For Quick Alerts
ALLOW NOTIFICATIONS  
For Daily Alerts
 

Kuldeep Yadav: ಅನಿಲ್‌ ಕುಂಬ್ಳೆ ದಾಖಲೆ ಮೀರಿನಿಂತ ಕುಲ್‌ದೀಪ್‌ ಯಾದವ್

ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಸರಣಿಯನ್ನು 2-1 ರಿಂದ ಗೆದ್ದು ಕೊಂಡಿದೆ. ವಿಶಾಖಪಟ್ಟಣಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್‌ ಜಯ ಸಾಧಿಸಿದೆ. ಭಾರತ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ ಕುಲ್‌ದೀಪ್ ಯಾದವ್ ಬಿಗುವಿನ ದಾಳಿ ನಡೆಸಿ ಮಿಂಚಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಕುಲ್‌ದೀಪ್‌ ಯಾದವ್ 4 ವಿಕೆಟ್‌ ಪಡೆದು ಮಿಂಚಿದರು. ಈ ಮೂಲಕ ಕುಲ್‌ದೀಪ್‌ ಯಾದವ್ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು 4 ವಿಕೆಟ್ ಗೊಂಚಲು ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಗೆ ಕುಲ್ದೀಪ್ ಈಗ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ.

Kuldeep Yadav overtakes Anil Kumble in ODI history for most 4-wicket hauls for India

ನಿರ್ಣಾಯಕ ಏಕದಿನ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಡೆವಾಲ್ಡ್ ಬ್ರೆವಿಸ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್ ಮತ್ತು ಲುಂಗಿ ಎನ್‌ಗಿಡಿ ಅವರನ್ನು ಔಟ್ ಮಾಡಿದರು. ಈ ಮೂಲಕ ಭಾರತದ ಪರ ಅತಿ ಹೆಚ್ಚು 4 ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕುಲ್‌ದೀಪ್‌, ಅನಿಲ್‌ ಕುಂಬ್ಳೆ ಅವರನ್ನು ಹಿಂದಿಕ್ಕಿದರು.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಪರ ಅತಿ ಹೆಚ್ಚು 4 ವಿಕೆಟ್ ಗೊಂಚಲು ಪಡೆದ ದಾಖಲೆ ಸ್ವಿಂಗ್ ಬೌಲರ್‌ ಮೊಹಮ್ಮದ್ ಶಮಿ ಅವರಿಗೆ ಸಲ್ಲುತ್ತದೆ. ಇವರು 16 ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ್ದರು. ಕುಲ್‌ದೀಪ್‌ ಯಾದವ್ ಈಗ 11 ಬಾರಿ 4 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ.

ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ 4 ವಿಕೆಟ್‌ ಪಡೆದ ಬೌಲರ್ಸ್‌

16 - ಮೊಹಮ್ಮದ್ ಶಮಿ
12 - ಅಜಿತ್ ಅಗರ್ಕರ್
11 - ಕುಲದೀಪ್ ಯಾದವ್
10 - ಅನಿಲ್ ಕುಂಬ್ಳೆ
10 - ಜಾವಗಲ್ ಶ್ರೀನಾಥ್

ಕುಲ್‌ದೀಪ್‌ ಯಾದವ್ ಸಾಧನೆ

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಕುಲ್‌ದೀಪ್‌ ಯಾದವ್ ಆಡಿದ ಮೂರು ಪಂದ್ಯಗಳಲ್ಲಿ 20.77ರ ಸರಾಸರಿಯಲ್ಲಿ 9 ವಿಕೆಟ್‌ ಕಬಳಿಸಿದ್ದಾರೆ. ಈ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ಮೂಲಕ ಕುಲ್‌ದೀಪ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350ಕ್ಕೂ ಹೆಚ್ಚು ವಿಕೆಟ್‌ ಪಡೆದ ದಾಖಲೆ ನಿರ್ಮಿಸಿದ್ದಾರೆ. ಮುಂದಿನ ಸರಣಿಯಲ್ಲಿ ಕುಲ್‌ದೀಪ್‌ 9 ವಿಕೆಟ್‌ಗಳನ್ನು ಪಡೆಯುವಲ್ಲಿ ಸಫಲರಾದರೆ, ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಪಡೆದ ಸಾಧನೆಯನ್ನು ಮಾಡಲಿದ್ದಾರೆ. ಕುಲ್‌ದೀಪ್ ಯಾದವ್ ಈ ವರೆಗೆ ಆಡಿದ 117 ಪಂದ್ಯಗಳಲ್ಲಿ 191 ವಿಕೆಟ್‌ ಪಡೆದಿದ್ದಾರೆ.

Story first published: Sunday, December 7, 2025, 11:20 [IST]
Other articles published on Dec 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+