ಕೆಪಿಎಲ್ 2018: ಯಾರ್ಯಾರು ಯಾವ ತಂಡಕ್ಕೆ? ಮುಖ್ಯಾಂಶಗಳು ಇಲ್ಲಿವೆ

ಬೆಂಗಳೂರು, ಜುಲೈ 21: ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2018ರ ಪಂದ್ಯಾಟಕ್ಕಾಗಿ ಬೆಂಗಳೂರಿನ ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಜುಲೈ 21ರ ಶನಿವಾರ ನಡೆಯಿತು. ಹರಾಜಿನಲ್ಲಿ ಏಳು ಫ್ರಾಂಚೈಸಿಗಳು ಪಾಲ್ಗೊಂಡಿದ್ದು, ಮುಖ್ಯಾಂಶಗಳು, ತಂಡ ವಿವರಗಳು ಕೆಳಗಿವೆ.
ಆಗಸ್ಟ್ 15ರಿಂದ ಆರಂಭಗೊಳ್ಳಲಿರುವ, ಐಪಿಎಲ್ ಬಳಿಕದ ಅತ್ಯಾಕರ್ಷಣೀಯ ಈ ಕೆಪಿಎಲ್ ಪಂದ್ಯಾಟದಲ್ಲಿ ಒಟ್ಟು ಏಳು ತಂಡಗಳು ಕಾದಾಡಲಿವೆ. ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರ್ ವಾರಿಯರ್ಸ್, ಶಿವಮೊಗ್ಗ ಲಯನ್ಸ್, ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಅಖಾಡಕ್ಕಿಳಿಯಲಿವೆ.
ಮುಖ್ಯಾಂಶಗಳು
1. ಕೆಪಿಎಲ್ 2018ರ ಹರಾಜಿನಲ್ಲಿ ಅಭಿಮನ್ಯು, ಉತ್ತಪ್ಪ, ನಿಧೀಶ್ ದುಬಾರಿ ಆಟಗಾರರಾಗಿ ಗಮನ ಸೆಳೆದರು. ಅಭಿಮನ್ಯು ಮಿಥುನ್ ಅವರನ್ನು ಶಿವಮೊಗ್ಗ ಲಯನ್ಸ್ ಫ್ರಾಂಚೈಸಿ 8.30 ಲಕ್ಷ ದಾಖಲೆ ಬೆಲೆಗೆ ಖರೀದಿಸಿತು.
2. ಕುತೂಹಲ ಮೂಡಿಸಿದ್ದ ರಾಬಿನ್ ಉತ್ತಪ್ಪ ಹರಾಜಿನಲ್ಲಿ 7.90 ಲಕ್ಷಕ್ಕೆ ಬೆಂಗಳೂರು ಬ್ಲಾಸ್ಟರ್ಸ್ ಪಾಲಾದರು. ಈ ಕೆಪಿಎಲ್ ಸೀಸನ್ ನ ಎರಡನೇ ದುಬಾರಿ ಬೆಲೆ.
3. ಬ್ಯಾಟಿಂಗ್ ವಿಭಾಗದಲ್ಲಿ ನಿಧೀಶ್ ಎಂ 5.85 ಭರ್ಜರಿ ಮೊತ್ತಕ್ಕೆ ಬೆಳಗಾವಿ ಪ್ಯಾಂಥರ್ಸ್ ಪಾಲಾಗಿದ್ದಾರೆ. ಜೋನಾಥನ್ ಆರ್ ಅವರು 5.45 ಲಕ್ಷ ರೂ.ಗೆ ಶಿವಮೊಗ್ಗ ಲಯನ್ಸ್ ನಿಂದ ಖರೀದಿಸಲ್ಪಟ್ಟು ಗಮನ ಸೆಳೆದರು.
4. ಆಲ್ ರೌಂಡರ್ಸ್ ವಿಭಾಗದಲ್ಲಿ ಮೇಲು ಕ್ರಾಂತಿ ಕುಮಾರ್ ದುಬಾರಿ ಆಟಗಾರರಾಗಿ ಗುರುತಿಸಿಕೊಂಡಿದ್ದು, 3.50 ಲಕ್ಷ ರೂ. ಭರ್ಜರಿ ಮೊತ್ತಕ್ಕೆ ಹುಬ್ಳಿ ಟೈಗರ್ಸ್ ಪಾಲಾಗಿದ್ದಾರೆ. ಮತ್ತೊಬ್ಬ ಆಟಗಾರ ಸುನಿಲ್ ರಾಜು ಅವರು 3.50 ಲಕ್ಷ ರೂ. ಗೆ ಬಿಜಾಪುರ್ ಬುಲ್ಸ್ ಸೇರಿಕೊಂಡಿದ್ದಾರೆ.
5. ಖರೀದಿಯಾಗದೆ ಉಳಿದಿದ್ದ ಕೆ. ಗೌತಮ್, ವಿಶೇಷ ಆಸಕ್ತ ಫ್ರಾಂಚೈಸಿಗಳಿಗಾಗಿ ನಡೆದ ಸುತ್ತಿನಲ್ಲಿ 25 ಸಾವಿರ ರೂ.ಗೆ ಮೈಸೂರ್ ವಾರಿಯರ್ಸ್ ಪಾಲಾದರು.
ತಂಡಗಳು

1. ಮೈಸೂರು ವಾರಿಯರ್ಸ್
ಕೆ ಗೌತಮ್, ವಿಶ್ವನಾಥ್, ಮನೋಜ್ ಕೆ, ಕುಶಾಲ್, ಶರತ್ ಶ್ರೀನಿವಾಸ್, ಲವನಿತ್ ಸಿಸೋಡಿಯಾ, ರಾಜು ಭಟ್ಕಳ್, ಶೋಯೇಬ್ ಮ್ಯಾನೇಜರ್, ಅಮಿತ್ ವರ್ಮ, ಕೆವಿ ಸಿದ್ಧಾರ್ಥ್, ಪ್ರತೀಕ್ ಜೈನ್, (ಉಳಿಸಿಕೊಂಡ ಆಟಗಾರರು: (ಪೂಲ್ ಎ) ಸುಚಿತ್. (ಪೂಲ್ ಬಿ) ಮಂಜುನಾಥ್ ಎಸ್ಪಿ, ಭರೆತ್ ಎನ್ಪಿ, ವಿಶಾಕ್ ವಿಜಯ್ಕುಮಾರ್.

2. ಬಿಜಾಪುರ್ ಬುಲ್ಸ್
ಪ್ರವೀಣ್ ಕುಮಾರ್, ರುತುರಾಜ್, ಮೀರ್ ಕೆ ಅಬ್ಬಾಸ್, ಶ್ರೀಜಿತ್, ಅನುರಾಗ್, ಭವೇಶ್ ಎಂ, ಸುನಿಲ್ ರಾಜು, ಅಪ್ಪಣ್ಣ ಕೆಪಿ, ರಿಷಬ್ ಸಿಂಗ್, ಸೂರಜ್ ಕಾಮತ್, ಶಿಶಿರ್ ಭವಾನೆ, ನಾಗ ಭರತ್, ಜಹೋರ್ ಫರೋಕಿ, ಉಳಿಸಿಕೊಂಡ ಆಟಗಾರರು: (ಪೂಲ್ ಎ) ರೋನಿಟ್ ಮೋರ್, ಕೆಸಿ ಕ್ಯಾರಿಯಪ್ಪ, ನವೀನ್ ಎಮ್ಜಿ. (ಪೂಲ್ ಬಿ) ಭಾರತ್ ಚಿಪ್ಲಿ.

3. ಬೆಳಗಾವಿ ಪ್ಯಾಂಥರ್ಸ್
ವಿಷ್ಣು ಪ್ರಿಯನ್, ಅಮನ್ ಖಾನ್, ರಕ್ಷಿತ್ ಎಸ್, ನಿಧೀಶ್ ಎಂ, ನಿಕಿನ್ ಜೋಶ್, ಅಕ್ಷಯ್ ಬಲ್ಲಾಳ್, ಶ್ರೇಯಸ್ ಬಿಎಂ, ಶುಭಾಂಗ್ ಹೆಗ್ಡೆ, ದರ್ಶನ್ ಮಾಚಯ್ಯ, ಸೌರಭ್ ಗೌಡ, ಶರತ್ ಎಚ್.ಎಸ್, ಉಳಿಸಿಕೊಂಡ ಆಟಗಾರರು: (ಪೂಲ್ ಎ) ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ಸ್ಟಾಲಿನ್ ಹೂವರ್. (ಪೂಲ್ ಬಿ) ಅವಿನಾಶ್ ಡಿ.

4. ಬೆಂಗಳೂರು ಬ್ಲಾಸ್ಟರ್ಸ್
ರಾಬಿನ್ ಉತ್ತಪ್ಪ, ವಿಶ್ವನಾಥ್, ಅವಿನಾಶ್, ಕೆಬಿ ಪವನ್, ಗೌರವ್ ಧಿಮಾನ್, ವಿನೀತ್ ಯಾದವ್, ಭರತ್ ದೇವರಾಜ್, ಅರ್ಷ್ ದೀಪ್ ಸಿಂಗ್, ಆನಂದ್ ದೊಡ್ಡಮನಿ, ಮನೋಜ್ ಭಂಡಾಜೆ, ಪಲ್ಲವ್ ಕುಮಾರ್, ಶರಣ್ ಗೌಡ, ಉಳಿಸಿಕೊಂಡ ಆಟಗಾರರು: (ಪೂಲ್ ಎ) ಪವನ್ ದೇಶ್ಪಾಂಡೆ, ಮಿತ್ರಕಾಂತ್ ಯಾದವ್. (ಪೂಲ್ ಬಿ) ಕೌಶಿಕ್ ವಿ, ಅಭಿಷೇಕ್ ಭಟ್.

5. ಶಿವಮೊಗ್ಗ ಲಯನ್ಸ್
ಅಭಿಲಾಷ್ ಶೆಟ್ಟಿ, ಹೊಯ್ಸಳ, ಪೃಥ್ವಿ ವರದರಾಜನ್, ಪೃಥ್ವಿರಾಜ್ ಶೇಖಾವತ್, ಆದಿತ್ಯ, ಕಿಶೋರ್ ಕಾಮತ್, ಸೈಯದ್ ಕೆ, ಅಭಿಮನ್ಯು ಮಿಥುನ್, ಭರತ್ ದೂರಿ, ಸಂಕಲ್ಪ್, ಉಳಿಸಿಕೊಂಡ ಆಟಗಾರರು: (ಪೂಲ್ ಎ) ಅನಿರುೃತ ಜೋಶಿ. (ಪೂಲ್ ಬಿ) ಮೊಹಮ್ಮದ್. ಸರ್ಫರಾಜ್ ಅಶ್ರಫ್, ನಿಹಾಲ್ ಉಲ್ಲಾಲ್, ಲಿಯಾನ್ ಖಾನ್.

6. ಹುಬ್ಳಿ ಟೈಗರ್ಸ್
ಶಿವರಾಜ್, ರಾಹುಲ್ ನಾಯ್ಕ್, ಸುನಿಲ್ ಕುಮಾರ್, ಮಯಾಂಕ್ ಅಗರ್ವಾಲ್, ನಿತಿನ್ ಬಿಲ್ಲೆ, ಸುಜಿತ್, ಅನಿಲ್ ಐಜಿ, ಸೂರಜ್, ರಾಮ್ ಸರಿಕ್, ಮೊಹಮ್ಮದ್ ತಾಹ, ವಿದ್ಯಾಧರ್ ಪಾಟೆಲ್, ಉಳಿಸಿಕೊಂಡ ಆಟಗಾರರು: (ಪೂಲ್ ಎ) ಅಭಿಷೇಕ್ ರೆಡ್ಡಿ, ಪ್ರವೀಣ್ ದುಬೆ, ವಿನಯ್ ಕುಮಾರ್. (ಪೂಲ್ ಬಿ) ಅಭಿಷೇಕ್ ಸಖುಜಾ.

7. ಬಳ್ಳಾರಿ ಟಸ್ಕರ್ಸ್
ಸ್ವಪ್ನಿಲ್, ಮೊಹಮ್ಮದ್ ಸೈಫ್, ರೋಹಿತ್ ಸಬರ್ವಾಲ್, ನಿಶ್ಚಲ್ ಡಿ., ಸತೀಶ್ ಭಾರದ್ವಾಜ್, ರಜತ್ ಹೆಗ್ಡೆ, ಅಬ್ರಾರ್ ಕಾಝಿ, ಪ್ರದೀಪ್ ಟಿ, ರಿತೇಶ್ ಭಟ್ಕಳ್, ಅಕ್ಷಯ್ ಎಸ್ ಎಲ್,
ಉಳಿಸಿಕೊಂಡ ಆಟಗಾರರು: (ಪೂಲ್ ಎ) ಸಿಎಮ್ ಗೌತಮ್, ದೇವ್ದದ್ ಪಾಡಿಕಲ್. (ಪೂಲ್ ಬಿ) ರೋಹನ್ ಕದಮ್, ಅಭಿನವ್ ಮನೋಹರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications