Fifa World Cup ಇತಿಹಾಸದಲ್ಲಿ ಕಿರಿಯ ವಯಸ್ಸಿನಲ್ಲಿ ಗೋಲು ದಾಖಲಿಸಿದ ಟಾಪ್ 5 ಸಾಧಕರು
ಫುಟ್ಬಾಲ್ ವಿಶ್ವಕಪ್ ನಲ್ಲಿ ಸ್ಪೇನ್ ತಂಡದ ಪರ ಆಡುವಾಗ ಲ್ಯಾಮಿನೆ ಯಮಲ್ ಹೊಸ ಇತಿಹಾಸ ಬರೆದರು. ಇವರು ಫಿಫಾ ವಿಶ್ವಕಪ್‌ನ ಎಚ್ ಗುಂಪಿನ ಪಂದ್ಯದಲ್ಲಿ ಅಮೋಘ ಕಾಲ್ಚಳಕ ಪ್ರದರ್ಶಿಸಿ ಗೋಲು ದಾಖಲಿಸಿದರು. ಈ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಸ್ಪೇನ್ ತಂಡದ ಪರ ಹೊಸ ಭರವಸೆಯ ಆಶಾಕಿರಣ ಮೂಡಿಸಿದರು. ರೈಟ್ ವಿಂಗ್‌ನಲ್ಲಿ ಆಡುವ ಲ್ಯಾಮಿನೆ ಯಮಲ್ ಭರ್ಜರಿ ಪ್ರದರ್ಶನ ನೀಡಿ ತಂಡದ ಗೋಲು ಖಾತೆಯನ್ನು ಓಪನ್ ಮಾಡಿದರು.
ದಕ್ಷಿಣ ಆಫ್ರಿಕಾದ ಪುಟ್ಟ ರಾಷ್ಟ್ರವಾದ ಕೇಪ್ ವರ್ಡೆ ವಿರುದ್ಧ ಡ್ರಾ ಸಾಧಿಸಿದ ಬಳಿಕ ಸ್ಪೇನ್ ನಿರಾಸೆ ಗೊಂಡಿತ್ತು. ಆದರೆ ಭಾನುವಾರ ಸೌದಿ ಅರೇಬಿಯಾ ವಿರುದ್ಧ ಸೊಗಸಾದ ಆಟದ ಪ್ರದರ್ಶನ ನೀಡಿತು. ಈ ಮೂಲಕ ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ಚಿಕ್ಕ ವಯಸ್ಸಿನಲ್ಲಿ ಗೋಲು ದಾಖಲಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು ದೊಡ್ಡ ವೇದಿಕೆಯಲ್ಲಿ 18 ವರ್ಷ ಹಾಗ 343 ದಿನಗಳಲ್ಲಿ ಗೋಲು ಬಾರಿಸಿದರು. ಹಾಗಿದ್ದರೆ ಫುಟ್ಬಾಲ್ ವಿಶ್ವಕಪ್‌ನಲ್ಲಿ ಕಿರಿಯ ವಯಸ್ಸಿನಲ್ಲಿ ಗೋಲು ದಾಖಲಿಸಿದ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

ಪೀಲೆ (17 ವರ್ಷ, 239 ದಿನ)
ಬ್ರೆಜಿಲ್ ತಂಡ ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರ ಪೀಲೆ ವಿಶ್ವಕಪ್ ಇತಿಹಾಸದಲ್ಲಿ ಚಿಕ್ಕ ವಯಸ್ಸಿನಲ್ಲಿ ಗೋಲು ದಾಖಲಿಸಿದ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. ಇವರು 1958ರಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ವೇಲ್ಸ್ ತಂಡದ ವಿರುದ್ಧ ಗೋಲು ಬಾರಿಸಿ ಸಾಧನೆ ಮಾಡಿದರು. ಈ ಗೋಲು ಫಿಫಾ ವಿಶ್ವಕಪ್‌ನ ಐಕಾನಿಕ್ ಗೋಲುಗಳಲ್ಲಿ ಒಂದಾಗಿದೆ.
ಮ್ಯಾನುಯೆಲ್ ರೋಸಾಸ್ (18 ವರ್ಷ, 93 ದಿನ)
ಉದ್ಘಾಟನಾ ಫಿಫಾ ವಿಶ್ವಕಪ್‌ನಲ್ಲಿ ಮೆಕ್ಸಿಕೊ ತಂಡದ ಪರ ಆಡುತ್ತಿದ್ದ ಮ್ಯಾನುಯೆಲ್ ರೋಸಾಸ್ ಇತಿಹಾಸ ಬರೆದರು. ಮೆಕ್ಸಿಕೊ ತಂಡಕ್ಕೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಇವರು ಸದುಪಯೋಗ ಪಡಿಸಿಕೊಂಡರು. ಮೊದಲು ಅರ್ಜೆಂಟೀನಾ ಗೋಲ್ ಕೀಪರ್ ಇದನ್ನು ತಡೆದರು. ಆದರೆ ಮರಳಿ ಪ್ರಯತ್ನ ಪಟ್ಟ ಮ್ಯಾನುಯೆಲ್ ರೋಸಾಸ್ ಗೋಲು ಬಾರಿಸಿದರು. ಇದು ಸಹ ವಿಶ್ವಕಪ್‌ನ ಇತಿಹಾಸದ ಪುಟ ಸೇರಿದೆ.
ಗವಿ (18 ವರ್ಷ, 110 ದಿನ)
ಸ್ಪೇನ್‌ನ ಮಿಡ್‌ಫೀಲ್ಡ್ ಅದ್ಭುತ ಆಟಗಾರ ಗವಿ 2022 ರಲ್ಲಿ ತಮ್ಮ ಚಾಣಕ್ಯತನದಿಂದ ಗೋಲು ಬಾರಿಸಿದರು. ಕೋಸ್ಟರಿಕಾ ವಿರುದ್ಧದ ಪಂದ್ಯದಲ್ಲಿ ಇವರು ಮಿಂಚಿದರು. ಅಲ್ವಾರೊ ಮೊರಾಟಾ ಅವರ ಫ್ಲೋಟೆಡ್ ಕ್ರಾಸ್ ಅನ್ನು ಎದುರಿಸಿದ ಅವರು, ತಮ್ಮ ಬಲಗಾಲಿನಿಂದ ಅದ್ಭುತವಾದ ಗೋಲು ಹೊಡೆದರು. ಚೆಂಡು ಪೋಸ್ಟ್‌ನಿಂದ ಹೊರಗೆ ಹೋಗಿ ನೆಟ್‌ಗೆ ತಲುಪಿತು, ಇದು ಅವರ ಚಿಕ್ಕ ವಯಸ್ಸಿನಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿಸಿದಂತೆ ಇತ್ತು.
ಇಬ್ರಾಹಿಂ ಎಂಬಾಯೆ (18 ವರ್ಷ, 143 ದಿನ)
ಸೆನೆಗಲ್ ತಂಡದ ಪ್ರತಿಭಾನ್ವಿತ ಆಟಗಾರ ಇಬ್ರಾಹಿಂ ಎಂಬಾಯೆ ಈ ಸಾಲಿನ ವಿಶ್ವಕಪ್‌ನಲ್ಲಿ ಅಮೋಘ ಕಾಲ್ಚಳಕ ಪ್ರದರ್ಶಿಸಿ ಗಮನ ಸೆಳೆದರು. ಇವರು ತಮ್ಮ ಉತ್ತಮ ಸ್ಟೆಪ್-ಓವರ್ ಮೂಲಕ ಫ್ರಾನ್ಸ್ ತಂಡದ ಡಿಫೆಂಡರ್ ಅವರನ್ನು ಸೋಲಿಸಿ ಗೋಲು ಬಾರಿಸಿದರು.
ಮೈಕೆಲ್ ಓವನ್ (18 ವರ್ಷ, 190 ದಿನ)
1998 ರಲ್ಲಿ ಮೈಕೆಲ್ ಓವನ್ ಇಂಗ್ಲೆಂಡ್ ಪರ ವಿಶ್ವಕಪ್ ಆಡಿ ಮಿಂಚು ಹರಿಸಿದ ಆಟಗಾರ. ರೊಮೇನಿಯಾ ವಿರುದ್ಧ ತಮ್ಮ 18ನೇ ವಯಸ್ಸಿನಲ್ಲಿ ಗೋಲು ಬಾರಿಸಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications