ರೋಹಿತ್ ಗಾಯದ ಬಗ್ಗೆ ಸ್ಪಷ್ಟತೆಯ ಕೊರತೆಯಿತ್ತು, ಗೊಂದಲವಿತ್ತು: ಕೊಹ್ಲಿ

ಸಿಡ್ನಿ: ಭಾರತದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಗಾಯದ ವಿಚಾರದಲ್ಲಿ ಸ್ಪಷ್ಟತೆಯ ಕೊರತೆಯಿತ್ತು, ಗೊಂದಲವಿತ್ತು ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಇದೇ ಕಾರಣಕ್ಕೆ ಭಾರತ-ಆಸ್ಟ್ರೇಲಿಯಾ ಸರಣಿಗೆ ಶರ್ಮಾ ಲಭ್ಯತೆಯನ್ನು ಕಾದು ನೋಡುವಂತೆ ಮಾಡಿತ್ತು ಎಂದು ಕೊಹ್ಲಿ ತಿಳಿಸಿದ್ದಾರೆ.
ನವೆಂಬರ್ 27ರ ಶುಕ್ರವಾರ ಆರಂಭವಾಗಲಿರುವ ಆಸ್ಟ್ರೇಲಿಯಾ vs ಭಾರತ ಏಕದಿನ ಸರಣಿಗೂ ಮುನ್ನ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ತಿಂಗಳ ಮುನ್ನ ನಡೆದಿದ್ದ ಆಯ್ಕೆ ಸಮಿತಿ ಸಭೆಯ ವೇಳೆ ಶರ್ಮಾ ತಾನು ಆಸ್ಟ್ರೇಲಿಯಾ ಸರಣಿಗೆ ಅಲಭ್ಯನಾಗಲಿದ್ದೇನೆ ಎಂದು ತಿಳಿಸಿದ್ದರು ಎಂದು ಕೊಹ್ಲಿ ಮಾಹಿತಿ ನೀಡಿದ್ದಾರೆ.
'ಆಯ್ಕೆ ಸಮಿತಿಯ ಸಭೆಗೂ ಮುನ್ನ ರೋಹಿತ್ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಲಭ್ಯರಾಗಲಿದ್ದಾರೆ ಎಂಬ ಮೇಲ್ ನಮಗೆ ಬಂದಿತ್ತು. ಐಪಿಎಲ್ ವೇಳೆ ಗಾಯಕ್ಕೀಡಾಗಿದ್ದರಿಂದ ರೋಹಿತ್ ಈ ನಿರ್ಧಾರ ತಾಳಿದ್ದರು. ಗಾಯದ ಸ್ಥಿತಿಯ ಬಗ್ಗೆ ಶರ್ಮಾಗೆ ಮನದಟ್ಟು ಮಾಡಲಾಗಿದ್ದರಿಂದ ಅವರು ಸರಣಿಗೆ ಅಲಭ್ಯರಾಗಿದ್ದನ್ನು ಅರಿತುಕೊಂಡಿದ್ದರು,' ಎಂದು ವಿರಾಟ್ ಹೇಳಿದ್ದಾರೆ.
ಯುಎಇಯಲ್ಲಿ ನಡೆದಿದ್ದ 13ನೇ ಆವೃತ್ತಿಯ ಐಪಿಎಲ್ ವೇಳೆ ಗಾಯಕ್ಕೀಡಾಗಿದ್ದ ರೋಹಿತ್, ಭಾರತ ತಂಡದ ಜೊತೆಗೆ ಆಸ್ಟ್ರೇಲಿಯಾಕ್ಕೆ ಹೋಗದೆ ಭಾರತಕ್ಕೆ ವಾಪಸ್ಸಾಗಿದ್ದರು. ಆದರೆ ರೋಹಿತ್ ಭಾರತಕ್ಕೆ ಬಂದಿದ್ದಕ್ಕೆ ಅಸಲಿ ಕಾರಣ ಅವರ ತಂದೆಗೆ ಕೊರೊನಾ ತಗುಲಿದ್ದು ಎಂದು ತಿಳಿದುಬಂದಿತ್ತು. ಅಂತೂ ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ ಆಡೋ ಸಾಧ್ಯತೆ ತೀರಾ ಕಡಿಮೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications