ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್ ಪಂದ್ಯ ಇತಿಹಾಸದ ಪುಟ ಸೇರಿದೆ. ಶ್ರೀಲಂಕಾದ ಬ್ಯಾಟ್ಸ್‌ಮನ್ ಕಮಿಂದು ಮೆಂಡಿಸ್ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆಯನ್ನು ದಾಖಲೆಯನ್ನು ನಿರ್ಮಿಸಿದ್ದಾರೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ 2 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಸಿಲ್ಹೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 5 ವಿಕೆಟ್ ಕಳೆದುಕೊಂಡು ಕೇವಲ 47 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 464 ರನ್ ಗಳಿಸಬೇಕಿದೆ. ಶ್ರೀಲಂಕಾ ಮೊದಲಿ ಇನ್ನಿಂಗ್ಸ್‌ನಲ್ಲಿ 280 ರನ್ ಸಿಡಿಸಿದರೆ, ಬಾಂಗ್ಲಾ ಮೊದಲ ಇನ್ನಿಂಗ್ಸ್‌ನಲ್ಲಿ 188 ರನ್ ಸೇರಿಸಿ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 418 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು ಹಿಂಬಾಲಿಸಿ ಬಾಂಗ್ಲಾ ತಂಡ ಈಗಾಗಲೇ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 57 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕಮಿಂದು ಮೆಂಡಿಸ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದರು. ಇವರ ಮೇಲೆ ಬಹಳಷ್ಟು ಒತ್ತಡವಿತ್ತು. ಏಳನೇ ವಿಕೆಟ್‌ಗೆ ಕಮಿಂದು ಮೆಂಡಿಸ್ ಹಾಗೂ ಧನಂಜಯ್ ಡಿ ಸಿಲ್ವಾ 202 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾದರು.
ಮೊದಲು ಮೆಂಡಿಸ್ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ ಶ್ರೀಲಂಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ 61 ರನ್ ಗಳಿಸಿದ್ದರು.
ಎರಡನೇ ಇನ್ನಿಂಗ್ಸ್‌ನಲ್ಲಿ, ಮೆಂಡಿಸ್ ಅವರನ್ನು ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು ಬಂದ ಅವರು 164 ರನ್‌ಗಳ ಇನ್ನಿಂಗ್ಸ್ ಕಟ್ಟಿದರು. ಇದರೊಂದಿಗೆ ಕಮಿಂದು ಮೆಂಡಿಸ್ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 7 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಇವರಲ್ಲದೆ ಧನಂಜಯ್ ಡಿ ಸಿಲ್ವಾ ಕೂಡ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದಾರೆ. ಮೆಂಡಿಸ್ ಮತ್ತು ಡಿ ಸಿಲ್ವಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಮೂರನೇ ಜೋಡಿ ಎನಿಸಿಕೊಂಡಿರು. ಅವರಿಗಿಂತ ಮೊದಲು, ಆಸ್ಟ್ರೇಲಿಯಾ ಗ್ರೆಗ್ ಮತ್ತು ಇಯಾನ್ ಚಾಪೆಲ್ 1974 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕಗಳನ್ನು ಗಳಿಸಿದ್ದರು.
2014ರಲ್ಲಿ ಮಿಸ್ಬಾ ಉಲ್-ಹಕ್ ಮತ್ತು ಅಜರ್ ಅಲಿ ಆಸ್ಟ್ರೇಲಿಯ ವಿರುದ್ಧದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಮೆಂಡಿಸ್ ಮತ್ತು ಡಿಸಿಲ್ವಾ ನಡುವೆ ಮೊದಲ ಇನಿಂಗ್ಸ್‌ನಲ್ಲಿ 202 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 173 ರನ್‌ಗಳ ಜೊತೆಯಾಟವಿತ್ತು.
ಈ ಪಂದ್ಯದಲ್ಲಿ ಜಯ ಸಾಧಿಸುವುದು ಬಾಂಗ್ಲಾದೇಶಕ್ಕೆ ಕಷ್ಟವಾಗಿದೆ. ಆದರೆ ಅಸಾಧ್ಯವಂತೂ ಅಲ್ಲವೇ ಅಲ್ಲ. ಕೆಳ ಮಧ್ಯಮ ಕ್ರಮಾಂಕದ ಆಟಗಾರರ ಬ್ಯಾಟಿಂಗ್ ಮೇಲೆ ಬಾಂಗ್ಲಾ ಭವಿಷ್ಯ ನಿಂತಿದೆ. ಇಲ್ಲದಿದ್ದರೆ ಮೊದಲು ಟೆಸ್ಟ್‌ನಲ್ಲಿ ಸೋಲು ಎದುರಿಸಬೇಕಾಗುತ್ತದೆ.