For Quick Alerts
ALLOW NOTIFICATIONS  
For Daily Alerts
 

51ರ ಹರೆಯದಲ್ಲೂ ಅದ್ಭುತ ಕ್ಯಾಚ್‌ ಪಡೆದು ಬೆರಗು ಮೂಡಿಸಿದ ರೋಡ್ಸ್: ವಿಡಿಯೋ

KXIP fielding coach Jonty Rhodes defies age with stunning catch

ನವದೆಹಲಿ: ಜಾಂಟಿ ರೋಡ್ಸ್‌ ಅಂದ ಕೂಡಲೇ ಅವರ ಅದ್ಭುತ ಫೀಲ್ಡಿಂಗ್ ಕಣ್ಣ ಮುಂದೆ ಬರುತ್ತೆ. ಕ್ರಿಕೆಟ್ ಅಂದರೆ ಬ್ಯಾಟಿಂಗ್, ಬೌಲಿಂಗ್‌ನ ರಸದೌತಣ ಮಾತ್ರವಲ್ಲ; ರೋಮಾಂಚಕ ಫೀಲ್ಡಿಂಗ್ ಕೂಡ ಇಲ್ಲಿ ಮನರಂಜಿಸಬಲ್ಲದು ಎಂದು ಜಗಕೆ ಸಾರಿ ಹೇಳಿದವರು ದಕ್ಷಿಣ ಆಫ್ರಿಕಾದ ರೋಡ್ಸ್.

ಜಾಂಟಿ ರೋಡ್ಸ್‌ ಆಡುತ್ತಿದ್ದ ದಿನಗಳಲ್ಲಿ ಅವರ ಅಪ್ರತಿಮ ಫೀಲ್ಡಿಂಗ್‌ ಕಣ್ತುಂಬಿಕೊಳ್ಳಲು ಟಿವಿ ಮುಂದೆ ಕೂರುತ್ತಿದ್ದವರಿದ್ದರು. ಫೀಲ್ಡಿಂಗ್‌ಗೆ ಆ ಪರಿಯ ಖ್ಯಾತಿ ಪಡೆದವರು ರೋಡ್ಸ್. ರೋಡ್ಸ್‌ಗೀಗ 51ರ ಹರೆಯ. ಆದರೆ ಈ ಇಳಿವಯಸ್ಸಲ್ಲೂ ರೋಡ್ಸ್‌ ಅದ್ಭುತ ಕ್ಯಾಚ್‌ ಪಡೆದು ಗಮನ ಸೆಳೆದಿದ್ದಾರೆ.

ಜಾಂಟಿರೋಡ್ಸ್ ಈಗ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಪೀಲ್ಡಿಂಗ್ ಕೋಚ್ ಆಗಿದ್ದಾರೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಆರಂಭಗೊಳ್ಳಲಿರುವ 13ನೇ ಆವೃತ್ತಿಯ ಐಪಿಎಲ್‌ಗಾಗಿ ರೋಡ್ಸ್‌ ತನ್ನ ತಂಡವನ್ನು ಸಜ್ಜುಗೊಳಿಸುತ್ತಿದ್ದಾರೆ. ಈ ವೇಳೆ ರೋಡ್ಸ್‌ ಅವರ ಅದ್ಭುತ ಕ್ಯಾಚ್ ಕಾಣಸಿಕ್ಕಿದೆ.

ಕೆXIಪಿಗೆ ಫೀಲ್ಡಿಂಗ್ ಕೌಶಲಗಳನ್ನು ಹೇಳಿಕೊಡುವಾಗ ಈ ವಿಡಿಯೋ ಸೆರೆ ಹಿಡಿಯಲಾಗಿದೆ. 51ರ ಹರೆಯದಲ್ಲೂ ಕ್ಯಾಚ್ ಪಡೆದು ಬೆರಗು ಮೂಡಿಸಿದ ರೋಡ್ಸ್ ಅವರ ಈ ವಿಡಿಯೋವನ್ನು ಪಂಜಾಬ್ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಜೊತೆಗೆ 'ನೀವು ಹೀಗೆ ಕ್ಯಾಚ್ ಪಡೆಯಬಲ್ಲಿರಾ?' ಎಂದು ಸಾಲೊಂದನ್ನೂ ಸೇರಿಸಿಕೊಂಡಿದೆ.

Story first published: Tuesday, September 15, 2020, 9:46 [IST]
Other articles published on Sep 15, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+