ಕುಲ್‌ದೀಪ್ ಮದುವೆ ಕಾರ್ಯಕ್ರಮದಲ್ಲಿ ಸ್ಟೆಪ್ಸ್ ಹಾಕಿದ ಚಾಹಲ್: ವಿಡಿಯೋ ವೈರಲ್
ಟೀಮ್ ಇಂಡಿಯಾ ಇತ್ತೀಚಿಗಷ್ಟೇ ಟಿ20 ವಿಶ್ವಕಪ್ ಗೆದ್ದು ಸಂಭ್ರಮದಲ್ಲಿದೆ. ಹಲವು ಆಟಗಾರರು ಮನೆಯತ್ತ ಮುಖಮಾಡಿದ್ದಾರೆ. ಈ ಬಿಡುವಿನ ಸಮಯದಲ್ಲಿ ಟೀಮ್ ಇಂಡಿಯಾ ಚೈನಾ ಮೆನ್ ಬೌಲರ್ ಕುಲ್‌ದೀಪ್ ಯಾದವ್ ತಮ್ಮ ವಿವಾಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕುಲ್‌ದೀಪ್ ಯಾದವ್ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶನಿವಾರ ಈ ಜೋಡಿ ವಿವಾಹವಾಗುತ್ತಿದ್ದಾರೆ.
ಕುಲ್‌ದೀಪ್ ಹಾಗೂ ವಂಶಿಕಾ ಅವರ ಮದುವೆಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಭಾಗವಹಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ರಿಂಕು ಸಿಂಗ್ ಹಾಗೂ ಯಜುವೇಂದ್ರ ಚಾಹಲ್ ಮದುವೆ ಮನೆಗೆ ಆಗಮಿಸಿದ್ದಾರೆ. ಈ ವೇಳೆ ಚಾಹಲ್ ಗೆಳೆಯನ ಮದುವೆಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಕುಲ್‌ದೀಪ್ ಯಾದವ್ ಅವರ ಮದುವೆ ಕಾರ್ಯಕ್ರಮ ಹಳದಿ ಶಾಸ್ತ್ರ ಶುಕ್ರವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಲ್‌ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಡ್ಯಾನ್ಸ್ ಮಾಡಿದರು. ಈ ದೃಶ್ಯ ಎಕ್ಸ್‌ನಲ್ಲಿ ವೈರಲ್ ಆಗುತ್ತಿದೆ. ಈ ಇಬ್ಬರೂ ಸ್ಪಿನ್ ಬೌಲರ್‌ಗಳು ಒಳ್ಳೆಯ ಸ್ನೇಹಿತರಾಗಿದ್ದು, ಭಾರತದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ. ಈ ಜೋಡಿಯ ಸ್ಪಿನ್ ಬೌಲಿಂಗ್ ಎದುರಿಸಲು ಬ್ಯಾಟರ್‌ಗಳು ವಿಫಲರಾಗಿದ್ದಾರೆ. ಇವರಿಬ್ಬರನ್ನು ಅಭಿಮಾನಿಗಳು ಕುಲ್ಚಾ ಜೋಡಿ ಎಂದೆ ಕರೆಯುತ್ತದೆ.
ಪಂಜಾಬ್ ಪರ ಆಡಲಿರುವ ಐಪಿಎಲ್
ಟೀಮ್ ಇಂಡಿಯಾದ ಪರ ಹಲವು ಪಂದ್ಯಗಳನ್ನು ಆಡಿರುವ 35 ವರ್ಷ ಚಾಹಲ್ ಈಗ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇವರು 2023ರಿಂದ ತಂಡದಿಂದ ಹೊರಗಿದ್ದಾರೆ. ಅಲ್ಲಿಂದ ಈ ವರೆಗೆ ಇವರಿಗೆ ಒಂದೇ ಒಂದು ಪಂದ್ಯ ಆಡಲು ಅವಕಾಶ ಲಭಿಸಿಲ್ಲ. ಕಳೆದ ಬಾರಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಚಾಹಲ್ ತಂಡದ ಭಾಗವಾಗಿದ್ದರೂ ಸಹ ಈ ಮೆಗಾ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಆಡಿರಲಿಲ್ಲ. ಈ ಬಾರಿಯ ವಿಶ್ವಕಪ್ ವೇಳೆಯಲ್ಲಿ ಚಾಹಲ್ ಕಾಮೆಂಟರಿ ಮಾಡಿದರು.
ಐಪಿಎಲ್‌ನಲ್ಲಿ ಚಾಹಲ್ ಈಗ ಐಪಿಎಲ್ 2026 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಚಾಹಲ್ ಐಪಿಎಲ್ ನಲ್ಲಿ ಒಟ್ಟು 174 ಪಂದ್ಯಗಳನ್ನು ಆಡಿದ್ದಾರೆ ಮತ್ತು 221 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಈ ಶ್ರೀಮಂತ ಲೀಗ್‌ನಲ್ಲಿ ಚಾಹಲ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸಂಜೆ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ. ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಮತ್ತು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications