Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಉತ್ತಮ ಆಟಗಾರರ ಸಂಭಾವನೆ ಹೆಚ್ಚಳಕ್ಕೆ ಕುಂಬ್ಳೆ, ಕೊಹ್ಲಿ ಆಗ್ರಹ

ನವದೆಹಲಿ, ಮೇ 22 : ಭಾರತ ಕ್ರಿಕೆಟ್ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಟಗಾರರ ಪರ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಧ್ವನಿ ಎತ್ತಿದ್ದಾರೆ.

'ಎ' ದರ್ಜೆಯ ಗುತ್ತಿಗೆಯಲ್ಲಿರುವ ಆಟಗಾರರ ಸಂಭಾವನೆಯನ್ನು ಶೇ 150ರಷ್ಟು ಹೆಚ್ಚಳ ಮಾಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಆಗ್ರಹಿಸಿದ್ದಾರೆ.[]

Kumble and Kohli proposes 150 percent hike for Grade A players

ಹೈದರಾಬಾದ್‌ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಬಿಸಿಸಿಐ ಸಿಇಓ ರಾಹುಲ್ ಜೋಹ್ರಿ ಹಾಗೂ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಮ್ಮುಖದಲ್ಲಿ ಕುಂಬ್ಳೆ, ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಂದೆ ಕುಂಬ್ಳೆ ವರದಿ ನೀಡಿದರು.

ವಿರಾಟ್ ಕೊಹ್ಲಿ ಅವರು ಸಭೆಯ ನಂತರ ಸ್ಕೈಪ್ (ವಿಡಿಯೊ ಸಂವಾದ) ಮೂಲಕ ಪದಾಧಿಕಾರಿಗಳೊಂದಿಗೆ ಮಾತನಾಡಿದರು. ಸದ್ಯ 'ಎ' ದರ್ಜೆ ಆಟಗಾರರಿಗೆ 2 ಕೋಟಿ, 'ಬಿ' ದರ್ಜೆಗೆ 1 ಕೋಟಿ ಮತ್ತು 'ಸಿ' ದರ್ಜೆಗೆ 50 ಲಕ್ಷ ರು. ನೀಡಲಾಗುತ್ತಿದೆ.

'ಎ' ದರ್ಜೆಯಲ್ಲಿರುವ ಆಟಗಾರರು ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿಯೂ ಆಡುತ್ತಿದ್ದಾರೆ. ಆದ್ದರಿಂದ ಅವರಿಗೆ ಒಂದು ಋತುವಿಗೆ 5 ಕೋಟಿ ಸಂಭಾವನೆ ನೀಡಬೇಕು ಎಂದು ಕುಂಬ್ಳೆ ಮತ್ತು ಕೊಹ್ಲಿ ಒತ್ತಾಯಿಸಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿವೆ.

Kumble and Kohli proposes 150 percent hike for Grade A players

'ಅನಿಲ್ ಮತ್ತು ವಿರಾಟ್ ಇಬ್ಬರೂ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಆದರೆ ಇಬ್ಬರದ್ದೂ ಒಂದೇ ಬೇಡಿಕೆ ಇದೆ. ಟೆಸ್ಟ್‌ ನಲ್ಲಿ ಉತ್ತಮವಾಗಿ ಆಡುವ ಅಟಗಾರರಿಗೆ ಹೆಚ್ಚಿನ ಮನ್ನಣೆ ಸಿಗಬೇಕು.

ಐಪಿಎಲ್ ಆಡುವ ಅಟಗಾರರು ಹೆಚ್ಚು ಹಣ ಪಡೆಯುವಂತಾಗಿದೆ. ರಣಜಿ ಪಂದ್ಯವನ್ನೂ ಆಡದ ಪವನ್ ನೇಗಿ ಕೇವಲ 45 ದಿನಗಳಿಗೆ 8.5 ಕೋಟಿ ರು. ಪಡೆದಿದ್ದಾರೆ.

ಆದರೆ, ಚೇತೇಶ್ವರ್ ಪೂಜಾರ ಅವರಂತಹ ಟೆಸ್ಟ್ ಆಟಗಾರನಿಗೆ ನೇಗಿಗಿಂತ ಕಡಿಮೆ ಹಣ ಸಿಗುತ್ತಿದೆ. ಈ ಅಸಮತೋಲನ ಸರಿದೂಗಿಸುವ ಕಾರ್ಯವಾಗಬೇಕೆಂದು ಆಗ್ರಹಿಸಿದ್ದಾರೆ'ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+