Lanka T10 Super League: ಮ್ಯಾಚ್ ಫಿಕ್ಸಿಂಗ್ ಆರೋಪ; ಗಾಲೆ ಮಾರ್ವೆಲ್ಸ್ ತಂಡದ ಮಾಲೀಕ ಬಂಧನ
ಲಂಕಾ ಟಿ10 ಸೂಪರ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಗಾಲೆ ಮಾರ್ವೆಲ್ಸ್ ತಂಡದ ಮಾಲೀಕ ಪ್ರೇಮ್ ಠಾಕೂರ್ ಅವರನ್ನು ಬಂಧಿಸಲಾಗಿದೆ. ಟೂರ್ನಿ ಪ್ರಾರಂಭವಾದ ಒಂದು ದಿನದ ನಂತರ ಗುರುವಾರ ಕ್ಯಾಂಡಿಯ ಹೋಟೆಲ್‌ನಲ್ಲಿ ಠಾಕೂರ್ ಅವರನ್ನು ಬಂಧಿಸಲಾಗಿತ್ತು. ಶುಕ್ರವಾರ ಕೊಲಂಬೊ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಅವರನ್ನು ಡಿಸೆಂಬರ್ 16 ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಪ್ರೇಮ್ ಠಾಕೂರ್ ಭಾರತೀಯ ಪ್ರಜೆಯಾಗಿದ್ದು, ಶ್ರೀಲಂಕಾದ 2019ರ ಕ್ರೀಡಾ ಅಪರಾಧ ತಡೆ ಕಾಯ್ದೆಯಡಿ ಬಂಧಿಸಲಾಗಿದೆ. ಶ್ರೀಲಂಕಾದಲ್ಲಿ ಕ್ರೀಡೆಗೆ ಸಂಬಂಧಿಸಿದ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಈ ಕಾನೂನು ಜಾರಿಗೊಳಿಸಲಾಗಿದೆ. ಪ್ರೇಮ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆಫರ್ ನೀಡಿದ್ದಾರೆ ಎಂದು ವಿದೇಶಿ ಆಟಗಾರರೊಬ್ಬರು ಆರೋಪಿಸಿದ್ದರು. ಈ ಆರೋಪದ ಮೇಲೆ ಪ್ರೇಮ್ ಅವರನ್ನು ಬಂಧಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಎಲ್‌ಪಿಎಲ್‌ನಂತೆ, ಶ್ರೀಲಂಕಾ ಕ್ರಿಕೆಟ್‌ನ ಕೋರಿಕೆಯ ಮೇರೆಗೆ ಟೂರ್ನಿಯ ಮೇಲ್ವಿಚಾರಣೆಗಾಗಿ ಐಸಿಸಿಯ ಭ್ರಷ್ಟಾಚಾರ ವಿರೋಧಿ ಘಟಕದ ಪ್ರತಿನಿಧಿಯೂ ಶ್ರೀಲಂಕಾದಲ್ಲಿದ್ದಾರೆ. ಅಲ್ಲದೆ, ಲಂಕಾ ಟಿ10 ಸೂಪರ್ ಟೂರ್ನಿ ನಿರ್ದೇಶಕ ಸಮಂತಾ ದೊಡನವೆಲ್ಲಾ ಪಂದ್ಯಾವಳಿ ನಿಗದಿತ ಸಮಯಕ್ಕೆ ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ.
ಲಂಕಾ ಟಿ10 ಸೂಪರ್ ಲೀಗ್ ಶ್ರೀಲಂಕಾದಲ್ಲಿ ನಡೆಯುತ್ತಿರುವ ಮೊದಲ ಟಿ10 ಫ್ರಾಂಚೈಸಿ ಟೂರ್ನಿಯಾಗಿದೆ.
ಇನೋವೇಟಿವ್ ಪ್ರೊಡಕ್ಷನ್ ಗ್ರೂಪ್, ಟಿ10 ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಮತ್ತು ಟಿ10 ಗ್ಲೋಬಲ್ ಸ್ಪೋರ್ಟ್ಸ್ ಸಹಯೋಗದಲ್ಲಿ ಈ ಟೂರ್ನಿ ಆಯೋಜನೆಗೊಂಡಿದೆ.
ಗಾಲೆ ಮಾರ್ವೆಲ್ಸ್ ತಂಡದ ಆಟಗಾರರು
ಮಹೇಶ್ ತೀಕ್ಷಣ (ನಾಯಕ), ಶಕೀಬ್ ಅಲ್ ಹಸನ್, ಭಾನುಕಾ ರಾಜಪಕ್ಸೆ, ಬಿನುರಾ ಫೆರ್ನಾಂಡೋ, ಅಲೆಕ್ಸ್ ಹೇಲ್ಸ್, ಲ್ಯೂಕ್ ವುಡ್, ಚಮಿಂದು ವಿಕ್ರಮಸಿಂಘೆ, ಜೆಫ್ರಿ ವಾಂಡರ್ಸೆ, ಆಂಡ್ರೆ ಫ್ಲೆಚರ್, ಜಹೂರ್ ಖಾನ್, ಸಂದುನ್ ವೀರಕ್ಕೋಡಿ, ಪ್ರಭಾತ್ ಜಯಸೂರ್ಯ, ಡುಮಿನ್‌ಸಿಡು ವಿಲ್‌ಶಿವ, ಕೆಸ್ರಿಕ್‌ಡು ವಿಲ್‌ಶಿಯ ರಾಜಪಕ್ಸೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications