For Quick Alerts
ALLOW NOTIFICATIONS  
For Daily Alerts
 

KSCA Maharaja Trophy: ಮಹಾರಾಜ ಟ್ರೋಫಿ ಹರಾಜಿನಲ್ಲಿ LR ಚೇತನ್ ದುಬಾರಿ ಆಟಗಾರ; 6 ತಂಡಗಳು ಹೀಗಿವೆ

ಗುರುವಾರ, ಜುಲೈ 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ KSCA ಟಿ20 ಹರಾಜಿನಲ್ಲಿ ಎಲ್ಆರ್ ಚೇತನ್ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. 8.2 ಲಕ್ಷ ರೂಪಾಯಿಗಳ ಅತಿ ಹೆಚ್ಚು ಬಿಡ್‌ನೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ ತಂಡ ಸೇರಿಕೊಂಡರು.

ಒಟ್ಟು 240 ಆಟಗಾರರ ಪೂಲ್‌ನಿಂದ, ಇತರ ದುಬಾರಿ ಆಟಗಾರರಲ್ಲಿ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್ ಮತ್ತು ಜಗದೀಶ್ ಸುಚಿತ್ ಸೇರಿದ್ದಾರೆ. ಅಸಾಧಾರಣ ಯುವ ಪ್ರತಿಭೆಗಳ ಪೈಕಿ ಮೈಸೂರು ವಾರಿಯರ್ಸ್ ತಂಡವು ಭರವಸೆಯ 18 ವರ್ಷದ ಸಮಿತ್ ದ್ರಾವಿಡ್ ಅವರನ್ನು 50 ಸಾವಿರ ರೂಪಾಯಿಗೆ ಪಡೆದುಕೊಂಡಿತು.

KSCA Maharaja Trophy T20 LR Chetan Becomes Highest Paid Player in Auction Here Is Full 6 Teams

ಹೆಚ್ಚುವರಿಯಾಗಿ, ಲುವ್ನಿತ್ ಸಿಸೋಡಿಯಾ, ಮೊಹಮ್ಮದ್ ತಾಹಾ ಮತ್ತು ಲವಿಶ್ ಕೌಶಲ್ ಕೂಡ ಅತ್ಯುತ್ತಮ ಮೊತ್ತಕ್ಕೆ ಮಾರಾಟವಾದರು. ಏಕೆಂದರೆ ಅವುರಲ್ಲಿ ಪ್ರತಿಯೊಬ್ಬರೂ ತಮ್ಮ ಮೂಲ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದಾರೆ.

ಭಾರತ ಮತ್ತು ಐಪಿಎಲ್ ಆಟಗಾರರನ್ನು ಒಳಗೊಂಡಿರುವ ಎ ವರ್ಗದಲ್ಲಿ ಹರಾಜು ಪ್ರಕ್ರಿಯೆ ಕೆಲವು ರೋಚಕ ಬಿಡ್‌ಗಳನ್ನು ಹೊಂದಿತ್ತು. ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಬಹುಮುಖ ಕೌಶಲ್ಯಗಳನ್ನು ಮಂಗಳೂರು ಡ್ರ್ಯಾಗನ್ಸ್ ಪಡೆದುಕೊಳ್ಳಲು 7.6 ಲಕ್ಷ ರೂಪಾಯಿ ವ್ಯಹಿಸಿ ಎ ವರ್ಗದಲ್ಲಿ ಅತ್ಯಂತ ದುಬಾರಿ ಖರೀದಿಯನ್ನಾಗಿ ಮಾಡಿತು.

KSCA Maharaja Trophy T20 LR Chetan Becomes Highest Paid Player in Auction Here Is Full 6 Teams

ಇನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿಯು ಅನುಭವಿ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಅವರನ್ನು 7.4 ಲಕ್ಷ ರೂಪಾಯಿ, ಆಲ್‌ರೌಂಡರ್ ಜಗದೀಶ್ ಸುಚಿತ್ 4.8 ಲಕ್ಷ ರೂಪಾಯಿ ಮತ್ತು ಪೂರ್ಣ ಫಿಟ್‌ನೆಸ್‌ನಲ್ಲಿಲ್ಲದ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು 1 ಲಕ್ಷ ರೂಪಾಯಿಗೆ ಖರೀದಿಸಿತು.

ಚಾಣಾಕ್ಷ ಲೆಗ್ ಸ್ಪಿನ್ನರ್ ಕೆಸಿ ಕಾರಿಯಪ್ಪ ಅವರನ್ನು ಹುಬ್ಬಳ್ಳಿ ಟೈಗರ್ಸ್ 4.2 ಲಕ್ಷ ರೂಪಾಯಿಗೆ ಖರೀಸಿದರೆ, ಪ್ರವೀಣ್ ದುಬೆ 6.8 ಲಕ್ಷ ರೂಪಾಯಿಗೆ ಗುಲ್ಬರ್ಗಾ ಮಿಸ್ಟಿಕ್ಸ್ ಪಾಲಾದರು. ಇನ್ನೂ ಚೇತರಿಸಿಕೊಳ್ಳುತ್ತಿರುವ ವಿಕೆಟ್‌ಕೀಪರ್-ಬ್ಯಾಟರ್ ಶರತ್ ಬಿಆರ್ ಅವರನ್ನು ಗುಲ್ಬರ್ಗಾ ಮಿಸ್ಟಿಕ್ಸ್ 1 ಲಕ್ಷ ರೂಪಾಯಿಗೆ ಪಡೆದರು.

ಕರ್ನಾಟಕದ ಹಿರಿಯ ಆಟಗಾರರನ್ನು ಒಳಗೊಂಡಿರುವ ಬಿ ವರ್ಗದ ದೊಡ್ಡ ಖರೀದಿಗಳಲ್ಲಿ, ಚೇತನ್ ಎಲ್ಆರ್ ಹರಾಜಿನ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ಬೆಂಗಳೂರು ಬ್ಲಾಸ್ಟರ್ಸ್ ತಂಡದಿಂದ 8.2 ಲಕ್ಷ ರೂಪಾಯಿ ಬೆಲೆಯನ್ನು ಪಡೆದಿದ್ದಾರೆ.

ಕಳೆದ ಋತುವಿನ ಅಗ್ರ ಸ್ಕೋರರ್‌ಗಳಲ್ಲಿ ಒಬ್ಬರಾದ ಲುವ್ನಿತ್ ಸಿಸೋಡಿಯಾ ಅವರನ್ನು ಗುಲ್ಬರ್ಗಾ ಮಿಸ್ಟಿಕ್ಸ್ 7.2 ಲಕ್ಷ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿತು. ಇದು ಈಗಾಗಲೇ ದೇವದತ್ ಪಡಿಕ್ಕಲ್ ಅವರನ್ನು ಒಳಗೊಂಡಿರುವ ಅಸಾಧಾರಣ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದೆ.

ಸ್ಫೋಟಕ ಬ್ಯಾಟರ್ ಮೊಹಮ್ಮದ್ ತಾಹಾ 6.6 ಲಕ್ಷ ರೂಪಾಯಿ ಬೆಲೆಯೊಂದಿಗೆ ಹುಬ್ಬಳ್ಳಿ ಟೈಗರ್ಸ್‌ಗೆ ಮರಳಿದರು. 23 ವರ್ಷದ ಸ್ಪೀಡ್‌ಸ್ಟರ್ ವಿದ್ಯಾಧರ್ ಪಾಟೀಲ್ ಹೆಚ್ಚಿನ ಬೇಡಿಕೆಯಲ್ಲಿದ್ದರು ಮತ್ತು ಅಂತಿಮವಾಗಿ ಮೈಸೂರು ವಾರಿಯರ್ಸ್ ತಂಡಕ್ಕೆ 6.4 ಲಕ್ಷ ರೂಪಾಯಿಗೆ ಮಾರಾಟವಾದರು.

ಸಿ ವರ್ಗದಲ್ಲಿ ಗೌತಮ್ ಮಿಶ್ರಾ 2 ಲಕ್ಷ ರೂಪಾಯಿಗೆ ಮೈಸೂರು ವಾರಿಯರ್ಸ್ ಸೇರಿದರೆ, ಸ್ಮರಣ್ ಆರ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೆ 3.15 ಲಕ್ಷ ರೂಪಾಯಿಗೆ ಮರಳಿದರು.

ಬೌಲಿಂಗ್ ಆಲ್‌ರೌಂಡರ್ ಅವಿನಾಶ್ ಡಿ ಅವರು ಶಿವಮೊಗ್ಗ ಲಯನ್ಸ್ ತಂಡಕ್ಕೆ 5.4 ಲಕ್ಷ ರೂಪಾಯಿಗೆ ದೊಡ್ಡ ಸೇರ್ಪಡೆಯಾದರೆ, ಜೊತೆಗೆ ರಾಜವೀರ್ ವಾಧ್ವಾ 2.2 ಲಕ್ಷ ರೂಪಾಯಿಗೆ ಸೇರಿಸಿಕೊಂಡಿತು.

ವೇಗಿ ಮೋನಿಶ್ ರೆಡ್ಡಿ ಮತ್ತು ಆಲ್‌ರೌಂಡರ್ ಯಶೋವರ್ಧನ್ ಪರಂತಪ್ ಅವರನ್ನು ಗುಲ್ಬರ್ಗಾ ಮಿಸ್ಟಿಕ್ಸ್ ತಲಾ 1.8 ಲಕ್ಷ ರೂಪಾಯಿಗೆ ಪಡೆದುಕೊಂಡಿತು. ಹೆಚ್ಚುವರಿಯಾಗಿ, ಹುಬ್ಬಳ್ಳಿ ಟೈಗರ್ಸ್ ತಿಪ್ಪಾರೆಡ್ಡಿ ಅವರನ್ನು 3.4 ಲಕ್ಷ ರೂಪಾಯಿ ಮತ್ತು ಕಾರ್ತಿಕೇಯ ಕೆಪಿ ಅವರನ್ನು 1.2 ಲಕ್ಷ ರೂಪಾಯಿಗೆ ಖರೀದಿಸಿತು.

ಮಹಾರಾಜ ಟ್ರೋಫಿ KSCA ಟಿ20 ಪೂರ್ಣ ತಂಡಗಳು

ಹುಬ್ಬಳ್ಳಿ ಟೈಗರ್ಸ್: ಮನೀಶ್ ಪಾಂಡೆ, ಶ್ರೀಜಿತ್ ಕೆಎಲ್, ವಿಧ್ವತ್ ಕಾವೇರಪ್ಪ, ಮನ್ವಂತ್ ಕುಮಾರ್ ಎಲ್, ಕಾರಿಯಪ್ಪ ಕೆಸಿ, ಮಹಮ್ಮದ್ ತಾಹಾ, ತಿಪ್ಪಾರೆಡ್ಡಿ, ಕಾರ್ತಿಕೇಯ ಕೆಪಿ, ಕುಮಾರ್ ಎಲ್ಆರ್, ಆದರ್ಶ್ ಪ್ರಜ್ವಲ್, ಕೃತಿಕ್ ಕೃಷ್ಣ, ಅನೀಶ್ವರ್ ಗೌತಮ್, ಮಾಧವ್ ಪ್ರಕಾಶ್ ಬಜಾಜ್, ಶ್ರೀಶ ಎಸ್ ಆಚಾರ್, ದಮನ್ ದೀಪ್ ಸಿಂಗ್, ಮಿತ್ರಕಾಂತ್ ಯಾದವ್, ನಿಶ್ಚಿತ್ ಪೈ, ರಿಷಿ ಬೋಪಣ್ಣ.

ಮೈಸೂರು ವಾರಿಯರ್ಸ್: ಕರುಣ್ ನಾಯರ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ಕಾರ್ತಿಕ್ ಎಸ್ಯು, ಸುಚಿತ್ ಜೆ, ಗೌತಮ್ ಕೆ, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ, ಹರ್ಷಿಲ್ ಧರ್ಮಾನಿ, ಗೌತಮ್ ಮಿಶ್ರಾ, ಧನುಷ್ ಗೌಡ, ಸಮಿತ್ ದ್ರಾವಿಡ್, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ಜಾಸ್ಪರ್ ಇಜೆ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸರ್ಫರಾಜ್ ಅಶ್ರಫ್.

ಶಿವಮೊಗ್ಗ ಲಯನ್ಸ್: ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್, ಕೌಶಿಕ್ ವಿ, ಶಿವರಾಜ್ ಎಸ್, ಪ್ರದೀಪ್ ಟಿ, ಹಾರ್ದಿಕ್ ರಾಜ್, ಧ್ರುವ ಪ್ರಭಾಕರ್, ಆನಂದ್ ದೊಡ್ಡಮನಿ, ರಾಜವೀರ್ ವಾಧ್ವಾ, ಅವಿನಾಶ್ ಡಿ, ಧೀರಜ್ ಮೋಹನ್, ಭರತ್ ಧುರಿ, ಆದಿತ್ಯ ವಿಶ್ವಕರ್ಮ, ಆದಿತ್ಯ ಮಣಿ, ರೋಹಿತ್ ಕೆ, ರೋಹನ್ ನವೀನ್, ಶರತ್ ಎಚ್ ಎಸ್, ಮೋಹಿತ್ ಬಿಎ.

