For Quick Alerts
ALLOW NOTIFICATIONS  
For Daily Alerts
 

ಲಂಕಾ ಪ್ರೀಮಿಯರ್ ಲೀಗ್: ಕ್ಯಾಂಡಿಗೆ ಗೇಲ್, ಗ್ಯಾಲೆಗೆ ಮಾಲಿಂಗ ಆಯ್ಕೆ

Lanka Premier League: Kandy pick Chris Gayle, Lasith Malinga joins Galle

ಕೊಲಂಬೊ: ಶ್ರೀಲಂಕಾ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್, ಮಾಜಿ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವೆಸ್ಟ್ ಇಂಡೀಸ್ ಆಲ್ ರೌಂಡರ್, ಸುಮಾರು 300 ಟಿ20 ಪಂದ್ಯಗಳನ್ನಾಡಿರುವ ಆ್ಯಂಡ್ರೆ ರಸೆಲ್ ಅವರು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕೊಲಂಬೊ ಕಿಂಗ್ಸ್ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ.

ಮ್ಯಾಥ್ಯೂಸ್ ಟೂರ್ನಿಯ ಸ್ಥಳೀಯ ಐಕಾನ್ ಆಗಿದ್ದರೆ, ಡು ಪ್ಲೆಸಿಸ್ ಮತ್ತು ಆ್ಯಂಡ್ರೆ ರಸೆಲ್ ವಿದೇಶಿ ಐಕಾನ್‌ಗಳಾಗಿ ಗಮನ ಸೆಳೆದಿದ್ದಾರೆ. ಇನ್ನು ಕ್ಯಾಂಡಿ ಟಸ್ಕರ್ಸ್ ತಂಡ ಕ್ರಿಸ್ ಗೇಲ್ ಮತ್ತು ಲಿಯಾಮ್ ಪ್ಲಂಕೆಟ್ ಅವರ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ತಂಡಕ್ಕೆ ತಿಲಕರತ್ನೆ ದಿಲ್ಶನ್ ಕೋಚ್ ಆಗಿರಲಿದ್ದಾರೆ.

ಗ್ಯಾಲೆ ಗ್ಲಾಡಿಯೇಟರ್ಸ್‌ ತಂಡಕ್ಕ ಸ್ಥಳೀಯ ಐಕಾನ್ ಲಸಿತ್ ಮಾಲಿಂಗ, ಪಾಕಿಸ್ತಾನದ ಸೂಪರ್ ಸ್ಟಾರ್ ಶಾಹಿದ್ ಅಫ್ರಿದಿ, ದಕ್ಷಿಣ ಆಫ್ರಿಕಾದ ಕಾಲಿನ್ ಇಂಗ್ರಾಮ್ ಹೆಸರಿಸಲ್ಪಟ್ಟಿದ್ದಾರೆ. ಈ ತಂಡಕ್ಕೆ ಪಾಕಿಸ್ತಾನದ ಕೋಚ್ ಮೋಯಿನ್ ಖಾನ್ ಕೋಚ್ ಆಗಿರಲಿದ್ದಾರೆ.

ದಂಬುಲ್ಲ ಹೌಕ್ಸ್ ತಂಡದಲ್ಲಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಿಲ್ಲರ್, ವೆಸ್ಟ್ ಇಂಡೀಸ್‌ನ ಕಾರ್ಲೋಸ್ ಬ್ರಾತ್‌ವೇಟ್ ಒಪ್ಪಂದ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್‌ನ ಜಾನ್ ಲೂಯಿಸ್ ಕೋಚ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Story first published: Tuesday, October 20, 2020, 10:30 [IST]
Other articles published on Oct 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+