ಲ್ಯಾನ್ಸ್ ಕ್ಲುಸ್ನರ್ : ದೆಹಲಿ ರಣಜಿ ತಂಡಕ್ಕೆ ಸಲಹೆಗಾರ ಕಮ್ ಕೋಚ್

ನವದೆಹಲಿ, ಸೆಪ್ಟೆಂಬರ್ 04: ದೆಹಲಿ ರಣಜಿ ತಂಡದ ಸಲಹೆಗಾರ ಕಮ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಲ್ಯಾನ್ಸ್ ಕ್ಲುಸ್ನರ್ ಅವರನ್ನು ನೇಮಿಸಲಾಗಿದೆ. 2018-19ರ ಋತುವಿನಲ್ಲಿ ದೆಹಲಿಯ ಮಾಜಿ ನಾಯಕ ಮಿಥುನ್ ಮನ್ಹಾಸ್ ಕೋಚ್ ಆಗಿದ್ದರೆ, ಲ್ಯಾನ್ಸ್ ಕ್ಲುಸ್ನರ್ ಕನ್ಸಲ್ಟಂಟ್ ಕೋಚ್ ಆಗಿರುತ್ತಾರೆ ಎಂದು ದೆಹಲಿ ಕ್ರಿಕೆಟ್ ಮಂಡಳಿ(ಡಿಸಿಸಿಎ) ಪ್ರಕಟಿಸಿದೆ.
'ಸೆಪ್ಟಂಬರ್ 19ರಿಂದ ಆರಂಭವಾಗುವ ವಿಜಯ್ ಹಜಾರೆ ಹಾಗೂ ದೇವಧರ್ ಟ್ರೋಫಿ ಹಾಗೂ 2019ರಲ್ಲಿ ನಡೆಯುವ ದೇಸಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ದೆಹಲಿ ರಣಜಿ ತಂಡದ ಸಲಹೆಗಾರರಾಗಿ ಕ್ಲುಸ್ನರ್ ಅವರು ಕಾರ್ಯನಿರ್ವಹಿಸಲಿದ್ದಾರೆ' ಎಂದು ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಜತ್ ಶರ್ಮಾ ಅವರು ಪಿಟಿಐಗೆ ತಿಳಿಸಿದರು.
46 ವರ್ಷ ವಯಸ್ಸಿನ ಲ್ಯಾನ್ಸ್ ಕ್ಲುಸ್ನರ್ ಅವರು ದಕ್ಷಿಣ ಆಫ್ರಿಕಾದ ಪರ 49 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1906 ರನ್ ಹಾಗೂ 80 ವಿಕೆಟ್‌ಗಳನ್ನು ಗಳಿಸಿದ್ದದರೆ. 171 ಏಕದಿನ ಪಂದ್ಯಗಳಲ್ಲಿ 3576 ರನ್ ಹಾಗೂ 192 ವಿಕೆಟ್‌ಗಳನ್ನು ಪಡೆದಿದ್ದಾರೆ.
1999 ರ ವಿಶ್ವಕಪ್ನಲ್ಲಿ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೈ ಆದ ಪಂದ್ಯದಲ್ಲಿ ದುರಂತ ನಾಯಕನಾಗಿ ಕ್ಲುಸ್ನರ್ ಕಾಣಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications