ನನ್ನ ಕುಟುಂಬದ ಯಾರನ್ನು ಕಳೆದುಕೊಂಡ ಭಾವನೆ... ಕುಲ್‌ದೀಪ್ ಯಾದವ್ ಹೀಗೇ ಹೇಳಿದ್ದು ಏಕೆ?
ಟೀಮ್ ಇಂಡಿಯಾದ ಸ್ಟಾರ್ ರಿಸ್ಟ್ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್.. ಇತ್ತೀಚಿಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಇವರ ಪಾತ್ರ ಮುಖ್ಯ. ಕುಲ್‌ದೀಪ್ ಯಾದವ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ಮುಂದಿನ ತಿಂಗಳು ಬಾಂಗ್ಲಾದೇಶದ ವಿರುದ್ಧದ ಸರಣಿಯನ್ನು ಕುಲ್‌ದೀಪ್ ಯಾದವ್ ಎದುರು ನೋಡುತ್ತಿದ್ದಾರೆ.
ಕುಲ್‌ದೀಪ್ ಯಾದವ್ ಟೀಮ್ ಇಂಡಿಯಾದ ಕ್ಲಾಸ್ ಸ್ಪಿನ್ ಬೌಲರ್.. ಇವರ ಬೌಲಿಂಗ್ ಆಕ್ಷನ್ ಕೊಂಚ ಶೇನ್ ವಾರ್ನ್ ಅವರನ್ನು ಹೋಲುತ್ತದೆ. ಇವರು ಸಹ ಶೇನ್ ವಾರ್ನ್ ಬಗ್ಗೆ ಅವಕಾಶ ಸಿಕ್ಕಿದಾಗಲೆಲ್ಲಾ ಗುಣಗಾನ ಮಾಡಿದ್ದಾರೆ. ಇತ್ತೀಚಿಗೆ ಬ್ರೆಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಕುಲ್‌ದೀಪ್ ಯಾದವ್, ಶೇನ್ ವಾರ್ನ್ ಬಗ್ಗೆ ಮನ ಬಿಚ್ಚು ಮಾತನಾಡಿದ್ದಾರೆ.

ಶೇನ್ ವಾರ್ನ್ ನೆನಪಿಸಿಕೊಂಡ ಕುಲ್‌ದೀಪ್
ಶೇನ್ ವಾರ್ನ್ ಅವರ ಆಟವನ್ನು ನೋಡಿ ಕ್ರಿಕೆಟ್ ಆಡಲು ಆರಂಭಿಸಿದ್ದೇವೆ. ಇವರನ್ನು ಒಮ್ಮೆ ಭೇಟಿ ಮಾಡುವ ಅವಕಾಶ ಸಿಕ್ಕರೂ ಅದು ಅದೃಷ್ಟ ಎಂದು ಭಾವಿಸಿದ್ದೇ. ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಆದರೆ ಅವರು ನಿಧನದ ಸುದ್ದಿ ಕೇಳಿ ನಮ್ಮವರೆ ನಮ್ಮಿಂದ ದೂರವಾದ ಆದ ಭಾವನೆ ನನ್ನನ್ನು ಕಾಡಿತು ಎಂದು ಕುಲ್‌ದೀಪ್ ಯಾದವ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲೂ ಸಹಾಯ
ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದಾಗ ಒಮ್ಮೆ ಶೇನ್ ವಾರ್ನ್ ಅಭ್ಯಾಸ ಮಾಡುವ ಸ್ಥಳಕ್ಕೆ ಬಂದಿದ್ದರು. ಆಗ ಅವರು ನನ್ನನ್ನು ನೋಡಿ ನೀನು ಹೇಗೆ ಬೌಲಿಂಗ್ ಮಾಡುತ್ತೀಯಾ ಎಂದು ನಾನು ಅರಿಯುವುದಿಲ್ಲ. ಆದರೆ ನೀನು ಮೈದಾನದಲ್ಲಿ ನಗುತ್ತಾ ಬೌಲಿಂಗ್ ಮಾಡು ಎಂದು ಕಿವಿ ಮಾತು ನೀಡಿದ್ದರು. ಇದರಂತೆ ನಾನು ಮೈದಾನದಲ್ಲಿ ನಗುತ್ತಲೇ ಬೌಲಿಂಗ್ ಮಾಡಿ, ಐದು ವಿಕೆಟ್ ಕಬಳಿಸಿದ್ದೆ. ಈ ಇನಿಂಗ್ಸ್ ಶ್ರೇಯವನ್ನು ನಾನು ಶೇನ್ ವಾರ್ನ್ ಅವರಿಗೆ ಅರ್ಪಿಸಿದ್ದೇ ಎಂದು ತಿಳಿಸಿದ್ದಾರೆ.
ಕುಲದೀಪ್ ಯಾದವ್ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ತಮ್ಮ ಆರಾಧ್ಯ ದೈವ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಿದರು. ಶೇನ್ ವಾರ್ನ್ ನನ್ನ ರೋಲ್ ಮಾಡೆಲ್.. ನಾನು ಇನ್ನೂ ವಾರ್ನ್ ಬಗ್ಗೆ ಭಾವನಾತ್ಮಕವಾಗಿ ಯೋಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಕುಲ್‌ದೀಪ್ ಸಾಧನೆ
ಟೀಮ್ ಇಂಡಿಯಾದ ಯಶಸ್ವಿ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್.. ಇವರು ಟೀಮ್ ಇಂಡಿಯಾ ಪರ ಮೂರು ಫಾರ್ಮೆಟ್‌ಗಳಲ್ಲೂ ಅಂಗಳ ಪ್ರವೇಶಿಸಿದ ಹಿರಿಮೆ ಹೊಂದಿದ್ದಾರೆ. 29 ವರ್ಷದ ಕುಲ್‌ದೀಪ್ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 53 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ 106 ಬಾರಿ ಭಾರತದ ಪರ ಅಂಗಳ ಪ್ರವೇಶಿಸಿದ್ದು, 172 ಬಾರಿ ಎದುರಾಳಿ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲರಾಗಿದ್ದಾರೆ. 40 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕುಲದೀಪ್ 69 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications