Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಮೋ ಎಂದರೇನು? ರಾಜಕಾರಣಿಗಳು ಏಕೆ ಹೆದರುತ್ತಾರೆ?

ನವದೆಹಲಿ, ಜೂ.23: ಐಪಿಎಲ್ ನ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಹಲವಾರು ಪ್ರಮುಖ ರಾಜಕಾರಣಿಗಳ ನಿದ್ದೆಗೆಡಿಸುತ್ತಿದ್ದಾರೆ. ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ಹೆಸರು #lalitgate ನಲ್ಲಿ ಕೇಳಿ ಬಂದಿದೆ.

ಅರುಣ್ ಜೇಟ್ಲಿ ಅವರು ವಿತ್ತ ಸಚಿವರಲ್ಲದೆ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಡೆಲ್ಲಿ ಅಂಡ್ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅವ್ಯವಹಾರಗಳನ್ನು ಈಗ ಲಲಿತ ಮೋದಿ(ಲಮೋ) ಹೊರ ಹಾಕಿದ್ದಾರೆ.

ಧೈರ್ಯವಿದ್ದರೆ ಅರುಣ್ ಜೇಟ್ಲಿ ಅವರು ತಮ್ಮ ಫೋನ್ ಕರೆಗಳನ್ನು ಸಾರ್ವಜನಿಕರ ಮುಂದಿಡಲಿ. ತಾಜ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದು, ಶ್ರೀನಿವಾಸನ್ ಅವರನ್ನು ಯಾವಾಗ ಎಲ್ಲಿ ಭೇಟಿ ಮಾಡಿದರು ಎಂಬ ವಿಷಯ ಹೊರ ಹಾಕಲಿ.

ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ವಲ್ಪ ಅರುಣ್ ಜೇಟ್ಲಿ ಸೇರಿದಂತೆ ಡಿಡಿಸಿಎ ಅಧಿಕಾರಿಗಳ ಐಷಾರಾಮಿ ಹೋಟೆಲ್ ವಾಸ್ತವ್ಯ ಟಿಎ ಡಿಎ ಲೆಕ್ಕಾಚಾರವನ್ನು ಪರಿಶೀಲಿಸಲಿ ಎಂದು ಲಮೋ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಅವರು ರತ್ನಾಕರ್ ಶೆಟ್ಟಿಗೆ ಬರೆದ ಪತ್ರವನ್ನು ಲಮೋ ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್ ಮಾಫಿಯಾ ಕ್ಲೀನ್ ಮಾಡುವಾಸೆ

ಕ್ರಿಕೆಟ್ ಮಾಫಿಯಾ ಕ್ಲೀನ್ ಮಾಡುವಾಸೆ

ಕ್ರಿಕೆಟ್ ಮಾಫಿಯಾ ಕ್ಲೀನ್ ಮಾಡುವಾಸೆ ಇದೆ. ವಿಶ್ವ ಕ್ರಿಕೆಟ್ ಗೆ ಐಪಿಎಲ್ ಪರಿಚಯಿಸಿದ ಹೆಮ್ಮೆ ನನಗಿದೆ. ಅದರೆ, ಹಗರಣಕ್ಕೆ ನಾನೇ ಕಾರಣ ಎಂದು ಬಲಿಪಶು ಮಾಡುತ್ತಿದ್ದಾರೆ. ಕ್ರಿಕೆಟ್ ನಲ್ಲಿರುವ ಭ್ರಷ್ಟಾಚಾರವನ್ನು ತೊಲಗಿಸೋಣ

ಕ್ರಿಕೆಟ್ ಕಾಡುತ್ತಿರುವ ಗ್ಯಾಂಗ್ ಆಫ್ ಫೈವ್

ರಾಜೀವ್ ಶುಕ್ಲಾ ಸೇರಿದಂತೆ ಪ್ರಮುಖರ ಹೆಸರುಗಳನ್ನು ಇನ್ಸ್ಟಾ ಗ್ರಾಮ್ ಮೂಲಕ ಹೇಳಿದ ಲಮೋ.

ತಾಜ್ ಹೋಟೆಲಿನಲ್ಲಿ ನಡೆದಿದ್ದೇನು?

ತಾಜ್ ಹೋಟೆಲಿನಲ್ಲಿ ನಡೆದಿದ್ದೇನು? ಯಾರು ಯಾರು ಅಲ್ಲಿ ತಂಗಿದ್ದರು ಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಪಡೆಯಲಿ.

ಸಂಸದ ರಾಜೀವ್ ಶುಕ್ಲಾಗೆ ಪ್ರಶ್ನೆ ಹಾಕಿದ ಲಮೋ

ಸಂಸದ ರಾಜೀವ್ ಶುಕ್ಲಾಗೆ ಪ್ರಶ್ನೆ ಹಾಕಿದ ಲಲಿತ್ ಮೋದಿ.

ಶ್ರೀನಿವಾಸನ್ ಹಾಗೂ ಜೇಟ್ಲಿ ಭೇಟಿ

ಶ್ರೀನಿವಾಸನ್ ಹಾಗೂ ಜೇಟ್ಲಿ ಭೇಟಿ ವಿವರ ಬಹಿರಂಗವಾಗಲಿ

ರಾಜಕೀಯ ಒತ್ತಡಗಳು ಕೆಲಸ ಮಾಡಬಾರದು

ಖಂಡಿತ ನಾವು ಯಾವುದೇ ಶಿಕ್ಷೆ ಎದುರಿಸಲು ಸಿದ್ಧ. ಆದರೆ ಯಾವುದೇ ರಾಜಕೀಯ ಒತ್ತಡಗಳು ಕೆಲಸ ಮಾಡಬಾರದು ಎಂದು ಮೋದಿ

ದೂರವಾಣಿ ಸಂಭಾಷಣೆ ಬಹಿರಂಗಪಡಿಸಬೇಕು

ಅರುಣ್ ಜೇಟ್ಲಿಯವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ಗಳ ಹಗರಣದಲ್ಲಿ ಅವರ ದೂರವಾಣಿ ಸಂಭಾಷಣೆ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಐಟಿ ಇಲಾಖೆಗೆ ನಾನು ನೀಡಿರುವ ದಾಖಲೆ ಬಹಿರಂಗಪಡಿಸಿದ್ದೇನೆ ಎಂದು ಲಮೋ ಹೇಳಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+