ಈ ಬೌಲರ್ ಕಂಜೂಸ್, ರನ್ ನೀಡದೆ 6 ವಿಕೆಟ್ ಗಳಿಸವ್ನೆ
ಬೆಂಗಳೂರು, ಜನವರಿ 17: ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ(ಕೆಎಸ್ಸಿಎ) ಆಯೋಜನೆಯ ಕ್ಲಬ್ ಕ್ರಿಕೆಟ್ ಟಿ20 ಪಂದ್ಯದಲ್ಲಿ ಹೊಸ ದಾಖಲೆಯನ್ನು ಸ್ಪಿನ್ನರ್ ಸರ್ಫ್ರಾಜ್ ಅಶ್ರಫ್ ಬರೆದಿದ್ದಾರೆ. ನಗರದ ಯಂಗ್ ಪಯೋನೀರ್ ಕ್ರಿಕೆಟ್ ಕ್ಲಬ್ ತಂಡದ ಸ್ಪಿನ್ನರ್ ಅಶ್ರಫ್, ಒಂದೇ ಒಂದು ರನ್ ನೀಡದೆ ಎದುರಾಳಿ ತಂಡದ 6 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
ಸರ್ಫ್ರಾಜ್ ಅವರು ಟಿ20 ಪಂದ್ಯದಲ್ಲಿ ಮೂರೂ ಓವರ್ಗಳನ್ನು ಎಸೆದಿದ್ದು, ಮೂರು ಮೇಡನ್ ಆಗಿದ್ದು, ಹ್ಯಾಟ್ರಿಕ್ ಸೇರಿದಂತೆ 6 ವಿಕೆಟ್ ಪಡೆದಿದ್ದಾರೆ. ಈ ಮೂಲಕ ತಂಡದ 207 ರನ್ಗಳ ಭರ್ಜರಿ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.

ಕೆಎಸ್ಸಿಎ ಕ್ಲಬ್ ತಂಡಗಳ ಟಿ20 ಟೂರ್ನಿಯ ಪಂದ್ಯ ಸೋಮವಾರ ನಡೆಯಿತು. ಯಂಗ್ ಪೈನೀರ್ ಸಿಸಿ ತಂಡ 4 ವಿಕೆಟ್ಗೆ 264 ರನ್ ಪೇರಿಸಿತು. ನಂತರ ಮರ್ಕೆರಾ ಯೂತ್ ಸಿಸಿ ತಂಡಕ್ಕೆ ಸರ್ಫ್ರಾಜ್ ಆಘಾತ ನೀಡಿ, ಸೋಲಿನ ಕಹಿ ಉಣಿಸಿದರು.
14.3 ಓವರ್ಗಳಲ್ಲಿ ಮರ್ಕೆರಾ ಸಿಸಿ ಕೇವಲ 57ರನ್ಗಳಿಗೆ ಆಲೌಟ್ ಆಯಿತು. ಬ್ಯಾಟಿಂಗ್ನಲ್ಲೂ ಸ್ಪೋಟಕ ಪ್ರದರ್ಶನ ನೀಡಿದ್ದ ಸರ್ಫ್ರಾಜ್ 40 ರನ್ ಗಳಿಸಿದ್ದರು. ಸರ್ಫ್ರಾಜ್ ಕಳೆದ ಕೆಪಿಎಲ್ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಆಡಿದ್ದರು.
ಯಂಗ್ ಪೈನೀರ್ ಸಿಸಿ: 20 ಓವರ್ಗಳಲ್ಲಿ 4 ವಿಕೆಟ್ಗೆ 264 (ಸರ್ಫ್ರಾಜ್ ಅಶ್ರಫ್ 40, ದೀಪರ್ 74, ಕಿರಣ್ ಎಚ್ಬಿ 70, ಎನ್.ಸ್ವಾಮಿ 56ಕ್ಕೆ 2), ಮರ್ಕೆರಾ ಯೂತ್ ಸಿಸಿ: 14.3 ಓವರ್ಗಳಲ್ಲಿ 57 (ಸರ್ಫ್ರಾಜ್ 0ಕ್ಕೆ 6, ಮದನ್ 21ಕ್ಕೆ 3).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications