For Quick Alerts
ALLOW NOTIFICATIONS  
For Daily Alerts
 

ಕೆಎಸ್ ಸಿಎ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಫಜಲ್ ಖಲೀಲ್ ಆಯ್ಕೆ

KSCA: Fazal Khaleel is selection committee new chairman

ಬೆಂಗಳೂರು, ಮೇ 30: ಕರ್ನಾಟಕ ರಣಜಿ ಹಿರಿಯರ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮಾಜಿ ಆಟಗಾರ ಫಜಲ್ ಖಲೀಲ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಸ್ (ಕೆಎಸ್ ಸಿಎ) ಪ್ರಕಟಿಸಿದೆ.

22 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಫಜಲ್ ಖಲೀಲ್ ಅವರು ರಘುರಾಮ್ ಭಟ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಜೊತೆಗೆ ಹಿರಿಯರ ತಂಡ ಕೋಚ್ ಯರೇಗೌಡ ಹಾಗೂ ಎಸ್ ಅರವಿಂದ್ ಅವರನ್ನು ಇನ್ನೊಂದು ಅವಧಿಗೆ ಕೋಚ್ ಗಳಾಗಿ ಮುಂದುವರೆಸಲು ನಿರ್ಧರಿಸಲಾಗಿದೆ.

ಲಾಕ್ಡೌನ್ 4.0 ಮುಗಿಯುವ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ಸಮಿತಿ ಸಭೆ ನಡೆಸಿ ಕರ್ನಾಟಕದ ಹಿರಿಯರು, ಅಂಡರ್ 23, ಅಂಡರ್ 19 ತಂಡಕ್ಕೆ ಆಯ್ಕೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿದೆ. ಮೂರು ಹೊಸ ನೇಮಕಾತಿ ಪ್ರಕಟಿಸಲಾಗಿದೆ. ಪಂದ್ಯಾವಳಿ ಆಯೋಜನೆ, ಹೊಸ ವೇಳಾಪಟ್ಟಿ, ಕ್ರಿಕೆಟರ್ಸ್, ಸಿಬ್ಬಂದಿಗೆ ಮಾರ್ಗಸೂಚಿಗಳ ಬಗ್ಗೆ ಇನ್ನೂ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಹೊಸ ಆಯ್ಕೆ ಸಮಿತಿ ಹಾಗೂ ಕೋಚ್:
ಹಿರಿಯರ ತಂಡ:
ಫಜಲ್ ಖಲೀಲ್ (ಚೇರ್ಮನ್), ಬಿ ಸಿದ್ದರಾಮು, ಆನಂದ್ ಕಟ್ಟಿ, ರಮೇಶ್ ಹೆಜ್ಮಾಡಿ.
ಮುಖ್ಯ ಕೋಚ್: ಯರೇಗೌಡ, ಬೌಲಿಂಗ್ ಹಾಗೂ ಸಹಾಯಕ ಕೋಚ್: ಎಸ್ ಅರವಿಂದ್.

ಅಂಡರ್ 23 ತಂಡ:
ಫಜಲ್ ಖಲೀಲ್(ಚೇರ್ಮನ್), ಕೆ.ಎಲ್ ಅಶ್ವಥ್, ತೇಜ್ಪಾಲ್ ಕೊಥಾರಿ, ರಘುತ್ತಮ್ ನವಲಿ, ಎಂ.ಎಸ್ ರವೀಂದ್ರ(ಮೈಸೂರ್ ವಲಯ ಆಹ್ವಾನಿತ)
ಬ್ಯಾಟಿಂಗ್ ಕೋಚ್: ದೀಪಕ್ ಚೌಗುಲೆ, ಬೌಲಿಂಗ್ ಕೋಚ್ ಜಿ ಚೈತ್ರ

ಅಂಡರ್ 19 ತಂಡ:
ಆನಂದ್ ಕಟ್ಟಿ(ಚೇರ್ಮನ್), ಎ. ಆರ್ ಮಹೇಶ್, ಸಿ ರಾಘವೇಂದ್ರ, ಸಂತೋಷ್ ಕುಮಾರ್.
ಬ್ಯಾಟಿಂಗ್ ಕೋಚ್: ನಿಖಿಲ್ ಹಲ್ದಿಪುರ್, ಬೌಲಿಂಗ್ ಕೋಚ್: ಎನ್. ಸಿ ಅಯ್ಯಪ್ಪ

ಅಂಡ16 ಹಾಗೂ ಅಂಡರ್ 14:
ಎಚ್ ಸುರೇಂದ್ರ(ಚೇರ್ಮನ್), ಎಂ. ವಿ ಪ್ರಶಾಂತ್, ಎಚ್ ಚಂದ್ರಶೇಖರ್, ಎಸ್ ಪ್ರಕಾಶ್.
ಕೆ ಶಶಿಧರ್(ತುಮಕೂರು ವಲಯ ಆಹ್ವಾನಿತ)
ಕೋಚ್: ಸಿ ರಘು ಹಾಗೂ ರಾಜಶೇಖರ್ ಶಾನ್ ಬಾಲ್,

ಮಹಿಳಾ ತಂಡದ ಆಯ್ಕೆ ಸಮಿತಿ, ಕೋಚ್ :
ಹಿರಿಯರ ತಂಡ:
ಡಿ ಜಯಶ್ರೀ (ಅಧ್ಯಕ್ಷೆ), ಪುಷ್ಪಾ ಕುಮಾರ್, ಲೀನಾಪ್ರಸಾದ್, ಪಿ. ಜೆ ಹೇಮಲತಾ
ಕೋಚ್: ಮಮತಾ ಮಾಬೇನ್.

ಜ್ಯೂನಿಯರ್:
ಚಂದ್ರಿಕಾ ಶ್ರೀಧರ್ (ಅಧ್ಯಕ್ಷೆ), ಅಶ್ರಯಿ ರಾಮ್, ಅನುರಾಧ ಪ್ರಸಾದ್, ನಿವೇದಿತಾ ರೇಷ್ಮೆ

ಕೋಚ್: ಲಕ್ಷ್ಮಿ ಹರಿಹರನ್.

Story first published: Saturday, May 30, 2020, 17:37 [IST]
Other articles published on May 30, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+