ಗುಲ್ಬರ್ಗಾ ಮಿಸ್ಟಿಕ್ಸ್: ದೇವದತ್ ಪಡಿಕ್ಕಲ್, ವೈಶಾಕ್ ವಿಜಯ್‌ಕುಮಾರ್, ಸ್ಮರಣ್ ಆರ್, ಅನೀಶ್ ಕೆವಿ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ, ಶರತ್ ಬಿಆರ್, ಆದಿತ್ಯ ನಾಯರ್, ಮೋನಿಶ್ ರೆಡ್ಡಿ, ಶರಣ್ ಗೌಡ್, ಯಶೋವರ್ಧನ್ ಪರಂತಪ್, ನಾಥನ್ ಡ್ಮೆಲ್ಲೋ ಜೋಕಿಮ್, ಫೈಜಾನ್ ರಿಯಾಜ್, ರಿತೇಶ್ ಭಟ್ಕಳ್, ವಾಹಿದ್ ಫೈಜಾನ್ ಖಾನ್, ಅಭಿಷೇಕ್ ಪ್ರಭಾಕರ್, ಪೃಥ್ವಿ ಶೇಖಾವತ್, ಶಿಮೊನ್ ಲೂಯಿಜ್.

ಬೆಂಗಳೂರು ಬ್ಲಾಸ್ಟರ್ಸ್: ಶುಭಾಂಗ್ ಹೆಗ್ಡೆ, ಮಯಾಂಕ್ ಅಗರ್ವಾಲ್, ಮೊಹ್ಸಿನ್ ಖಾನ್, ಸೂರಜ್ ಅಹುಜಾ, ಅನಿರುದ್ಧ ಜೋಶಿ, ನವೀನ್ ಎಂಜಿ, ಪ್ರತೀಕ್ ಜೈನ್, ಚೇತನ್ ಎಲ್ಆರ್, ಮೇಲು ಕ್ರಾಂತಿ ಕುಮಾರ್, ಸಂತೋಖ್ ಸಿಂಗ್, ಆದಿತ್ಯ ಗೋಯಲ್, ರಕ್ಷಿತ್ ಎಸ್, ವರುಣ್ ರಾವ್ ಟಿಎನ್, ನಿರಂಜನ್ ನಾಯ್ಕ್, ಲವಿಶ್ ಕೌಶಲ್, ವರುಣ್ ಕುಮಾರ್ ಎಚ್‌ಸಿ, ಶಿಖರ್ ಶೆಟ್ಟಿ, ಭೀಮ್ ರಾವ್ ನವಲೆ.

ಮಂಗಳೂರು ಡ್ರಾಗನ್ಸ್: ರೋಹನ್ ಪಾಟೀಲ್, ಪಾರಸ್ ಗುರ್ಬಕ್ಸ್ ಆರ್ಯ, ಸಿದ್ಧಾರ್ಥ್ ಕೆವಿ, ನಿಕಿನ್ ಜೋಸ್, ಶ್ರೇಯಸ್ ಗೋಪಾಲ್, ಧೀರಜ್ ಜೆ ಗೌಡ, ದರ್ಶನ್ ಎಂಬಿ, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ತುಷಾರ್ ಸಿಂಗ್, ಲಂಕೇಶ್ ಕೆಎಸ್, ಸಮರ್ಥ್ ನಾಗರಾಜ್, ಸಂಕಲ್ಪ್ ಎಸ್ಎಸ್, ಅಭಿಲಾಷ್ ಶೆಟ್ಟಿ, ನಿಶ್ಚಿತ್ ರಾವ್, ಲೋಚನ್ ಎಸ್ ಗೌಡ, ಪ್ರಣವ್ ಭಾಟಿಯಾ, ಸಂಜಯ್ ಅಶ್ವಿನ್, ಸಾಗರ್ ಸೋಲಂಕಿ.

Story first published: Friday, July 26, 2024, 13:37 [IST]
Other articles published on Jul 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+