ಇದೇ ತಿಂಗಳು ಹಸೆಮಣೆ ಏರಲಿರುವ ಕುಲ್‌ದೀಪ್ ಯಾದವ್-ವಂಶಿಕಾ
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಅವರು ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ಮಾರ್ಚ್ 14 ಮಸ್ಸೂರಿಯ ರೆಸಾರ್ಟ್‌ನಲ್ಲಿ ವಿವಾಹವಾಗಲಿದ್ದಾರೆ. ಅಲ್ಲದೆ ಮಾರ್ಚ್ 17 ರಂದು ಲಕ್ನೋದಲ್ಲಿ ಅದ್ಧೂರಿ ವಿವಾಹ ಆರತಕ್ಷತೆ ನಡೆಯಲಿದೆ ಎಂದು ತಿಳಿದು ಬಂದಿದೆ. ಕುಲ್‌ದೀಪ್ ಯಾದವ್ ಟಿ20 ವಿಶ್ವಕಪ್ ತಯಾರಿಯ ದೃಷ್ಟಿಯಿಂದ ನವೆಂಬರ್ 2025 ರಲ್ಲಿ ನಿಗದಿಯಾಗಿದ್ದ ವಿವಾಹವನ್ನು ಮುಂದೂಡಿದ್ದರು ಎಂದು ಮಾಧ್ಯಮಗಳು ವರದಿಯನ್ನು ಮಾಡಿದ್ದವು.
ಕಳೆದ ವರ್ಷ ಕುಲ್‌ದೀಪ್ ಯಾದವ್ ಅವರು ಕಳೆದ ವರ್ಷ ಲಕ್ನೋದ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಂಶಿಕಾ ಪ್ರಸ್ತುತ ಎಲ್‌ಐಸಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಕುಲ್‌ದೀಪ್ ಯಾದವ್ ಅವರು ಕೇವಲ ಒಂದೇ ಒಂದು ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದರು. ಇವರು ಪಾಕಿಸ್ತಾನ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದರು. ಅಲ್ಲದೆ 14 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು.ಕುಲ್‌ದೀಪ್ ಯಾದವ್ ಅವರ ತಂದೆ ರಾಮ್ ಸಿಂಗ್ ಯಾದವ್ ಅವರು ಕಳೆದ ವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ವಿವಾಹದ ಆಮಂತ್ರಣವನ್ನು ನೀಡಿದ್ದರು ಎಂದು ತಿಳಿದು ಬಂದಿದೆ.
ಮದುವೆ ಕಾರ್ಯಕ್ರಮಗಳು ಯಾವಾಗ?
ಮದುವೆ ಕಾರ್ಯಕ್ರಮಗಳು ಮಾರ್ಚ್ 13 ರಿಂದ ಆರಂಭವಾಗಲಿವೆ ಎಂದು ಕುಲ್‌ದೀಪ್ ಯಾದವ್ ಅವರ ಕೋಚ್ ಕಪಿಲ್ ದೇವ್ ಪಾಂಡೆ ಖಚಿತ ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಸಿಸಿಐ ಉನ್ನತ ಅಧಿಕಾರಿಗಳು, ಟೀಮ್ ಇಂಡಿಯಾದ ಆಟಗಾರರು ಭಾಗವಹಿಸಲಿದ್ದಾರೆ.

ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಮಣಿಸಿದ್ದ ಭಾರತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ವಿಶ್ವಕಪ್ ಗೆಲುವಿನ ಬಳಿಕ ಕುಲ್‌ದೀಪ್ ಯಾದವ್ ಅವರನ್ನು ಮಾತನಾಡಿಸಿದಾಗ ಅವರು ಸಂಜು ಸ್ಯಾಮ್ಸನ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.
ನಾವು ಈ ಟೂರ್ನಿಗಾಗಿ ಬಹು ದಿನಗಳಿಂದ ತಯಾರಿ ನಡೆಸಿದ್ದೆವು. ಈ ಟೂರ್ನಿ ನಮಗೆ ತುಂಬ ಮಹತ್ವದಾಗಿತ್ತು. ನೀವು ಕ್ರಿಕೆಟ್ ಇದಕ್ಕಾಗಿಯೇ ಆಡುತ್ತೀರಾ. ಐಸಿಸಿ ಟೂರ್ನಿಗಳಲ್ಲಿ ಮೈದಾನಕ್ಕೆ ಇಳಿದಾಗಲೆಲ್ಲಾ ಗೆಲ್ಲಲೇ ಬೇಕು ಎಂಬ ಛಲ ಇರುತ್ತದೆ. ಈ ಸಾಧನೆಯನ್ನು ಮಾಡಿದ ತಂಡಕ್ಕೆ ಅಭಿನಂದನೆಗಳು. ತುಂಬ ವರ್ಷದಿಂದ ನಾನು ಹಾಗೂ ಸಂಜು ಸ್ಯಾಮ್ಸನ್ ಒಟ್ಟಿಗೆ ಆಡಿದ್ದೇವೆ. ಈ ಟೂರ್ನಿಯಲ್ಲಿ ಸಂಜು ಆಡಿದ ಧಾಟಿ ಎಲ್ಲರಿಗೂ ಇಷ್ಟವಾಯಿತು ಎಂದು ಕುಲ್‌ದೀಪ್ ಯಾದವ್ ತಿಳಿಸಿದ್ದಾರೆ.
ಕುಲ್‌ದೀಪ್ ಯಾದವ್ ಸಾಧನೆ
31 ವರ್ಷದ ಕುಲ್‌ದೀಪ್ ಯಾದವ್ ಅವರು ಭಾರತ ಪರ 17 ಟೆಸ್ಟ್, 120 ಏಕದಿನ, 54 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕುಲ್‌ದೀಪ್ 360ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications