

* ಆಲ್ ರೌಂಡರ್ಸ್ ವಿಭಾಗ: ಭರ್ಜರಿ ಬಿಡ್- ಸುನಿಲ್ ರಾಜು, 3.50 ಲಕ್ಷ, ಬಿಜಾಪುರ್ ಬುಲ್ಸ್.

Jul 21, 2018, 12:56 pm IST

* ಆಲ್ ರೌಂಡರ್ಸ್ ವಿಭಾಗ: ಪಲ್ಲವ್ ಕುಮಾರ್ ದಾಸ್, 1.20 ಲಕ್ಷ ರೂ., ಬೆಂಗಳೂರು ಬ್ಲಾಸ್ಟರ್ಸ್.

Jul 21, 2018, 12:47 pm IST

* ಬೌಲಿಂಗ್ ವಿಭಾಗ: ಕೊನೆಯ ಆಟಗಾರ- ಭರತ್ ಕೊಂಡಾಜಿ, ಹರಾಜಾಗಲಿಲ್ಲ.

Jul 21, 2018, 12:46 pm IST

* ಬೌಲಿಂಗ್ ವಿಭಾಗ: ಸತೀಶ್ ಭಾರದ್ವಾಜ್, 55 ಸಾವಿರ, ಬಳ್ಳಾರಿ ಟಸ್ಕರ್ಸ್.

Jul 21, 2018, 12:45 pm IST

* ಬೌಲಿಂಗ್ ವಿಭಾಗ: ಆನಂದ್ ದೊಡ್ಡಮನಿ, 45 ಸಾವಿರ, ಬೆಂಗಳೂರು ಬ್ಲಾಸ್ಟರ್ಸ್.

Jul 21, 2018, 12:43 pm IST

* ಬೌಲಿಂಗ್ ವಿಭಾಗ: ಅನಿಲ್ ಐಜಿ, 70 ಸಾವಿರ, ಹುಬ್ಳಿ ಟೈಗರ್ಸ್.

Jul 21, 2018, 12:42 pm IST

* ಬೌಲಿಂಗ್ ವಿಭಾಗ: ಸೂರಜ್ , ಹುಬ್ಳಿ ಟೈಗರ್ಸ್, 20 ಸಾವಿರ.

Jul 21, 2018, 12:41 pm IST

* ಬೌಲಿಂಗ್ ವಿಭಾಗ: ಶ್ರೇಯಸ್ ಬಿಎಂ, ಬೆಳಗಾವಿ ಪ್ಯಾಂಥರ್ಸ್, 20 ಸಾವಿರ.

Jul 21, 2018, 12:40 pm IST

* ಬೌಲಿಂಗ್ ವಿಭಾಗ: ರಜತ್ ಹೆಗ್ಡೆ, 20 ಸಾವಿರ, ಬಳ್ಳಾರಿ ಟಸ್ಕರ್ಸ್.

Jul 21, 2018, 12:39 pm IST

* ಬೌಲಿಂಗ್ ವಿಭಾಗ: ಕಿಶೋರ್ ಕಾಮತ್, 1.50 ಲಕ್ಷ, ಶಿವಮೊಗ್ಗ ಲಯನ್ಸ್.

Jul 21, 2018, 12:35 pm IST

* ಬೌಲಿಂಗ್ ವಿಭಾಗ-ದುಬಾರಿ ಆಟಗಾರ: ಅಪ್ಪಣ್ಣ ಕೆಪಿ, 3.85 ಲಕ್ಷಕ್ಕೆ ಬಿಜಾಪುರ್ ಬುಲ್ಸ್ ಸೇರಿಕೊಂಡಿದ್ದಾರೆ.

Jul 21, 2018, 12:32 pm IST

* ಬೌಲಿಂಗ್ ವಿಭಾಗದಲ್ಲಿ: ಅಬ್ರಾರ್ ಕಾಝಿ, 3.50 ಲಕ್ಷಕ್ಕೆ ಬಳ್ಳಾರಿ ಟಸ್ಕರ್ಸ್ ಪಾಲಾಗಿದ್ದಾರೆ.

Jul 21, 2018, 12:21 pm IST

* ಸ್ಪಿನ್ನರ್ ವಿಭಾಗ: ಶುಭಾಂಗ್ ಹೆಗ್ಡೆ, ಬೆಳಗಾವಿ ಪ್ಯಾಂಥರ್ಸ್, 3 ಲಕ್ಷದ 5 ಸಾವಿರ.

Jul 21, 2018, 12:17 pm IST

* ಸ್ಪಿನ್ನರ್ ವಿಭಾಗ: ರಿಷಬ್ ಸಿಂಗ್, ಬಿಜಾಪುರ್ ಬುಲ್ಸ್ , 55 ಸಾವಿರ.

Jul 21, 2018, 12:15 pm IST

* ಸ್ಪಿನ್ನರ್ ವಿಭಾಗ: ಸೈಯದ್ ಕೆ., 20 ಸಾವಿರ, ಶಿವಮೊಗ್ಗ ಲಯನ್ಸ್.

Jul 21, 2018, 12:13 pm IST

* ದರ್ಶನ್ ಮಾಚಯ್ಯ, ಬೆಳಗಾವಿ ಪ್ಯಾಂಥರ್ಸ್, 20 ಸಾವಿರ.

Jul 21, 2018, 12:12 pm IST

* ರಾಮ್ ಸರಿಕ್, 45 ಸಾವಿರ, ಹುಬ್ಳಿ ಟೈಗರ್ಸ್.

Jul 21, 2018, 12:08 pm IST

* ಸೂರಜ್ ಕಾಮತ್, ಬಿಜಾಪುರ್ ಬುಲ್ಸ್, 40 ಸಾವಿರ.

Jul 21, 2018, 12:06 pm IST

* ಸೌರಭ್ ಗೌಡ, 50 ಸಾವಿರಕ್ಕೆ ಬೆಳಗಾವಿ ಪ್ಯಾಂಥರ್ಸ್ ಪಾಲಾಗಿದ್ದಾರೆ.

Jul 21, 2018, 12:03 pm IST

* ಶರಣ್ ಗೌಡ, 35 ಸಾವಿರ, ಬೆಂಗಳೂರು ಬ್ಲಾಸ್ಟರ್ಸ್.

Jul 21, 2018, 12:01 pm IST

* ಸಂಕಲ್ಪ್, 75 ಸಾವಿರಕ್ಕೆ ಶಿವಮೊಗ್ಗ ಲಯನ್ಸ್ ಖರೀದಿಸಿದೆ.

Jul 21, 2018, 11:58 am IST

* 70 ಸಾವಿರಕ್ಕೆ ಭರತ್ ದೂರಿ ಶಿವಮೊಗ್ಗ ಲಯನ್ಸ್ ಪಾಲಾಗಿದ್ದಾರೆ.

Jul 21, 2018, 11:56 am IST

* ಅಕ್ಷಯ್ ಎಸ್ ಎಲ್, 2.20 ಲಕ್ಷಕ್ಕೆ ಬಳ್ಳಾರಿ ಟಸ್ಕರ್ಸ್ ಸೇರಿದ್ದಾರೆ.

Jul 21, 2018, 11:53 am IST

* ವಿದ್ಯಾಧರ್ ಪಾಟೆಲ್, 1.30 ಲಕ್ಷಕ್ಕೆ ಹುಬ್ಳಿ ಟೈಗರ್ಸ್ ಪಾಲಾಗಿದ್ದಾರೆ.

Jul 21, 2018, 11:50 am IST

* ಕೆಪಿಎಲ್ ಪೂಲ್ Bಯ ಆಟಗಾರರ ಹರಾಜಿನಲ್ಲಿ ಜಹೋರ್ ಫರೋಕಿ, ಬಿಜಾಪುರ್ ಬುಲ್ಸ್ ಗೆ 1.60 ಲಕ್ಷಕ್ಕೆ ಹರಾಜಾಗಿದ್ದಾರೆ.

Jul 21, 2018, 11:30 am IST

* ಪೂಲ್-1ರ ಕೊನೆಯ ಆಟಗಾರ ಪ್ರತೀಕ್ ಜೈನ್, 4.30 ಲಕ್ಷಕ್ಕೆ ಮೈಸೂರ್ ವಾರಿಯರ್ಸ್ ಪಾಲಾಗಿದ್ದಾರೆ.

Jul 21, 2018, 11:27 am IST

* ಕೆವಿ ಸಿದ್ಧಾರ್ಥ್, 2.50 ಲಕ್ಷ, ಮೈಸೂರ್ ವಾರಿಯರ್ಸ್.

Jul 21, 2018, 11:24 am IST

* ನಾಗ ಭರತ್, 2.60 ಲಕ್ಷಕ್ಕೆ ಬಿಜಾಪುರ್ ಬುಲ್ಸ್ ಸೇರಿಕೊಂಡರು.

Jul 21, 2018, 11:22 am IST

* ರಿತೇಶ್ ಭಟ್ಕಳ್, 1.70 ಲಕ್ಷಕ್ಕೆ ಬಳ್ಳಾರಿ ಟಸ್ಕರ್ಸ್ ಪಾಲಾದರು.

Jul 21, 2018, 11:17 am IST

* ಪ್ರದೀಪ್ ಟಿ, 6.50 ಲಕ್ಷಕ್ಕೆ ಬಳ್ಳಾರಿ ಟಸ್ಕರ್ಸ್ ಫ್ರಾಂಚೈಸಿ ಸೇರಿಕೊಂಡರು.

Jul 21, 2018, 11:06 am IST

* ಕುತೂಹಲ ಮೂಡಿಸಿದ್ದ ರಾಬಿನ್ ಉತ್ತಪ್ಪ, 7.90 ಲಕ್ಷಕ್ಕೆ ಬೆಂಗಳೂರು ಬ್ಲಾಸ್ಟರ್ಸ್ ಪಾಲಾದರು.

Jul 21, 2018, 10:59 am IST

* ಅಭಿಮನ್ಯು ಮಿಥುನ್, ಶಿವಮೊಗ್ಗ ಲಯನ್ಸ್, 8.30 ಲಕ್ಷ ಬೃಹತ್ ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ಸದ್ಯಕ್ಕಿದು ಕೆಪಿಎಲ್ ನಲ್ಲಿ ದಾಖಲೆ ಬೆಲೆ.

Jul 21, 2018, 10:48 am IST

*ಅಮಿತ್ ವರ್ಮ, ಮೈಸೂರ್ ವಾರಿಯರ್ಸ್ 7.60 ಲಕ್ಷ ದಾಖಲೆ ಬೆಲೆಗೆ ಮಾರಾಟ.

Jul 21, 2018, 10:37 am IST

*ಶಿಶಿರ್ ಭವಾನೆ, ಬಿಜಾಪುರ್ ಬುಲ್ಸ್, 2.10 ಲಕ್ಷ.

Jul 21, 2018, 10:22 am IST

*ಶರತ್ ಎಚ್.ಎಸ್., ಬೆಳಗಾವಿ ಪ್ಯಾಂಥರ್ಸ್, 4.30 ಲಕ್ಷಕ್ಕೆ ಮಾರಾಟ.

Jul 21, 2018, 10:19 am IST

*ಮೊಹಮ್ಮದ್ ತಾಹ, ಹುಬ್ಳಿ ಟೈಗರ್ಸ್, 5 ಲಕ್ಷಕ್ಕೆ ಹರಾಜಾಗಿದ್ದಾರೆ.

Story first published: Saturday, July 21, 2018, 19:16 [IST]
Other articles published on Jul 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X