Kuldeep Yadav: ಕುಲ್‌ದೀಪ್ ಯಾದವ್ ಮದುವೆ ಆಗಲಿರುವ ಹುಡುಗಿ ಯಾರು?
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಕುಲ್‌ದೀಪ್ ಯಾದವ್ ಬುಧವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚೈನಾ ಮೆನ್ ಬೌಲರ್ ಕುಲ್‌ದೀಪ್ ಯಾದವ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಬೌಲರ್ ಎಂಬ ಕುತೂಹಲ ಮನೆ ಮಾಡಿದೆ. ಇದಕ್ಕೆ ಉತ್ತರ ಇಲ್ಲಿದೆ.
ಬುಧವಾರ ಲಕ್ನೋದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಟೀಮ್ ಇಂಡಿಯಾದ ಬೌಲರ್ ಕುಲ್‌ದೀಪ್ ಯಾದವ್ ನಿಶ್ಚಿತಾರ್ಥದಲ್ಲಿ ಅವರ ಮತ್ತು ಅವರ ಭಾವಿ ಪತ್ನಿ ವಂಶಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಕಾರ್ಯಕ್ರಮದಲ್ಲಿ ರಿಂಕು ಸಿಂಗ್ ಹಾಗೂ ವಂಶಿಕಾ ಅವರ ಕುಟುಂಬಸ್ಥರು. ಹಾಗೂ ಅವರ ಆಪ್ತ ಕುಟುಂಬಸ್ಥರು ಭಾಗವಿಸಿದ್ದರು. ಈ ಕಾರ್ಯಕ್ರಮದಲ್ಲಿ ರಿಂಕು ಸಿಂಗ್ ಸೇರಿದಂತೆ ಉತ್ತರ ಪ್ರದೇಶ ಕ್ರಿಕೆಟ್ ಆಟಗಾರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಿಂಕು ಸಿಂಗ್ ಹಾಗೂ ವಂಶಿಕಾ ಇಬ್ಬರೂ ಬಾಲ್ಯ ಸ್ನೇಹಿತರು. ಇಬ್ಬರು ಪ್ರೀತಿಸಿ ಮದುವೆ ಆಗಿದ್ದಾರೆ.

ಕುಲ್‌ದೀಪ್ ಕೈ ಹಿಡಿಯಲಿರುವ ವಂಶಿಕಾ ಯಾರು?
ಕುಲ್‌ದೀಪ್ ಯಾದವ್ ಸಾಮಾನ್ಯವಾಗಿ ಯಾರ ಜೊತೆಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಇವರು ತಮ್ಮ ನಿಶ್ಚಿತಾರ್ಥವನ್ನು ಆಪ್ತರ ಸಮ್ಮುಖದಲ್ಲಿ ಮಾಡಿಕೊಂಡರು. ಇವರಿಬ್ಬರೂ ಬಾಲ್ಯದಿಂದ ಸ್ನೇಹಿತರು. ಇವರಿಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಸ್ನೇಹ ಪ್ರೀತಿಯಾಗಿ ಬದಲಾಯಿತು. ಇವರಿಬ್ಬರೂ ಶೀಘ್ರದಲ್ಲಿ ಹಸಿ ಮಣೆ ಏರಲಿದ್ದಾರೆ. ಕುಲ್‌ದೀಪ್ ಯಾದವ್ ಅವರನ್ನು ಕೈ ಹಿಡಿಯಲಿರುವ ವಂಶಿಕಾ ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಕೆಲಸ ಮಾಡುತ್ತಿದ್ದಾರೆ.
ಕುಲ್‌ದೀಪ್ ಹಾಗೂ ವಂಶಿಕಾ ಇದೇ ತಿಂಗಳಲ್ಲಿ ಮದುವೆ ಆಗಬೇಕಿತ್ತು. ಆದರೆ ಕುಲ್‌ದೀಪ್ ಯಾದವ್ ಇಂಗ್ಲೆಂಡ್ ಪ್ರವಾಸವನ್ನು ಬೆಳಸುತ್ತಿದ್ದರಿಂದ ಈ ಮದುವೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಕುಲ್‌ದೀಪ್ ಯಾದವ್ ಇತ್ತೀಚಿಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಕುಲ್‌ದೀಪ್ ಯಾದವ್ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್‌ದೀಪ್ ಯಾದವ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.
ಕುಲ್‌ದೀಪ್ ಯಾದವ್ ಸಾಧನೆ
ಕುಲ್‌ದೀಪ್ ಯಾದವ್ ಟೀಮ್ ಇಂಡಿಯಾದ ಪರ ಅಮೋಘ ಪ್ರದರ್ಶನ ನೀಡಿದ್ದಾರೆ.ಇವರು ಈಗಾಗಲೇ 13 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಪರ ಕಣಕ್ಕೆ ಇಳಿದಿದ್ದು, 56 ವಿಕೆಟ್ ಕಬಳಿಸಿದ್ದಾರೆ. ಇವರು ಇಂಗ್ಲೆಂಡ್ ಪ್ರವಾಸದಲ್ಲಿ ಪ್ರಮುಖ ಸ್ಪಿನ್ ಬೌಲರ್ ಆಗಿ ಆಡಲಿದ್ದಾರೆ. ಕುಲ್‌ದೀಪ್ ಯಾದವ್ ಇಂಗ್ಲೆಂಡ್ ವಿರುದ್ಧ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಕುಲ್‌ದೀಪ್ ಯಾದವ್ ಆಂಗ್ಲರ ವಿರುದ್ಧ ಆಡಿದ 6 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿದ್ದಾರೆ. ಇನ್ನು ಇಂಗ್ಲೆಂಡ್‌ನಲ್ಲಿ ಇವರು ಒಂದೇ ಟೆಸ್ಟ್ ಆಡಿದ್ದು, ಈ ವೇಳೆ ಇವರು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಶ್ವಿನ್ ಅನುಪಸ್ಥಿತಿಯಲ್ಲಿ ತಂಡ ಇವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡುವ ಸೂಚನೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications