Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ನಾನು ಆ ರೀತಿ ಹೇಳಿದ್ದು ತಪ್ಪಾಗಿದೆ'; ವಿರಾಟ್ ಕೊಹ್ಲಿ 49ನೇ ಶತಕದ ವೇಳೆ ನೀಡಿದ್ದ ಹೇಳಿಕೆಗೆ ಕುಸಲ್ ಮೆಂಡಿಸ್ ಬೇಸರ!

ಶ್ರೀಲಂಕಾ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಕುಸಲ್ ಮೆಂಡಿಸ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ 49ನೇ ಶತಕದ ದಾಖಲೆಯ ಬಗ್ಗೆ ಕೇಳಿದಾಗ, ಅವರು ವಿವಾದಾತ್ಮಕ ಪ್ರತಿಕ್ರಿಯೆ ಏಕೆ ನೀಡಿದರು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಶತಕ ಗಳಿಸಿದ ನಂತರ, ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದರು.

Kusal Mendis Acknowledges Mistake in Response to Virat Kohlis 49th ODI Century, Expresses Regret

ಇದೇ ವೇಳೆ ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಮುನ್ನ ನಡೆದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ, ಭಾರತ ತಂಡದ ಮಾಜಿ ನಾಯಕನ ಹೊಸ ಮೈಲಿಗಲ್ಲಿನ ಬಗ್ಗೆ ಪತ್ರಕರ್ತರೊಬ್ಬರು ಕುಸಲ್ ಮೆಂಡಿಸ್ ಅವರನ್ನು ಕೇಳಿದರು.

ಆಗ ಶ್ರೀಲಂಕಾ ತಂಡದ ನಾಯಕ ಕುಸಲ್ ಮೆಂಡಿಸ್ ನಾನು ಏಕೆ ಪ್ರತಿಕ್ರಿಯೆ ನೀಡಬೇಕು?, ಅದರಿಂದ ನನಗೆ ಏನಾಗಬೇಕು? ಎಂಬ ವಿಲಕ್ಷಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.

ಆದರೆ, ಆ ಹೇಳಿಕೆಗೆ ಇದೀಗ ಪ್ರತಿಕ್ರಿಯೆ ನೀಡಿ ವಿರಾಟ್ ಕೊಹ್ಲಿಯ ದಾಖಲೆಯ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಆ ರೀತಿ ಪ್ರತಿಕ್ರಿಯಿಸಿದ್ದಕ್ಕಾಗಿ ನನಗೆ ಬೇಸರವಾಯಿತು ಎಂದು ಕುಸಲ್ ಮೆಂಡೀಸ್ ಹೇಳಿದ್ದಾರೆ.

Kusal Mendis Acknowledges Mistake in Response to Virat Kohlis 49th ODI Century, Expresses Regret

"ಪತ್ರಿಕಾಗೋಷ್ಠಿ ವೇಳೆ ವಿರಾಟ್ ಕೊಹ್ಲಿ ತಮ್ಮ 49ನೇ ಏಕದಿನ ಶತಕವನ್ನು ಗಳಿಸಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ. ಪತ್ರಕರ್ತರು ಇದ್ದಕ್ಕಿದ್ದಂತೆ ಕೇಳಿದಾಗ, ನನಗೆ ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ ಮತ್ತು ನನಗೆ ಪ್ರಶ್ನೆಯೂ ಅರ್ಥವಾಗಲಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಗಳಿಸುವುದು ಸುಲಭವಲ್ಲ. ನಾನು ಏನು ಹೇಳಿದೆ ಅದು ತಪ್ಪಾಗಿದೆ, ನಾನು ಅದನ್ನು ಅನುಭವಿಸುತ್ತಿದ್ದೇನೆ," ಎಂದು ಕುಸಲ್ ಮೆಂಡಿಸ್ ಹೇಳಿರುವುದನ್ನು ಏಷ್ಯನ್ ಮಿರರ್ ಉಲ್ಲೇಖಿಸಿ ವರದಿ ಮಾಡಿದೆ.

ನೆದರ್ಲ್ಯಾಂಡ್ಸ್ ವಿರುದ್ಧ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರು.

ಭಾರತದ ಆರಂಭಿಕರಾದ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಬಳಿಕ್ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ 56 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 51 ರನ್ ಗಳಿಸಿ ಔಟಾದರು. ಇದು ಏಕದಿನ ಕ್ರಿಕೆಟ್‌ನಲ್ಲಿ 71ನೇ ಅರ್ಧಶತಕವಾಗಿತ್ತು.

ಈ ಮೂಲಕ ಪ್ರಸಕ್ತ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 594 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದರಲ್ಲಿ 2 ಶತಕ ಮತ್ತು 5 ಅರ್ಧಶತಕಗಳು ಒಳಗೊಂಡಿವೆ.

Story first published: Sunday, November 12, 2023, 17:05 [IST]
Other articles published on Nov 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+