ನರೇಂದ್ರ ಮೋದಿ ಸ್ಟೇಡಿಯಂ ನೆಲಸಮಗೊಳಿಸಿ ಮರುನಿರ್ಮಾಣ ಮಾಡುತ್ತಿದ್ದೆ: ಲಲಿತ್ ಮೋದಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರು ಕರಿಷ್ಮಾ ಮೆಹ್ತಾ ಅವರೊಂದಿಗಿನ ಸಂಭಾಷಣೆಯಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ನಾನು ಅಲ್ಲಿ ಇದಿದ್ದರೆ ಈ ಕ್ರೀಡಾಂಗಣವನ್ನು ಕೆಡವಿ ಅದನ್ನು ಸಂಪೂರ್ಣವಾಗಿ ಪುನರ್ನಿರ್ಮಿಸುತ್ತಿದ್ದೆ. ಅಲ್ಲದೆ ವರ್ಷದ 365 ದಿನವೂ ಈ ಸ್ಥಳವನ್ನು ಸಕ್ರಿಯವಾಗಿ ಇಡಲು ಶ್ರಮಿಸುತ್ತಿದ್ದೆ. ಅಲ್ಲದೆ ಜನರನ್ನು ಆಕರ್ಷಿಸುವ ಮನರಂಜನಾ ಕೇಂದ್ರವನ್ನಾಗಿ ಬದಲಾಯಿಸಬೇಕು ಎಂಬುದು ಅವರ ಅಭಿಪ್ರಾಯವಾಗಿದೆ. ಕ್ರೀಡಾಂಗಣದಲ್ಲಿ ಆಧುನಿಕ ಎಸ್ಕಲೇಟರ್‌ಗಳು, ಆಧುನಿಕ ಅಡುಗೆಮನೆಗಳು, ಆಧುನಿಕ ರೆಸ್ಟೋರೆಂಟ್‌ಗಳನ್ನು ನಿರ್ಮಿಸಿ ಜನರನ್ನು ಸೆಳೆಯುತ್ತಿದ್ದೆ ಎಂದು ತಿಳಿಸಿದ್ದಾರೆ.
ನಾನು ಒಂದು ವೇಳೆ ಅಲ್ಲಿ ಈಗ ಇದ್ದಿದ್ದರೆ ನಿಶ್ಚಿತವಾಗಿ ಆ ಮೈದಾನವನ್ನು ನೆಲಸಮ ಗೊಳಿಸಿ, ಆಧುನಿಕ ಟಚ್ ನೀಡುತ್ತಿದ್ದೆ. ಈ ಮೈದಾನದಲ್ಲೂ ಅತ್ಯಾಧುನಿಕ ಎಸ್ಕಲೇಟರ್‌ಗಳು, ಹೈಟೆಕ್ ಅಡುಗೆಮನೆಗಳು, ಗುಣಮಟ್ಟದ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸುತ್ತಿದ್ದೆ. ಇಂತಹ ಕ್ರೀಡಾಂಗಣಗಳನ್ನು ಬರೀ ಪಂದ್ಯಗಳಿಗೆ ಮಾತ್ರ ಬಳಸದೆ ವರ್ಷ ಪೂರ್ತಿ ಜನರ ಬೀಡಾಗುವಂತಹ ಆಕರ್ಷಣೀಯ ತಾಣವನ್ನಾಗಿ ಮಾಡುತ್ತಿದ್ದೆ ಎಂದು ಮೋದಿ ಹೇಳಿದ್ದಾರೆ.

ಆಧುನಿಕ ಟಚ್
ಆಧುನಿಕ ಕ್ರೀಡಾಂಗಣಗಳು ಕೇವಲ ಪಂದ್ಯಗಳಿಗೆ ಮಾತ್ರ ಸೀಮಿತವಾಗಿರಬಾರದು ಎಂದು ಲಲಿತ್ ಮೋದಿ ನಂಬಿದ್ದಾರೆ. ಶಾಪಿಂಗ್ ಮಾಲ್‌ಗಳು, ಮನರಂಜನಾ ಪ್ರದೇಶಗಳು, ಪ್ರೀಮಿಯಂ ಆತಿಥ್ಯ ಸೌಲಭ್ಯಗಳು ಮತ್ತು ಪ್ರೇಕ್ಷಕರಿಗೆ ಹೆಚ್ಚು ಆರಾಮದಾಯಕ ವಾತಾವರಣವನ್ನು ಒಳಗೊಂಡಿರುವ ಸಂಕೀರ್ಣವನ್ನು ಕಲ್ಪಿಸಿಕೊಂಡಿದ್ದಾಗಿ ಲಲಿತ್ ಮೋದಿ ತಿಳಿಸಿದ್ದಾರೆ.
ಫೈವ್ ಸ್ಟಾರ್ ಗುಣಮಟ್ಟದ ಸ್ನಾನಗೃಹಗಳು, ಸ್ವಯಂಚಾಲಿತವಾಗಿ ಸ್ವಚ್ಛಗೊಳ್ಳುವ ಶೌಚಾಲಯಗಳು, ಅತ್ಯಾಧುನಿಕ ಮೂಲಸೌಕರ್ಯ ಇರಬೇಕು ಎಂದು ತಿಳಿಸಿದ್ದಾರೆ. ಪ್ರೇಕ್ಷಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಪಂದ್ಯ ಮುಗಿದ ಬಳಿಕ ಹಾಗೂ ಆರಂಭಕ್ಕೂ ಐದು ನಿಮಿಷ ಮುಂಚಿತವಾಗಿ ಕ್ರೀಡಾಂಗಣಕ್ಕೆ ಬಂದು ಹೋಗುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.
ಹೈಜೀನಿಕ್ ಸೌಲಭ್ಯ
ಕ್ರಿಕೆಟ್ ಪಂದ್ಯಗಳು ಮೂರು ಗಂಟೆಗಳ ಕಾಲ ಮಾತ್ರ ನಡೆಯುತ್ತಿದೆ. ಆದರೆ ಅಭಿಮಾನಿಗಳು ಚಿಕ್ಕ ಮಕ್ಕಳೊಂದಿಗೆ 3 ರಿಂದ 4 ಗಂಟೆ ಮುಂಚಿತವಾಗಿ ಬರುತ್ತಾರೆ. ಅವರ ಮನಸ್ಸಿಗೆ ಮುದ ನೀಡುವ ವಾತಾವರಣವನ್ನು ನಾವು ಸಿದ್ಧಪಡಿಸಬೇಕು. ಹೈಜೀನಿಕ್ ಸೌಲಭ್ಯಗಳು ಮತ್ತು ಗುಣಮಟ್ಟದ ಆಹಾರ ಸಿಗಬೇಕು. ದುರದೃಷ್ಟವಶಾತ್ ಇವತ್ತಿನ ದಿನಗಳಲ್ಲಿ ಅದೇ ಕೊರತೆಯಾಗಿದೆ ಎಂದು ಲಲಿತ್ ಮೋದಿ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications