ಲಂಕಾ ಪ್ರೀಮಿಯರ್ ಲೀಗ್ ಪ್ರಸಾರದ ಹಕ್ಕು ಗೆದ್ದ ಸೋನಿ, ಸ್ಕೈ ಸ್ಪೋರ್ಟ್ಸ್

ಕೊಲಂಬೋ: ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ಪಂದ್ಯಗಳನ್ನು ದೂರದರ್ಶನ ಮತ್ತು ಇಂಟರ್‌ನೆಟ್ ಪ್ರೋಟೊಕಾಲ್ ಟೆಲಿವಿಷನ್ (ಐಪಿಟಿವಿ) ಮೂಲಕ ಪ್ರಸಾರ ಮಾಡುವ ಹಕ್ಕನ್ನು ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ (ಎಸ್‌ಪಿಎನ್) ಇಂಡಿಯಾ ಪಡೆದುಕೊಂಡಿದೆ.
ಎಲ್‌ಪಿಎಲ್ ಪಂದ್ಯಗಳನ್ನು ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಭಾರತದಲ್ಲಿ ಅಲ್ಲದೆ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ, ಭೂತಾನ್, ಮಾಲ್ಡೀವ್ಸ್ ದೇಶಗಳಲ್ಲಿ ನೇರಪ್ರಸಾರಗೊಳಿಸಲಿದೆ. ಯುಕೆಯಲ್ಲಿ ಎಲ್‌ಪಿಎಲ್ ಪಂದ್ಯಗಳನ್ನು ಪ್ರಸಾರಿಸುವ ಹಕ್ಕನ್ನು ಜಾಗತಿಕ ಕ್ರೀಡಾ ಪ್ರಸಾರಕ ಸ್ಕೈ ಸ್ಪೋರ್ಟ್ಸ್ ಪಡೆದುಕೊಂಡಿದೆ.
ಲಂಕಾ ಪ್ರೀಮಿಯರ್ ಲೀಗ್ ನವೆಂಬರ್ 26ರಿಂದ ಡಿಸೆಂಬರ್ 16ರ ವರೆಗೆ ನಡೆಯಲಿದೆ. ಹಂಬಂಟೋಟಾದಲ್ಲಿನ ಮಹಿಂದ ರಾಜಪಕ್ಸ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿದೆ. ಒಟ್ಟು 5 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿವೆ.
ಕೊಲಂಬೋ, ಕ್ಯಾಂಡಿ, ಗ್ಯಾಲೆ, ದಂಬುಲ್ಲ, ಜಾಫ್ನಾ ಹೆಸರಿನ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಒಟ್ಟು 23 ಪಂದ್ಯಗಳು 15 ದಿನಗಳ ಕಾಲ ನಡೆಯಲಿವೆ. ಆರಂಭಿಕ ಪಂದ್ಯದಲ್ಲಿ ಕೊಲಂಬೋ ತಂಡ ಕ್ಯಾಂಡಿಯ ಸವಾಲು ಸ್ವೀಕರಿಸಲಿದೆ. ಶಾಹಿದ್ ಅಫ್ರಿದಿ, ಶೋಯೆಬ್ ಮಲಿಕ್, ಇರ್ಫಾನ್ ಪಠಾಣ್, ಏಂಜಲೋ ಮ್ಯಾಥ್ಯೂಸ್ ಇತ್ಯಾದಿ ಸ್ಟಾರ್‌ಗಳು ಟೂರ್ನಿಯಲ್ಲಿ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications