Kuldeep Yadav: ಅಶ್ವಿನ್ ದಾಖಲೆ ಅಳಿಸಿದ ಕುಲ್‌ದೀಪ್ ಯಾದವ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ಅವಕಾಶ ಸಿಗದೇ ಬೆಂಚ್ ಕಾಯ್ದಿದ್ದ ಕುಲ್‌ದೀಪ್ ಯಾದವ್ ಕಾಯುಕೆ ಸೆಪ್ಟಂಬರ್ 10 ರಂದು ಕೊನೆಯಾಗಿದೆ. ಅಂತೂ ಕುಲ್‌ದೀಪ್ ಯಾದವ್ ಬ್ಲ್ಯೂ ಜೆರ್ಸಿಯಲ್ಲಿ ಮತ್ತೆ ಕಾಣಿಸಿಕೊಂಡು ಕಮಾಲ್ ಮಾಡಿದ್ದಾರೆ. ಯುಎಇ ವಿರುದ್ದದ ಪಂದ್ಯದಲ್ಲಿ ಕುಲ್‌ದೀಪ್ ತಮ್ಮ ಚೈನ್ ಮೆನ್ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳು ಕಾಟ ನೀಡಿದರು. ಇವರ ಸ್ಪಿನ್ ಮೋಡಿಯನ್ನು ಅರಿಯಲು ಯುಎಇ ಬ್ಯಾಟರ್‌ಗಳು ವಿಫಲರಾದರು. ಏಷ್ಯಾ ಕಪ್ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲೇ 4 ವಿಕೆಟ್ ಪಡೆದ ಕುಲ್‌ದೀಪ್ ಎದುರಾಳಿಗಳಿಗೆ ಎಚ್ಚರಿಕೆಯ ಗಂಟೆ ಬಡೆದಿದ್ದಾರೆ.
ಯುಎಇ ವಿರುದ್ಧ ಕುಲ್‌ದೀಪ್ ಯಾದವ್ ಅವರ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಯುಎಇ ಬ್ಯಾಟರ್‌ಗಳು ತಡಕಾಡಿದರು. ಇವರು ಚೆಂಡು ಒಳಗೆ ಬರುತ್ತಿದ್ದಂತೆ ಯುಎಇ ಬ್ಯಾಟರ್‌ಗಳು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿ ಪೆವೆಲಿಯನ್ ಪರೆಡ್ ನಡೆಸಿದರು. ಮೊದಲ ಪಂದ್ಯದಲ್ಲಿ ಪಿಚ್ ಮರ್ಮ ಅರಿತು ಬೌಲಿಂಗ್ ಮಾಡಿದ ಕುಲ್‌ದೀಪ್ 7 ರನ್‌ಗೆ ನಾಲ್ಕು ವಿಕೆಟ್ ಪಡೆದರು. ಈ ಮೂಲಕ ಕುಲ್‌ದೀಪ್ ತಮ್ಮ ಟಿ20 ವೃತ್ತಿ ಜೀವನದಲ್ಲಿ ನಾಲ್ಕನೇ ಬಾರಿಗೆ 4 ವಿಕೆಟ್ ಪಡೆದ ಸಾಧನೆ ಮಾಡಿದರು. ಅಲ್ಲದೆ ಮತ್ತೊಂದು ದಾಖಲೆ ನಿರ್ಮಿಸಿದರು.

ಕುಲ್‌ದೀಪ್ ಯಾದವ್ ಬಾರ್ಬಡಾಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಬಳಿಕ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿರಲಿಲ್ಲ. ಹೀಗಾಗಿ ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿದ್ದವು. ಯುಎಇ ವಿರುದ್ಧ ಮೊನಚಾದ ದಾಳಿ ನಡೆಸಿದ ಕುಲ್‌ದೀಪ್ ಎಲ್ಲರ ಗಮನ ಸೆಳೆದಿದ್ದಾರೆ. ಯುಎಇ ವಿರುದ್ಧದ ಪಂದ್ಯದಲ್ಲಿ, ಕುಲ್‌ದೀಪ್ ತಮ್ಮ ಒಂದು ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದರು. ತವರಿನ ಹೊರಗೆ ಭಾರತದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿಕೆಟ್ ಪಡೆದ ಲೆಕ್ಕಾಚಾರದಲ್ಲಿ ಇವರು ಅಶ್ವಿನ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಅಶ್ವಿನ್ ದಾಖಲೆ ಮೀರಿದ ಕುಲ್‌ದೀಪ್
ಕುಲ್ದೀಪ್ ಇಲ್ಲಿಯವರೆಗೆ ಭಾರತದಿಂದ ಆಚೆ ಒಟ್ಟು 25 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 11.15 ರ ಸರಾಸರಿಯಲ್ಲಿ ಒಟ್ಟು 52 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ವೇಗದ ಬೌಲರ್ ಅರ್ಷದೀಪ್ ಅಗ್ರ ಸ್ಥಾನದಲ್ಲಿದ್ದಾರೆ.
ಭಾರತದಿಂದ ಹೊರಗೆ ಟಿ20 ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಪಡೆದವರು.
ಅರ್ಶ್‌ದೀಪ್ ಸಿಂಗ್ - 45 ಪಂದ್ಯ, 71 ವಿಕೆಟ್
ಹಾರ್ದಿಕ್ ಪಾಂಡ್ಯ - 67 ಪಂದ್ಯ, 63 ವಿಕೆಟ್
ಜಸ್ಪ್ರೀತ್ ಬುಮ್ರಾ - 42 ಪಂದ್ಯ, 62 ವಿಕೆಟ್
ಭುವನೇಶ್ವರ್ ಕುಮಾರ್ - 53 ಪಂದ್ಯ, 56 ವಿಕೆಟ್
ಕುಲದೀಪ್ ಯಾದವ್ - 25 ಪಂದ್ಯ, 52 ವಿಕೆಟ್
ರವಿಚಂದ್ರನ್ ಅಶ್ವಿನ್ - 44 ಪಂದ್ಯ, 50 ವಿಕೆಟ್‌ಗಳು
ಏಷ್ಯಾ ಕಪ್‌ನಲ್ಲಿ ಭಾರತ ಸೆ.10 ರಂದು ಎರಡನೇ ಪಂದ್ಯವನ್ನು ಪಾಕ್ ವಿರುದ್ಧ ಆಡಲಿದ್ದು, ಎಲ್ಲರ ಕಣ್ಣುಗಳು ಕುಲ್‌ದೀಪ್ ಮೇಲೆ ನೆಟ್ಟಿರಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications