ಶೇನ್ ವಾರ್ನ್, ಚಾಹಲ್ ದಾಖಲೆ ಅಳಿಸಿದ ಕುಲ್‌ದೀಪ್ ಯಾದವ್
ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 17 ರನ್‌ಗಳಿಂದ ಭಾರತ ಗೆದ್ದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಕುಲ್‌ದೀಪ್ ಯಾದವ್ 4 ವಿಕೆಟ್ ಪಡೆದು ಬೀಗಿದರು. ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಕಮಾಲ್ ಪ್ರದರ್ಶನ ನೀಡಿದರೆ, ಬೌಲಿಂಗ್‌ನಲ್ಲಿ ಕುಲ್‌ದೀಪ್ ಯಾದವ್ ಅಬ್ಬರಿಸಿದರು. ಕುಲ್‌ದೀಪ್ ಬೌಲಿಂಗ್‌ನಲ್ಲಿ ಮತ್ತೊಮ್ಮೆ ತಂಡಕ್ಕೆ ಆಧಾರವಾದರು. ಈ ಪಂದ್ಯದಲ್ಲಿ ಕುಲ್‌ದೀಪ್ 4 ವಿಕೆಟ್ ಪಡೆಯುತ್ತಲೇ ಆಸೀಸ್ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಹಾಗೂ ಯುಜುವೇಂದ್ರ ಚಾಹಲ್ ಅವರ ದಾಖಲೆಯನ್ನು ಮುರಿದರು.
ಟೆಸ್ಟ್ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಬೌಲಿಂಗ್‌ನಲ್ಲಿ ಪ್ರದರ್ಶನ ನೀಡುತ್ತಿರುವ ಕುಲ್‌ದೀಪ್ ಯಾದವ್, ಏಕದಿನ ಕ್ರಿಕೆಟ್‌ನಲ್ಲೂ ಮಿಂಚುತ್ತಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 4 ವಿಕೆಟ್ ಪಡೆಯುತ್ತಲೇ ಕುಲ್‌ದೀಪ್ ದೊಡ್ಡ ಸಾದನೆಯನ್ನು ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 4 ಬಾರಿ ಶೇನ್ ವಾರ್ನ್ ಹಾಗೂ ಯುಜುವೇಂದ್ರ ಚಹಾಲ್ ಅವರು 3 ಬಾರಿ ನಾಲ್ಕಕ್ಕೂ ಹೆಚ್ಚು ವಿಕೆಟ್ ಪಡೆದ ಹಿರಿಮೆ ಮಾಡಿದ್ದರು. ಭಾನುವಾರ ಕುಲ್‌ದೀಪ್ ಯಾದವ್ ಈ ಸಾಧನೆಯನ್ನು ಅಳಿಸಿ ಹಾಕಿದರು.

ಕುಲ್‌ದೀಪ್ ಯಾದವ್ ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮಾಜಿ ದಿಗ್ಗಜ ಲಸಿತ್ ಮಾಲಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸದ್ಯ ಪಾಕ್‌ನ ವಾಕರ್ ಯೂನಿಸ್ ಹಾಗೂ ಬ್ರೇಟ್ ಲೀ ಅವರು ಮುಂಚೂಣಿಯಲ್ಲಿದ್ದಾರೆ. ಮುಂದಿನ 2 ಪಂದ್ಯಗಳಲ್ಲಿ ಕುಲ್‌ದೀಪ್ 4 ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಅವರು ವಾಕರ್ ಯೂನಿಸ್, ಬ್ರೇಟ್ ಲೀ ಅವರ ದಾಖಲೆಯ ಸಮಕ್ಕೆ ನಿಲ್ಲಬಹುದು.
ಕುಲ್‌ದೀಪ್ ಯಾದವ್ ಸಾಧನೆ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ 10 ಓವರ್ ಬೌಲಿಂಗ್ ಮಾಡಿ 68 ರನ್ ಸಿಡಿಸಿ 4 ವಿಕೆಟ್ ಕಬಳಿಸಿದರು. ಇನ್ನು ಕುಲ್‌ದೀಪ್ ಯಾದವ್ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಇವರು 115 ಏಕದಿನ ಪಂದ್ಯದಲ್ಲಿ 186 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ 17 ಪಂದ್ಯಗಳಲ್ಲಿ 76, 49 ಟ20 ಪಂದ್ಯಗಳಲ್ಲಿ 88 ವಿಕೆಟ್ ಪಡೆದು ಬೀಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications