ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್, ಮೋಸದಾಟಕೆ ಹೆಣ್ಣಿನಾಸೆ ತಳುಕು!

ಬೆಂಗಳೂರು, ನವೆಂಬರ್ 20: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿ ಇತ್ತೀಚೆಗೆ ಕೆಲ ಆಟಗಾರರನ್ನು ಬಂಧಿಸಲಾಗಿತ್ತು. ಆದರೆ ಪ್ರಕರಣಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಫಿಕ್ಸಿಂಗ್ ಹಿಂದೆ ಹನಿ ಟ್ರ್ಯಾಪ್ ಕೈವಾಡವಿದೆ ಎಂಬ ಮಾಹಿತಿ ಲಭಿಸಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ ರಾವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಟಗಾರರನ್ನು ಮೊದಲು ಹನಿಟ್ರ್ಯಾಪ್‌ನಲ್ಲಿ ಬೀಳಿಸಲಾಗಿದೆ. ಬಳಿಕ ಅವರಿಂದ ಮ್ಯಾಚ್ ಫಿಕ್ಸಿಂಗ್ ಮಾಡಿಸಲಾಗಿದೆ ಎಂಬ ಮಾಹಿತಿಯನ್ನು ರಾವ್ ಒದಗಿಸಿದ್ದಾರೆ.
ಕೆಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪದಡಿಯಲ್ಲಿ ಆಟಗಾರರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕೆಎಸ್‌ಸಿಎ ಮತ್ತು ಕೆಪಿಎಲ್ ಎಲ್ಲಾ ಫ್ರಾಂಚೈಸಿಗಳಿಗೆ ಪೊಲೀಸ್ ನೋಟಿಸ್ ನೀಡಲಾಗಿದೆ.

ಬಂಧನ, ವಿಚಾರಣೆ
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಮ್ಮ ಶಿವಮೊಗ್ಗ ತಂಡದ ಆಟಗಾರ ನಿಶಾಂತ್ ಸಿಂಗ್ ಶೇಖಾವತ್ (29) ಬಂಧನ ಬಳಿಕ, ಇನ್ನಿಬ್ಬರು ಅನುಭವಿ ಆಟಗಾರರಾದ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್, ಅಬ್ರಾರ್ ಕಾಜಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.

ಹನಿಟ್ರ್ಯಾಪ್ ಜಾಲದ ಸುಳಿವು
ಫಿಕ್ಸಿಂಗ್ ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಇದರ ಹಿಂದೆ ಹನಿಟ್ರ್ಯಾಪ್ ಜಾಲವಿರುವ ಸುಳಿವು ದೊರೆತಿದೆ. ಆಟಗಾರರು ನೀಡಿರುವ ಮಾಹಿತಿಯನ್ನಾಧರಿಸಿ ಪೊಲೀಸರು ಇನ್ನಷ್ಟು ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಫಿಕ್ಸಿಂಗ್ ಪ್ರಕರಣದಡಿ 7 ಆಟಗಾರರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನೂ ಬಂಧಿಸುವುದಾಗಿ ಭಾಸ್ಕರ್ ರಾವ್ ಹೇಳಿದ್ದಾರೆ.

ಆಟಗಾರ ಆತ್ಮಹತ್ಯೆಗೆ ಶರಣು
ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲಕ ಅಲಿ ಅಶ್ವಾಕ್ ತಾರ್ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ತಮಿಳುನಾಡು ಪ್ರಿಮಿಯರ್ ಲೀಗ್ನ ಚಂದ್ರಶೇಖರ್ ಎಂಬ ಆಟಗಾರ ಬೆಟ್ಟಿಂಗ್ ವಿಚಾರ ಹೊರಬರುವ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿದ್ದ ಎಂಬ ವಿಚಾರ ಈ ಹಿಂದೆ ಹೊರ ಬಿದ್ದಿತ್ತು.

ಫಿಕ್ಸಿಂಗ್‌ಗೆ ಹನಿಟ್ರ್ಯಾಪ್ ತಳುಕು
ಮೈಸೂರಿನಲ್ಲಿ ನಡೆದಿದ್ದ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಳಿ ಟೈಗರ್ಸ್ ನಡುವಿನ ಕೆಪಿಎಲ್ 2019 ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧ ಬಳ್ಳಾರಿ ಟಸ್ಕರ್ಸ್ ತಂಡದ ಕಪ್ತಾನ ಗೌತಮ್ ಹಾಗೂ ಆಲ್‌ರೌಂಡರ್ ಅಬ್ರಾರ್ ಖಾಜಿರನ್ನು ವಾರಗಳ ಹಿಂದೆಯೇ ಬಂಧಿಸಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹನಿಟ್ರ್ಯಾಪ್ ತಳುಕು ಹಾಕಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications