Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಗಸ್ಟ್ 28ರಿಂದ 'ಲಂಕಾ ಪ್ರೀಮಿಯರ್ ಲೀಗ್' ಆರಂಭ: ಶ್ರೀಲಂಕಾ ಕ್ರಿಕೆಟ್

Lanka Premier League to kick off on August 28: Sri Lanka Cricket

ಕೊಲಂಬೋ, ಜುಲೈ 28: ಲಂಕಾ ಪ್ರೀಮಿಯರ್ ಲೀಗ್ ಉದ್ಘಾಟನಾ ಟೂರ್ನಿ ಆಗಸ್ಟ್ 28ರಿಂದ ಆರಂಭಗೊಳ್ಳಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಸೋಮವಾರ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಎಲ್‌ಪಿಎಲ್‌ಗೆ ಬೋರ್ಡ್ ಅನುಮೋದನೆ ನೀಡಿದೆ.

ಲಂಕಾ ಪ್ರೀಮಿಯರ್ ಲೀಗ್ ಒಟ್ಟಿಗೆ 23 ಪಂದ್ಯಗಳನ್ನು ಒಳಗೊಂಡಿರಲಿದ್ದು, 5 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. 'ಶ್ರೀಲಂಕಾ ಕ್ರಿಕೆಟ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲಂಕಾ ಪ್ರೀಮಿಯರ್ ಲೀಗ್‌ಗೆ ಅನುಮೋದನೆ ನೀಡಲಾಗಿದೆ. ಈ ಟಿ20 ಟೂರ್ನಿ ಆಗಸ್ಟ್ 28ರಿಂದ 20 ಸೆಪ್ಟೆಂಬರ್‌ವರೆಗೆ ನಡೆಯಲಿದೆ,' ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಹೇಳಿಕೆ ಮೂಲಕ ತಿಳಿಸಿದೆ.

'ಅಂತಾರಾಷ್ಟ್ರೀಯ ಕ್ರೀಡಾಂಗಣಗಳಾದ ಆರ್ ಪ್ರೇಮದಾಸ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ರಂಗಿರಿ ದಂಬುಲು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಪಲ್ಲೆಕೆಲೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ಸುರಿಯವೆವ ಮಹಿಂದ ರಾಜಪಕ್ಸೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಈ ನಾಲ್ಕು ಕ್ರೀಡಾಂಗಣಗಳಲ್ಲಿ ಟೂರ್ನಿ ನಡೆಯಲಿದೆ,' ಎಂದು ಎಸ್‌ಎಲ್‌ಸಿ ಹೇಳಿದೆ.

'ಟೂರ್ನಿಯಲ್ಲಿ ಪಾಲ್ಗೊಳ್ಳುವ ಐದು ತಂಡಗಳನ್ನು ಕೊಲಂಬೋ ಸಿಟಿಗಳ ಪ್ರಕಾರ ಹೆಸರಿಸಲಾಗಿದೆ. ಅವುಗಳೆಂದರೆ ಕೊಲಂಬೋ, ಕ್ಯಾಂಡಿ, ಗ್ಯಾಲೆ, ದಂಬುಲ್ಲ ಮತ್ತು ಜಫ್ನ. ಶ್ರೀಲಂಕಾದ ಮುಂಚೂಣಿ ಕ್ರಿಕೆಟಿಗರ ನಾಯಕತ್ವದಲ್ಲಿ ಸುಮಾರು 70 ಅಂತಾರಾಷ್ಟ್ರೀಯ ಆಟಗಾರರು, 10 ಪ್ರಮುಖ ಕೋಚ್‌ಗಳು ಟೂರ್ನಿಗೆ ಲಭ್ಯರಿರುವುದಾಗಿ ಖಾತರಿಪಡಿಸಿದ್ದಾರೆ,' ಎಂದು ಬೋರ್ಡ್ ಮಾಹಿತಿ ನೀಡಿದೆ.

Story first published: Tuesday, July 28, 2020, 19:24 [IST]
Other articles published on Jul 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+