ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರ ಪೈಕಿ ಕುಲ್‌ದೀಪ್ ಯಾದವ್ ಕೂಡ ಒಬ್ಬರು. ಪ್ರಮುಖ ಪಂದ್ಯಗಳಲ್ಲಿ ಕುಲ್‌ದೀಪ್ ಭಾರತದ ಪರವಾಗಿ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಮೂಲಕ ಭಾರತದ ಪರವಾಗಿ ಯಶಸ್ವೀ ಬೌಲರ್ ಎನಿಸಿಕೊಂಡಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಸಾಧಿಸಿದ ಈ ಯಶಸ್ಸಿನ ಬಗ್ಗೆ ಕುಲ್‌ದೀಪ್ ಯಾದವ್ ಮಾತನಾಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ತನ್ನ ಯಶಸ್ಸಿಗೆ ಕಳೆದ ಒಂದೂವರೆ ವರ್ಷದಲ್ಲಿ ತಾನು ಪಟ್ಟ ಪರಿಶ್ರಮವೇ ಕಾರಣ ಎಂದಿದ್ದಾರೆ ಕುಲ್‌ದೀಪ್ ಯಾದವ್. ಈ ಟೂರ್ನಿಯಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ ಕುಲ್‌ದೀಪ್ ಯಾದವ್ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಒಟ್ಟಕ್ಕೇರುದ ಬಳಿಕ ಬಿಸಿಸಿಐ ಟಿವಿಯಲ್ಲಿ ಕುಲ್‌ದೀಪ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ಹಂತವನ್ನು ತಲುಪಲು ತಾನು ಒಂದೂವರೆ ವರ್ಷಗಳ ಕಾಲ ಶ್ರಮಿಸಿದ್ದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಕುಲದೀಪ್ ಅವರು ತಮ್ಮ ವೃತ್ತಿಜೀವನ ಆರಂಭದಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದರು. ಆದರೆ ಕೊರೊನಾಕಾಲದ ಬಳಿಕ ಅವರ ಪ್ರದರ್ಶನದಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. ಆದರೆ ಇದೀಗ ಯುವ ಎಡಗೈ ಸ್ಪಿನ್ನರ್ ಮತ್ತೆ ಲಯಕ್ಕೆ ಮರಳಿದ್ದು ಅದ್ಭುತ ಯಶಸ್ಸು ಸಾಧಿಸಿಕೊಂಡು ಬಂದಿದ್ದಾರೆ.
ಕುಲ್‌ದೀಪ್ ಯಾದವ್ ಅವರ ಅತ್ಯಂತ ವೇಗವಾಗಿ ಕುಸಿತ ಕಾಣಲು ಆರಂಭಿಸಿದರು. ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡ ಅವರು ನಂತರ ಐಪಿಎಲ್‌ನಲ್ಲಿಯೂ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ವಿಫಲವಾದರು. ನಂತರ ಅದ್ಬುತವಾಗಿ ಕಮ್‌ಬ್ಯಾಕ್ ಮಾಡಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದಾರೆ.
"ಉತ್ತಮವಾದ ಲೆಂತ್‌ಗಳಲ್ಲಿ ಬೌಲಿಂಗ್ ನಡೆಸುವುದು ನಮಗೆ ಬಹಳ ಮುಖ್ಯವಾಗಿತ್ತು. ನಾನು ಬ್ಯಾಟರ್‌ನನ್ನು ಅನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಬ್ಯಾಟರ್ ಹೊಡೆತವನ್ನು ಪ್ರಯತ್ನಿಸಬಹುದು ಅಥವಾ ಆಡಬಹುದು. ಆದರೆ ತಪ್ಪು ಮತ್ತು ಫ್ಲಿಪ್ಪರ್ ಅನ್ನು ಚೆನ್ನಾಗಿ ಬಳಸುತ್ತಿದ್ದೇನೆ. ಕ್ರೀಸ್ ಅನ್ನು ಚೆನ್ನಾಗಿ ಬಳಸುತ್ತಿದ್ದೇನೆ. ಮೂಲೆಯಿಂದ ಮತ್ತು ವಿಕೆಟ್ ಹತ್ತಿರ ಬೌಲಿಂಗ್ ಮಾಡಿವ ಮೂಲಕ ವೇರಿಯೇಶನ್ಸ್ ಪಡೆಯಲು ಸಾಧ್ಯವಾಗುತ್ತಿದೆ. ಹಾಗಾಗಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೇನೆ ಈ ಲಯದೊಂದಿಗೆ ಆತ್ಮವಿಶ್ವಾಸವನ್ನು ಪಡೆದಿದ್ದೇನೆ ಎಂದು" ಎಂದು ಕುಲದೀಪ್ ಯಾದವ್ ಏಷ್ಯಾ ಕಪ್ 2023 ರ ಮುಕ್ತಾಯದ ನಂತರ ಹೇಳಿದರು.