ಕರ್ನಾಟಕ ರಣಜಿ ಸಂಭಾವ್ಯ ತಂಡದಲ್ಲಿ ಕೆಪಿಎಲ್ ಸ್ಟಾರ್ಸ್
ಬೆಂಗಳೂರು, ಸೆಪ್ಟೆಂಬರ್ 04 : ಮುಂಬರುವ ರಣಜಿ ಋತುವಿನಲ್ಲಿ ಆಡಲಿರುವ ಕರ್ನಾಟಕದ ಸಂಭಾವ್ಯ ಆಟಗಾರರ ಸಂಭಾವ್ಯ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ(ಕೆಎಸ್ ಸಿಎ) ಪ್ರಕಟಿಸಿದೆ.
35 ಸದಸ್ಯರ ಈ ತಂಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಾರೆಗಳಾದ ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಆವರನ್ನು ಸೇರಿಸಲಾಗಿದೆ. ಉಳಿದಂತೆ ಕಳೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇಬ್ಬರು ಆಟಗಾರರಿಗೆ ಸ್ಥಾನ ಸಿಕ್ಕಿದೆ.

ಸದ್ಯ ಮೈಸೂರ್ ವಾರಿಯರ್ಸ್ ಪರ ಆಡುತ್ತಿರುವ ಅರ್ಜುನ್ ಹೊಯ್ಸಳ ಹಾಗೂ ಹುಬ್ಳಿ ಟೈಗರ್ಸ್ ಆಟಗಾರ ರಿತೇಶ್ ಭಟ್ಕಳ ಅವರು ಸ್ಥಾನ ಪಡೆದಿದ್ದಾರೆ.
ತಂಡ ಇಂತಿದೆ: ಕೆ.ಎಲ್ ರಾಹುಲ್, ಆರ್.ವಿನಯ್ ಕುಮಾರ್, ಮಯಂಕ್ ಅಗರವಾಲ್, ಆರ್.ಸಮರ್ಥ್, ಅಭಿಷೇಕ್ ರೆಡ್ಡಿ, ಕೆ.ಬಿ ಪವನ್, ಡಿ. ನಿಶ್ಚಲ್, ನಿಕಿನ್ ಜೋಸ್, ಮನೀಷ್ ಪಾಂಡೆ, ಕರುಣ್ ನಾಯರ್, ಶಿಶಿರ್ ಭವಾನೆ, ಪವನ್ ದೇಶ್ ಪಾಂಡೆ, ಮೀರ್ ಕೌನೆನ್ ಅಬ್ಬಾಸ್, ಕುನಾಲ್ ಕಪೂರ್, ಸುನಿಲ್ ರಾಜು, ಅಮಿತ್ ವರ್ಮಾ, ಅನಿರುದ್ಧ ಎ.ಜೋಶಿ, ಸಿ.ಎಮ್ ಗೌತಮ್ (ವಿಕೆಟ್ ಕೀಪರ್), ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್ ), ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ಡೇವಿಡ್ ಮಥಾಯಿಸ್, ಜೆ.ಸುಚಿತ್, ಮಿತ್ರಕಾಂತ್ ಯಾದವ್, ಕೆ.ಗೌತಮ್, ಎ.ಮಿಥುನ್, ಎಸ್.ಅರವಿಂದ್, ಪ್ರಸಿದ್ಧ ಕೃಷ್ಣ, ಟಿ.ಪ್ರದೀಪ್, ರೋನಿತ್ ಮೋರೆ, ಪ್ರತೀಕ್ ಜೈನ್, ಎಚ್.ಎಸ್.ಶರತ್, ಅರ್ಜುನ್ ಹೊಯ್ಸಳ, ರಿತೇಶ್ ಭಟ್ಕಳ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications