ಕಳೆದ ಐದು ಪಂದ್ಯಗಳಲ್ಲಿ ಪಂಜಾಬ್ ಸಂಪೂರ್ಣ ತಂಡದ ಪ್ರದರ್ಶನ ನೀಡಿದೆ: ಕೆಎಲ್ ರಾಹುಲ್

ಕಿಂಗ್ಸ್ ಇಲೆವೆನ್ ಪಂಜಾಬ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಶುಕ್ರವಾರ ಎದುರಿಸುತ್ತಿದೆ. ಈ ಕಾದಾಟ ಆರಂಭಕ್ಕೂ ಮುನ್ನ ಟಾಸ್ ಸಂದರ್ಭದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ತಂಡದ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಕಳೆದ ಐದು ಪಂದ್ಯಗಳಲ್ಲಿ ಇಡೀ ತಂಡವಾಗಿ ಆಡಿರುವುದು ಗೆಲುವಿಗೆ ಕಾರಣ ಎಂದು ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಕ್ಟೋಬರ್ ಎರಡನೇ ವಾರದವರೆಗೂ ಆಡಿದ ಏಳು ಪಂದ್ಯಗಳಲ್ಲಿ ಆರರಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಹಂತದಿಂದ ಮೇಲೇಳಲು ಸಾದ್ಯವೇ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೆಎಲ್ ರಾಹುಲ್ ಹುಡುಗರು ಟೂರ್ನಿಯಲ್ಲಿ ಎಲ್ಲರೂ ನಿಬ್ಬೆರಗಾಗುವಂತಾ ಪ್ರದರ್ಶನವನ್ನು ನೀಡಿ ಟಾಪ್ 4ರಲ್ಲಿ ಸ್ತಾನ ಗಿಟ್ಟಿಸಿಕೊಂಡಿದ್ದಾರೆ. ಸತತ ಐದು ಪಂದ್ಯಗಳನ್ನು ಗೆದ್ದುಕೊಂಡಿದೆ.
"ರಾಜಸ್ಥಾನ್ ವಿರುದ್ಧ ಪಂದ್ಯದಲ್ಲಿ ಟಾಸ್ ಸೋತು ರಾಜಸ್ಥಾನ್ ಬೌಲಿಂಗ್ ಆಯ್ಕೆ ಮಾಡಿಕೊಮಡ ಬಳಿಕ ಮಾತನಾಡಿದ ಕೆಎಲ್ ರಾಹುಲ್, ನಾವು ಕೂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೆವು. ಆದರೆ ಇಂದಿನ ಪಿಚ್ ಗಮಸಿನಿದರೆ ಸಂಪೂರ್ಣ 40 ಓವರ್‌ವರೆಗೂ ಒಂದೇ ರೀತಿ ವರ್ತಿಸುವ ಸಾಧ್ಯತೆಯಿದೆ" ಎಂದಿದ್ದಾರೆ ಕೆಎಲ್ ರಾಹುಲ್.
ಟೂರ್ನಿಯಲ್ಲಿ ರಾಜಸ್ಥಾನ್ ಪಂದ್ಯಕ್ಕೂ ಮುನ್ನ ಆಡಿದ 12 ಪಂದ್ಯಗಳ ಪೈಕಿ 6ರಲ್ಲಿ ಪಂಜಾಬ್ ಗೆಲುವು ಸಾಧಿಸಿ 6 ಸೋಲು ಕಂಡಿದೆ. ಹೀಗಾಗಿ 12 ಅಂಕಗಳು ಕಿಂಗ್ಸ್ ಖಾತೆಯಲ್ಲಿದೆ. ಇನ್ನು ಕೂಡ ಎರಡು ಪಂದ್ಯಗಳು ಇರುವುದರಿಂದ ತಂಡ ಸಾಕಷ್ಟು ಸಕಾರಾತ್ಮಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications