For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಂ ಬಂಧನ

KPL Match-Fixing Scandal: Central Crime Branch Arrests Haryana-Based International Bookie

ಬೆಂಗಳೂರು, ನವೆಂಬರ್ 10: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಂ ಎಂಬಾತನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಹಲವರ ಬಂಧನವಾಗಿದ್ದು, ವಿಚಾರಣೆ ತೀವ್ರಗೊಂಡಿದೆ.

ಇಬ್ಬರು ಸ್ಟಾರ್ ಆಟಗಾರರ ಬಂಧನ ಬಳಿಕ ಸಯ್ಯಂ ವಿರುದ್ಧ ಲುಕ್ ಔಟ್ ನೊಟೀಸ್ ಹೊರಡಿಸಲಾಗಿತ್ತು. ವೆಸ್ಟ್ ಇಂಡೀಸ್ ನಲ್ಲಿ ತಲೆಮರೆಸಿಕೊಂಡಿದ್ದ ಸಯ್ಯಂ ಕಳೆದ ಶನಿವಾರದಂದು ದೆಹಲಿಗೆ ವಾಪಸ್ ಆಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದರು. ಹರಿಯಾಣ ಮೂಲದ ಬುಕ್ಕಿಯಾಗಿರುವ ಸಯ್ಯಂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್​ ಆಟಗಾರರನ್ನು ಬಲೆಗೆ ಬೀಳಿಸಿಕೊಂಡು ಪಂದ್ಯಗಳನ್ನು ಫಿಕ್ಸ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್, ಅಬ್ರಾರ್ ಕಾಜಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ,1 ಓವರ್‌ಗೆ 10 ರನ್ ನೀಡಿದರೆ 5 ಲಕ್ಷ ರೂ. ನೀಡುವ ಫಿಕ್ಸಿಂಗ್‌ ಅನ್ನು ಸಯ್ಯಂ ನಡೆಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ, ಮಾಡೆಲ್ ಗಳನ್ನು ಬಳಸಿಕೊಂಡು ಆಟಗಾರರನ್ನು ಸೆಳೆಯುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ ಎಂದು ಸಿಸಿಬಿ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

 2019ರ ಕೆಪಿಎಲ್ ಫೈನಲ್ ಪಂದ್ಯವೇ ಫಿಕ್ಸ್

2019ರ ಕೆಪಿಎಲ್ ಫೈನಲ್ ಪಂದ್ಯವೇ ಫಿಕ್ಸ್

2019ರ ಆಗಸ್ಟ್ 31ರಂದು ಮೈಸೂರಿನ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ ಫೈನಲ್ ಪಂದ್ಯವೇ ಫಿಕ್ಸ್ ಆಗಿತ್ತು ಎಂದು ಸಿಸಿಬಿ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಈ ಎರಡು ತಂಡದ ಆಟಗಾರರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಕರ್ನಾಟಕದ ಪರ ರಣಜಿ ಆಡುತ್ತಿದ್ದ ಸಿಎಂ ಗೌತಮ್ ಅವರು ಗೋವಾ ತಂಡಕ್ಕೆ ವಲಸೆ ಹೋಗಿ ಆ ತಂಡದ ನಾಯಕರಾಗಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಆರ್ ಸಿಬಿ ಪರ ಕೂಡಾ ಆಡಿದ್ದಾರೆ.

 ನಮ್ಮ ಶಿವಮೊಗ್ಗ ತಂಡದ ನಿಶಾಂತ್

ನಮ್ಮ ಶಿವಮೊಗ್ಗ ತಂಡದ ನಿಶಾಂತ್

ನಮ್ಮ ಶಿವಮೊಗ್ಗ ತಂಡದ ನಿಶಾಂತ್ ಬಂಧಿಸಿದ್ದ ಸಿಸಿಬಿ, ಆತ ಚಂದೀಗಢ ಮೂಲದ ಬುಕ್ಕಿ ಮನೋಜ್ ಕುಮಾರ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ನಿಶಾಂತ್, 2018ರ ಕೆಪಿಎಲ್ ಏಳನೇ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ಕೋಚ್ ವಿನುಪ್ರಸಾದ್​ ನನ್ನು ಕೂಡಾ ಈ ಜಾಲದಲ್ಲಿ ಸಿಲುಕಿಸಿದ್ದ ಎಂದಿದ್ದಾರೆ. 2015ರಿಂದ ಕೆಪಿಎಲ್​ನಲ್ಲಿ ಆಡುತ್ತಿರುವ ನಿಶಾಂತ್, ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಹಾಗೂ ಶಿವಮೊಗ್ಗ ತಂಡದಲ್ಲಿ ಆಡಿದ್ದಾರೆ. 2018ರ ಕೆಪಿಎಲ್ ನಲ್ಲಿ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಹುಬ್ಬಳ್ಳಿ ಟೈಗರ್ಸ್- ಬೆಂಗಳೂರು ಬ್ಲಾಸ್ಟರ್ಸ್ ನಡುವಿನ ಪಂದ್ಯ ಫಿಕ್ಸ್ ಮಾಡಿದ ಆರೋಪವಿದೆ.

 34 ಕ್ರಿಕೆಟರ್ಸ್ ಗೆ ಸಮನ್ಸ್ ಜಾರಿ

34 ಕ್ರಿಕೆಟರ್ಸ್ ಗೆ ಸಮನ್ಸ್ ಜಾರಿ

ಶಿವಮೊಗ್ಗ, ಬೆಳಗಾವಿ, ಬೆಂಗಳೂರು ಸೇರಿದಂತೆ ವಿವಿಧ ತಂಡಗಳ 34 ಕ್ರಿಕೆಟರ್ಸ್ ಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಕೆಪಿಎಲ್ ಜಾರಿಯಲ್ಲಿರುವಾಗಲೇ ಬೆಳಗಾವಿ ತಂಡದ ಮಾಲೀಕ ಅಲಿ ಅವರು ನಿಯಮ ಮೀರಿ ಬುಕ್ಕಿಗಳ ಜೊತೆ ಸಂಪರ್ಕ ಸಾಧಿಸಿದ್ದರು ಎಂಬ ಆರೋಪವಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.

 ವ್ಯವಸ್ಥಿತವಾಗಿ ಮ್ಯಾಚ್ ಫಿಕ್ಸಿಂಗ್ ದಂಧೆ

ವ್ಯವಸ್ಥಿತವಾಗಿ ಮ್ಯಾಚ್ ಫಿಕ್ಸಿಂಗ್ ದಂಧೆ

ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಶ್ಫಾಕ್ ಅಲಿ, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ನಮ್ಮ ಶಿವಮೊಗ್ಗದ ನಿಶಾಂತ್ ಸಿಂಗ್ ಬೆಂಗಳೂರು ಬ್ಲಾಸ್ಟರ್ ಕೋಚ್ ವಿನು ಪ್ರಸಾದ್, ಬ್ಯಾಟ್ಸ್ ಮನ್ ವಿಶ್ವನಾಥ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ದುಬೈ ಮೂಲದ ಬುಕ್ಕಿಯನ್ನು ಸಂಪರ್ಕಿಸಿದ್ದ ಅಲಿ, ಕೆಪಿಎಲ್ ನಲ್ಲಿ ವ್ಯವಸ್ಥಿತವಾಗಿ ಮ್ಯಾಚ್ ಫಿಕ್ಸಿಂಗ್ ದಂಧೆ ನಡೆಸುತ್ತಿದ್ದ ಎಂಬ ಆರೋಪವಿದೆ.

Story first published: Sunday, November 10, 2019, 18:17 [IST]
Other articles published on Nov 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+