Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಪಿಎಲ್ : ಬಿಜಾಪುರ ಬುಲ್ಸ್ ತಂಡಕ್ಕೆ ಭರತ್ ಚಿಪ್ಳಿ ನಾಯಕ

ಬೆಂಗಳೂರು, ಆಗಸ್ಟ್ 17: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2017ರ ಪ್ರಮುಖ ತಂಡ ಬಿಜಾಪುರ್ ಬುಲ್ಸ್ ಗೆ ಭರತ್ ಚಿಪ್ಳಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಹರಾಜಿನ ನಂತರ ಯಾರು ಯಾವ ತಂಡದಲ್ಲಿದ್ದಾರೆ?

2005ರಲ್ಲಿ ಕರ್ನಾಟಕ ಪರ ಆಡಲು ಆರಂಭಿಸಿದ ಭರತ್ ಚಿಪ್ಳಿ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ಆಡಿದರು. ಡೆಕ್ಕನ್ ಚಾರ್ಜರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿರುವ ಅನುಭವ ಹೊಂದಿದ್ದಾರೆ.

KPL 2017 : Bharath Chipli appointed Bijapur Bulls captain

ಬಿಜಾಪುರ್ ಬುಲ್ಸ್ ತಂಡದ ಮಾಲೀಕ ಕಿರಣ್ ಕಟ್ಟಿಮನಿ ಅವರು ಮಾತನಾಡಿ, ಭರತ್ ಚಿಪ್ಳಿ ಅವರು ದಶಕಗಳ ಕಾಲ ವಿವಿಧ ಮಾದರಿ ಕ್ರಿಕೆಟ್ ನಲ್ಲಿ ಆಡಿದ ಅನುಭವ ಹೊಂದಿದ್ದು, ಯುವ ಆಟಗಾರರಿಗೆ ಅವರ ಜತೆ ಆಡುವ ಉತ್ತಮ ಅವಕಾಶ ಸಿಗಲಿದೆ ಎಂದಿದ್ದಾರೆ.

ಮೈಸೂರು ತಂಡಕ್ಕೆ ಕರುಣ್ ನಾಯರ್ ನಾಯಕ

6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ.

ಕಳೆದ ವರ್ಷದವರೆಗೆ ಕೆಪಿಎಲ್ ನಲ್ಲಿ ಆಡಿದ್ದ ಉದ್ಯಮಿ ಅಶೋಕ್ ಖೇಣಿ ಒಡೆತನದ ರಾಕ್ ಸ್ಟಾರ್ ತಂಡವು ಈ ಬಾರಿಯ ಕೆಪಿಎಲ್ ನಿಂದ ಹೊರಗುಳಿಯಲಿದೆ.

ಈ ಬಾರಿ ಕೆಪಿಎಲ್ ಗೆ ಹೊಸ ತಂಡ 'ಕಲ್ಯಾಣಿ ಬ್ಲಾಸ್ಟರ್ಸ್ ಬೆಂಗಳೂರು' ಹೆಸರಿನ ಹೊಸ ಫ್ರಾಂಚೈಸಿಯು ಕಾಲಿಡಲಿದೆ.ಪ್ರತಿ ತಂಡಗಳು ನಾಲ್ಕು ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದು ಹಾಗೂ ಪ್ರತಿ ತಂಡದಲ್ಲಿ 18 ಮಂದಿ ಆಟಗಾರರಿರಬಹುದು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+