ದ್ರಾವಿಡ್ ಬಳಿಕ ದಿಗ್ಗಜ ಆಟಗಾರ ರಾಜಸ್ಥಾನ ಕೋಚ್
ರಾಜಸ್ಥಾನ ರಾಯಲ್ಸ್ (Rajasthan Royals) ಈ ಬಾರಿ ಹೊಸ ಲುಕ್‌ನಲ್ಲಿ ಐಪಿಎಲ್ 2026ರಲ್ಲಿ ಕಾಣಿಸಿಕೊಳ್ಳಲಿದೆ. ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ತಂಡದ ಮುಖ್ಯ ಕೋಚ್ ಹುದ್ದೆಗೆ ಕನ್ನಡಿಗ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ ಬಳಿಕ, ಈ ಹುದ್ದೆಗೆ ಮ್ಯಾನೇಜ್ಮೆಂಟ್ ದಿಗ್ಗಜ ಆಟಗಾರರನ್ನು ತಂದು ಕೂರಿಸಿದೆ. ಈಗಾಗಲೇ ಈ ಕೋಚ್ ಈ ಹಿಂದೆಯೂ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ಶ್ರೀಲಂಕಾ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕುಮಾರ್ ಸಂಗಕ್ಕಾರ (Kumar Sangakkara) ಅವರನ್ನು ಕೋಚ್ ಆಗಿ ನೇಮಿಸಿದೆ. ರಾಹುಲ್ ದ್ರಾವಿಡ್ (Rahul Dravid) ಅವರಿಂದ ತೆರವಾದ ಸ್ಥಾನವನ್ನು ಕುಮಾರ್ ಸಂಗಕ್ಕಾರ ತುಂಬಲಿದ್ದಾರೆ. ಅಲ್ಲದೆ ತಂಡಕ್ಕೆ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ತೊಡಿಸುವ ಕನಸು ಹೊಂದಿದ್ದಾರೆ. 48 ವರ್ಷದ ಸಂಗಾ ಈ ಮೊದಲೇ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಐಪಿಎಲ್ 2021 ರಿಂದ 2024ರ ವರೆಗೆ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಕುಮಾರ್ ಸಂಗಕ್ಕಾರ ಮತ್ತೊಮ್ಮೆ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ. 2025ರಲ್ಲಿ ರಾಹುಲ್ ದ್ರಾವಿಡ್ ಅವರನ್ನು ರಾಜಸ್ಥಾನ ಮುಖ್ಯ ಕೋಚ್ ಆಗಿ ನೇಮಿಸಿತ್ತು. 18ನೇ ಆವೃತ್ತಿಯ ಐಪಿಎಲ್ ಮುಗಿದ ಬಳಿಕ ರಾಹುಲ್ ದ್ರಾವಿಡ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ದ್ರಾವಿಡ್ ಮುಂದಾಳತ್ವದಲ್ಲಿ ರಾಜಸ್ಥಾನ ಕಳೆದ ಬಾರಿ ಅಂಕ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದಿತ್ತು. 18ನೇ ಆವೃತ್ತಿಯಲ್ಲಿ ರಾಯಲ್ಸ್ 14 ಪಂದ್ಯಗಳಲ್ಲಿ ಕೇವಲ ಗೆಲುವು ಗಳಿಸಿತು.
ಸಂಗಕ್ಕಾರ ಹೇಳಿದ್ದೇನು?
ಮತ್ತೆ ಈ ಸ್ಥಾನವನ್ನು ಅಲಂಕರಿಸಲು ನನಗೆ ಖುಷಿಯಾಗುತ್ತದೆ. ಪ್ರತಿಭಾನ್ವಿತ ತಂಡದೊಂದಿಗೆ ಕೆಲಸ ಮಾಡುವುದು ನನಗೆ ಖುಷಿಯ ವಿಚಾರ. ನಮ್ಮಲ್ಲಿ ನುರಿತ ಕೋಚಿಂಗ್ ತಂಡವಿದೆ. ನಮ್ಮ ತಂಡದ ಆಟಗಾರರನ್ನು ಅತ್ಯುತ್ತಮ ರೀತಿಯಲ್ಲಿ ಸಿದ್ಧಪಡಿಸುತ್ತೇವೆ. ನಾವು ಏನು ಸಾಧಿಸಬೇಕು ಎಂಬುದು ನಮಗೆ ತಿಳಿದಿದೆ. ಬಲಿಷ್ಠ ತಂಡವನ್ನು ಕಟ್ಟುವುದೇ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು. ಇನ್ನು ತಮ್ಮ ಕಾರ್ಯಾವಧಿಯಲ್ಲಿ ತಂಡದ ನೀಡಿದ ಪ್ರದರ್ಶನದ ಬಗ್ಗೆಯೂ ಸಂಗಾ ಕಣ್ಣು ಹಾಯಿಸಿದರು. ಇವರ ಮುಂದಾಳತ್ವದಲ್ಲಿ ತಂಡ 2022 ರ ಫೈನಲ್, 2024 ರ ಆವೃತ್ತಿಯಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು ಎಂದು ಸಾಧನೆಯನ್ನು ಮೆಲುಕು ಹಾಕಿದರು.
ನಾಯಕನ ಹುಡುಕಾಟ..
ರಾಜಸ್ಥಾನ ರಾಯಲ್ಸ್ 19ನೇ ಆವೃತ್ತಿಯ ಐಪಿಎಲ್‌ಗೆ ನೂತನ ನಾಯಕನ ಹುಡುಕಾಟ ನಡೆಸಿದೆ. ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಅವರು ಚೆನ್ನೈ ಸೂಪರ್ ಕಿಂಗ್ಸ್‌ಗೆ ಟ್ರೇಡ್ ಆದ ಬೆನ್ನಲ್ಲೆ ಇವರ ಸ್ಥಾನವನ್ನು ತುಂಬ ಬಲ್ಲ ಆಟಗಾರರ ಹುಡುಕಾಟವನ್ನು ನಡೆಸಿದೆ. ಈ ಬಾರಿ ಐಪಿಎಲ್‌ನಲ್ಲಿ ರಾಯಲ್ಸ್ ತಂಡವನ್ನು ಮುನ್ನಡೆಸುವುದು ಯಾರು ಎಂಬುದು ಸಹ ದೊಡ್ಡ ಪ್ರಶ್ನೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications