ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಕಾದಾಟ ನಡೆಯಿತು. ಈ ಪಂದ್ಯದಲ್ಲಿ ಅಮೋಘ ಸಂಘಟಿತ ಆಟದ ಪ್ರದರ್ಶನ ನೀಡಿದ ಕೋಲ್ಕತ್ತಾ ಜಯ ಸಾಧಿಸಿ, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದ ಬಳಿಕ ಉಭಯ ಆಟಗಾರರು ತಮಾಷೆಯಿಂದ ಮಾತನಾಡುತ್ತಿರುವುದು ಕಂಡು ಬಂದಿತು. ಈ ವೇಳೆ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಹಾಗೂ ರಿಂಕು ಸಿಂಗ್‌ಗೆ ಕಪಾಳ ಮೋಕ್ಷ ಮಾಡಿದರು. ಇದರ ವಿಡಿಯೋಗಳು ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 204 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 9ವಿಕೆಟ್‌ಗೆ 190 ರನ್ ಕಲೆ ಹಾಕಿ, 14 ರನ್ ಸೋಲು ಕಂಡಿತು. ಡೆಲ್ಲಿ ಕ್ಯಾಪಿಟಲ್ಸ್ ಆಡಿದ 6 ಪಂದ್ಯಗಳಲ್ಲಿ 12 ಅಂಕಗಳನ್ನು ಕಲೆ ಹಾಕಿದ್ದು ನಾಲ್ಕನೇ ಸ್ಥಾನದಲ್ಲಿದೆ. ಕೆಕೆಆರ್ ಆಡಿದ 10 ಪಂದ್ಯಗಳಲ್ಲಿ 4 ಜಯ ಸಾಧಿಸಿದ್ದಯ, 9 ಅಂಕ ಕಲೆ ಹಾಕಿದ್ದು ಏಳನೇ ಕ್ರಮಾಂಕದಲ್ಲಿದೆ. ಈ ಪಂದ್ಯದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕುಲ್‌ದೀಪ್ ಹಾಗೂ ರಿಂಕು ಅವರ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ಮುನ್ನ ಕುಲ್‌ದೀಪ್ ಯಾದವ್ ಕೆಕೆಅರ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಈ ವೇಳೆ ಉಭಯ ತಂಡಗಳಲ್ಲಿರುವ ಆಟಗಾರರಿಗೆ ಎರಡೂ ತಂಡಗಳಲ್ಲಿ ಸ್ನೇಹಿತರು ಇದ್ದೇ ಇರುತ್ತಾರೆ. ಇನ್ನು ಪಂದ್ಯದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಕಾಲೆಳೆದು ಕೊಳ್ಳುವುದು ಕಾಮನ್. ಇದೇ ರೀತಿ ಮಾಡುವಾಗ ಕುಲ್‌ದೀಪ್ ಯಾದವ್, ರಿಂಕು ಸಿಂಗ್‌ಗೆ ಕಪಾಳ ಮೋಕ್ಷ ಮಾಡಿದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.
ಎರಡೂ ತಂಡದ ಆಟಗಾರರು ತಮಾಷೆಯಿಂದ ಮಾತನಾಡುತ್ತಿದ್ದರು. ಇದೇ ವೇಳೆ ಕುಲ್‌ದೀಪ್ ಇದ್ದಕ್ಕಿದಂತೆ ರಿಂಕು ಸಿಂಗ್‌ಗೆ ಕಪಾಳ ಮೋಕ್ಷ ಮಾಡಿದ್ರು. ಆಗ ರಿಂಕು ಕೊಂಚ ಕೋಪ ಗೊಂಡಂತೆ ಕಂಡುಬಂದಂತೆ ಕಂಡು ಬಂದಿತು. ಈ ಘಟನೆಗೆ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಪರ ಆಡುವ ಕುಲ್‌ದೀಪ್ ಯಾದವ್ ಪ್ರಸಕ್ತ ಲೀಗ್‌ನಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ ರನ್‌ಗಳಿಗೆ ಬ್ರೇಕ್ ಹಾಕಿದ್ದಾರೆ. ಇನ್ನು ರಿಂಕು ಸಿಂಗ್ ಪ್ರಸಕ್ತ ಲೀಗ್‌ನಲ್ಲಿ ತಂಡ ತಮ್ಮ ಮೇಲೆ ಇಟ್ಟನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಇವರು 10 ಪಂದ್ಯಗಳಲ್ಲಿ 33.80 ಸರಾಸರಿಯಲ್ಲಿ 169 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಒಂದೇ ಒಂದು ದೊಡ್ಡ ಇನಿಂಗ್ಸ್ ಸಹ ಮೂಡಿ ಬಂದಿಲ್ಲ.