Lakshya Sen: ಲಕ್ಷ್ಯ ಮುಡಿಗೆ ಆಸ್ಟ್ರೇಲಿಯಾ ಓಪನ್ ಕಿರೀಟ
ಭಾರತದ ಸ್ಟಾರ್ ಪುರುಷರ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಆಸ್ಟ್ರೇಲಿಯನ್ ಓಪನ್ ಸೂಪರ್ 500 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ 2 ನೇರ ಗೇಮ್‌ಗಳಲ್ಲಿ ಜಪಾನ್‌ನ ಯುಶಿ ತನಕಾ ಅವರನ್ನು ಮಣಿಸಿ ಅಬ್ಬರಿಸಿದರು. ಈ ಮೂಲಕ ಲಕ್ಷ್ಯ ಸೇನ್ ವೃತ್ತಿಜೀವನದ ಮೂರನೇ ಸೂಪರ್ 500 ಪ್ರಶಸ್ತಿ ಪಡೆದರು.
ಮೊದಲ ಗೇಮ್‌ನಿಂದಲೂ ಲಕ್ಷ್ಯ ಸೇನ್ ಅಮೋಘ ಆಟವನ್ನು ಆಡಿದರು. ಈ ವೇಳೆ ಲಕ್ಷ್ಯ ಸೇನ್ ಅವರು ಜಪಾನ್ ಆಟಗಾರನ ತಂತ್ರವನ್ನು ಮೆಟ್ಟಿನಿಂತು ಅಂಕಗಳನ್ನು ಗಳಿಸಿದರು. ಅಲ್ಲದೆ 11-8 ರಿಂದ ಮುನ್ನಡೆ ಸಾಧಿಸಿದರು. ಬಳಿಕ ಪುಟಿದೆದ್ದ ಜಪಾನ್ ಆಟಗಾರ ಅಂಕಗಳಿಗೆ ಚುರುಕು ಮುಟ್ಟಿಸಿದರು. ಯುಶಿ ತನಕಾ 13-14 ಅಂಕಗಳಿಂದ ಜಿದ್ದಾಜಿದ್ದಿನ ಫೈಟ್ ನೀಡಲು ಸಜ್ಜಾದರು. ಆದರೆ ಇವರ ಹೋರಾಟ ಗೇಮ್‌ನಲ್ಲಿ ಹೆಚ್ಚು ಹೊತ್ತು ಮುನ್ನಡೆಯನ್ನು ತಂದು ಕೊಡಲಿಲ್ಲ. ಈ ಗೇಮ್‌ನ ಕೊನೆಯ ವರೆಗೂ ಅಮೋಘ ಪ್ರದರ್ಶನ ನೀಡಿದ ಲಕ್ಷ್ಯ ಸೇನ್ ಮೊದಲ ಗೇಮ್ ಗೆದ್ದರು.

ಎರಡನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಜಪಾನ್‌ನ ಯುಶಿ ತನಕಾ ಸುಲಭವಾಗಿ ಅಂಕಗಳನ್ನು ಬಿಟ್ಟು ಕೊಡಲಿಲ್ಲ. ಆದರೆ ಲಕ್ಷ್ಯ ಸೇನ್ ಮಾತ್ರ ಯಾವುದಕ್ಕೂ ಧೃತಿ ಗೆಡದೆ ತಾವು ಹಾಕಿಕೊಂಡಿದ್ದ ಯೋಜನೆಯಂತೆ ಅಂಕಗಳನ್ನು ಬಾಚಿಕೊಳ್ಳುತ್ತಾ ಸಾಗಿದರು. ಎರಡನೇ ಗೇಮ್‌ನ ಫಸ್ಟ್ ಹಾಫ್‌ನಲ್ಲೂ ಲಕ್ಷ್ಯ ಸೇನ್ 11-5 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡರು. ಈ ವೇಳೆ ಯುಶಿ ತನಕಾ ಅವರು, ಲಕ್ಷ್ಯ ಸೇನ್ ಅವರ ಸ್ನ್ಯಾಷ್‌ಗಳಿಗೆ ಉತ್ತರಿಸುವಲ್ಲಿ ಎಡವಿದರು.
ಲಕ್ಷ್ಯ ಸೇನ್ ಅಬ್ಬರ
ಲಕ್ಷ್ಯ ಸೇನ್ ಸಮಯ ಕಳೆದಂತೆ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದರು. ನೋಡ ನೋಡುತ್ತಲೇ ಅಂಕಗಳ ಅಂತರ ಹೆಚ್ಚಾಗುತ್ತಲೇ ಸಾಗಿತು. ಈ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಯುಶಿ ತನಕಾ ಬೆವರು ಹರಿಸಿದರು. ಆದರೆ ಫಲ ಲಭಿಸಲಿಲ್ಲ. ಅಂತಿಮವಾಗಿ ಲಕ್ಷ್ಯ ಸೇನ್ 21-11 ರಿಂದ ಜಯ ಸಾಧಿಸಿದರು. 38 ನಿಮಿಷಗಳ ಹೋರಾಟದಲ್ಲಿ ಲಕ್ಷ್ಯ ಅಬ್ಬರಿಸಿ ಪ್ರಶಸ್ತಿಗೆ ಮುತ್ತಿಟ್ಟರು.
ಭಾರತದ ಪರ ಲಕ್ಷ್ಯ ಸೇನ್ ಒಲಿಂಪಿಕ್ಸ್ ಟೂರ್ನಿಯ ಪುರುಷರ ಸಿಂಗಲ್ಸ್ ಟೂರ್ನಿಯ ಕಂಚಿನ ಪದಕದ ಹೋರಟ ನಡೆಸಿದ್ದರು. ಆದರೆ ಆ ಪಂದ್ಯದಲ್ಲಿ ಜಯ ಸಾಧಿಸುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications