Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟರ್ ಕೃನಾಲ್ ಪಾಂಡ್ಯ ಕಲ್ಯಾಣ, ಶುಭ ಹಾರೈಸಿದ ಸಚಿನ್

ಮುಂಬೈ, ಡಿಸೆಂಬರ್ 28: ಟೀಂ ಇಂಡಿಯಾದ ಆಟಗಾರರು ಒಬ್ಬರಿಂದೊಬ್ಬರು ಹಸೆಮಣೆ ಏರುತ್ತಿದ್ದಾರೆ. ವೇಗಿ ಜಹೀರ್ ಖಾನ್, ನಾಯಕ ವಿರಾಟ್ ಕೊಹ್ಲಿ ಸಪ್ತಪದಿ ತುಳಿದ ಬೆನ್ನಲ್ಲಿಯೇ ಮತ್ತೊಬ್ಬ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅವರು ಸಹೋದರ ಕೃನಾಲ್ ಪಾಂಡ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೃನಾಲ್ ಪಾಂಡ್ಯಾ ತಮ್ಮ ಬಹುಕಾಲದ ಗೆಳತಿ ಪಂಖೂಡಿ ಶರ್ಮಾರನ್ನ ವರಿಸಿದ್ದಾರೆ. ವಿವಾಹ ಸಮಾರಮಭದಲ್ಲಿ ಕ್ರಿಕೆಟರ್ಸ್, ಸಿನಿಮಾ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡು ನವ ದಂಪತಿಗಳಿಗೆ ಶುಭಹಾರೈಸಿದರು.

ಕ್ರಿಕೆಟರ್ ಗಳಾದ ಬ್ಯಾಟ್ಸ್ ಮನ್‌ ಮನೀಶ್ ಪಾಂಡೆ, ರೋಹಿತ್ ಶರ್ಮಾ, ಸಚಿನ್‌ ತೆಂಡೂಲ್ಕರ್‌ ಹಲವರು ಭಾಗವಹಿಸಿ ನವ ಜೋಡಿಗಳಿಗೆ ಶುಭ ಹಾರೈಸಿದರು. ಮತ್ತೊಂದೆಡೆ ಬಾಲಿವುಡ್‌ ನಟ ಅಮಿತಾಬ್ ಬಚ್ಚನ್‌ ಕೂಡ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಕೃನಾಲ್ ಹಾಗೂ ಪಂಖೂಡಿ ಶರ್ಮಾ ಜೋಡಿಗೆ ಅಭಿನಂದನೆಗಳನ್ನು ತಿಳಿಸದರು.

ಮುಂಬೈನ ಜೆಡಬ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿ ಡಿಸೆಂಬರ್ 26 ಕೃನಾಲ್ ಪಾಂಡ್ಯ ಮೆಹಂದಿ ಕಾರ್ಯಕ್ರಮದಲ್ಲಿ ಸಹೋದರ ಹಾರ್ದಿಕ್ ಪಾಂಡ್ಯ ಹಾಡಿಗೆ ಸಖತ್ ಸ್ಟೆಪ್ ಹಾಕಿ ಮಿಂಚಿದರು. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಶುಭ ಹಾರೈಸಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್

ಶುಭ ಹಾರೈಸಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್

ಉದಯೋನ್ಮುಖ ಆಟಗಾರ ಕೃನಾಲ್ ಪಾಂಡ್ಯ ಅವರ ವಿವಾಹ ಸಮಾರಂಭದಲ್ಲಿ ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಕೋರಿದರು.

ಕೃನಾಲ್ ಮದುವೆ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್

ಕೃನಾಲ್ ಮದುವೆ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್

ಬಾಲಿವುಡ್ ಸ್ಟಾರ್ ಆಕ್ಟರ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಸಹ ಕೃನಾಲ್ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಕೃನಾಲ್ ಹಾಗೂ ಪಂಖೂಡಿ ಶರ್ಮಾ ಜೋಡಿಗೆ ಅಭಿನಂದಿಸಿದರು.

ಮುಂಬೈ ಇಂಡಿಯನ್ಸ್ ಮಾಲೀಕ ಮುಖೇಶ್ ಅಂಬಾನಿ

ಮುಂಬೈ ಇಂಡಿಯನ್ಸ್ ಮಾಲೀಕ ಮುಖೇಶ್ ಅಂಬಾನಿ

ಮುಂಬೈ ಇಂಡಿಯನ್ಸ್ ಮಾಲೀಕ ಹಾಗೂ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರೂ ಕೂಡ ಕೃನಾಲ್ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.

ಅಣ್ಣನ ಮದುವೆಯಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ

ಅಣ್ಣನ ಮದುವೆಯಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ತಮ್ಮ ಅಣ್ಣನೊಂದಿಗೆ (ಕೃನಾಲ್ ಪಾಂಡ್ಯ) ತಾವು ಅರಿಶಿಣ ಹಚ್ಚಿಕೊಂಡು ಮದುವೆ ಕಾರ್ಯಕ್ರಮದಲ್ಲಿ ಬಾಲಿವುಡ್‌ ಹಾಡಿಗೆ ಸಖತ್ ಸ್ಟೆಪ್ ಹಾಕಿ ನೆರೆದಿದ್ದವರನ್ನು ರಂಜಿಸಿದರು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+