ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಆಸ್ಟ್ರೇಲಿಯನ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಪುರಷರ ಸಿಂಗಲ್ಸ್‌ನಲ್ಲಿ ಅಬ್ಬರಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ 2-1 ಅಂತರದಿಂದ ಚೈನೀಸ್ ತೈಪೆಯ ಚೌ ಟಿಯೆನ್-ಚಿನ್ ಅವರನ್ನು ಮಣಿಸಿದ್ದಾರೆ. ಭಾನುವಾರ ಪ್ರಶಸ್ತಿ ಸುತ್ತಿನ ಕಾದಾಟವನ್ನು ಲಕ್ಷ್ಯ ಸೇನ್ ಆಡಲಿದ್ದಾರೆ.
ಸಿಡ್ನಿ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಆರಂಭ ಉತ್ತಮ ಆರಂಭವಾಗಿರಲಿಲ್ಲ. ಈ ಅವಧಿಯಲ್ಲಿ ಲಕ್ಷ್ಯ ಸೇನ್ 6-11 ರಿಂದ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. ಲಕ್ಷ್ಯ ಸೇನ್ 17-21 ರಿಂದ ಆರಂಭದಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ತನಗಿನಿಂತ ಕಡಿಮೆ ಶ್ರೇಯಾಂಕಿತ ಲಕ್ಷ್ಯ ಸೇನ್ ವಿರುದ್ಧ ಚೈನೀಸ್ ತೈಪೆಯ ಆರ್ಭಟಿಸಿದರು.

ಎರಡನೇ ಸೆಟ್‌ನಲ್ಲಿ ಲಕ್ಷ್ಯ ಸೇನ್ ಅಮೋಘ ಪ್ರದರ್ಶನ ನೀಡಿದರು. ಈ ವೇಳೆ ಉಭಯ ಆಟಗಾರರು ಸುಲಭವಾಗಿ ಅಂಕಗಳನ್ನ ನೀಡಲಿಲ್ಲ. ಪರಿಣಾಮ ಮಹತ್ವದ ಪಂದ್ಯ ರೋಚಕತೆಯಿಂದ ಕೂಡಿತ್ತು. ಅಂತಿಮ ಕ್ಷಣದವರೆಗೂ ನಡೆದ ಜಿದ್ದಾಜಿದ್ದಿನ ಕಾಳಗದಲ್ಲಿ ಲಕ್ಷ್ಯ ಸೇನ್ ಅಬ್ಬರಿಸಿದರು. ಈ ಸೆಟ್‌ನ್ನು ಲಕ್ಷ್ಯ ಸೇನ್ 24-22 ಅಂತರದಲ್ಲಿ ಗೆದ್ದು ಬೀಗಿದರು. ಮೂರನೇ ಸೆಟ್‌ನಲ್ಲಿ ಲಕ್ಷ್ಯ ಸೇನ್ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಆರಂಭದಲ್ಲಿ ಲಕ್ಷ್ಯ ಸೇನ್ 6-1 ರಿಂದ ಮುನ್ನಡೆ ಸಾಧಿಸಿದರು. ಅಲ್ಲದೆ ಈ ಪಂದ್ಯವನ್ನು ಲಕ್ಷ್ಯ ಸೇನ್ 21-16 ಅಂತರದಲ್ಲಿ ಗೆದ್ದು ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು. ಲಕ್ಷ್ಯ ಈಗ ಫೈನಲ್‌ನಲ್ಲಿ ಜಪಾನ್‌ನ ಯುಶಿ ತನಕಾ ಅಥವಾ ಚೈನೀಸ್ ತೈಪೆಯ ಲಿನ್ ಚುನ್-ಯಿ ಅವರನ್ನು ಎದುರಿಸಬಹುದು.
ಜಪಾನ್ ಆಟಗಾರ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಯುಶಿ ತನಕಾ 21-18, 21-15 ರಿಂದ ಲಿನ್ ಚುನ್-ಯಿ ವಿರುದ್ಧ ಭರ್ಜರಿ ಜಯ ಸಾಧಿಸಿದರು. ಜಪಾನ್ ಆಟಗಾರ 38 ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು. ಎರಡು ನೇರ ಸೆಟ್‌ಗಳ ಹೋರಾಟದಲ್ಲಿ ಜಪಾನ್ ಆಟಗಾರ ಆರಂಭದಿಂದಲೂ ಸ್ಯಾಪ್ ಶಾಟ್‌ಗಳ ಮೂಲಕ ಅಬ್ಬರಿಸಿದರು. ಅಲ್ಲದೆ ಗ್ಯಾಪ್ ಶಾಟ್‌ಗಳ ಮೂಲಕ ಅಂಕಗಳನ್ನು ಕಲೆ ಹಾಕಿದರು. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಯುಶಿ ತನಕಾ, ಲಕ್ಷ್ಯ ಸೇನ್ ವಿರುದ್ಧ ಹೋರಾಟ ನಡೆಸಲಿದ್ದಾರೆ.