For Quick Alerts
ALLOW NOTIFICATIONS  
For Daily Alerts
 

ಲಂಕಾ ತಂಡಕ್ಕೆ ಮಲಿಂಗ ಬೌಲಿಂಗ್ ಕೋಚ್‌

ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ 2026ರ ಟಿ20 ವಿಶ್ವಕಪ್ ಆಯೋಜಿಸುತ್ತಿವೆ. ಈ ಟೂರ್ನಿಗೆ ಈಗಾಗಲೇ ಹಲವು ದೇಶಗಳು ತಮ್ಮ ತಮ್ಮ ತಂಡವನ್ನು ಪ್ರಕಟಿಸಿವೆ. ಇದೇ ವೇಳೆ ಶ್ರೀಲಂಕಾ ತಂಡ ದಿಗ್ಗಜ ವೇಗದ ಬೌಲರ್‌ ಲಸಿತ್‌ ಮಲಿಂಗ ಅವರಿಗೂ ತಂಡದಲ್ಲಿ ಸ್ಥಾನ ನೀಡಿದೆ. ಲಸಿತ್ ಮಲಿಂಗ ಅವರು ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಇವರ ಆಯ್ಕೆಯನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಂಗಳವಾರ ಖಚಿತ ಪಡಿಸಿದೆ.

ಟಿ20 ವಿಶ್ವಕಪ್‌ಗೆ ಒಂದು ವಾರ ಮುಂಚಿತವಾಗಿ ಲಸಿತ್ ಮಲಿಂಗ ತಮ್ಮ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಇವರು ಚಿಕ್ಕ ಅವಧಿಗಾಗಿ ಶ್ರೀಲಂಕಾ ತಂಡದ ಕೋಚ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇವರು ತಮ್ಮ ಅನುಭವವನ್ನು ಲಂಕಾ ತಂಡಕ್ಕೆ ಧಾರೆ ಎರೆಯಲಿದ್ದಾರೆ. ಈ ವೇಳೆ ವೇಗದ ಬೌಲರ್‌ಗಳಿಗೆ ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಲಿದ್ದಾರೆ.

Lasith Malinga Appointed as Sri Lanka s Bowling Coach for 2026 T20 World Cup

ಮಲಿಂಗ ಅವರು ಶ್ರೀಲಂಕಾ ತಂಡದ ಸ್ಟಾರ್ ಆಟಗಾರರಲ್ಲಿ ಒಬ್ಬರು. ಇವರು 2007 ರಿಂದ 2014ರ ವರೆಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಇವರ ಉಪಸ್ಥಿತಿಯಲ್ಲಿ ಶ್ರೀಲಂಕಾ ತಂಡ 2007 ಹಾಗೂ 2011 ಏಕದಿನ ವಿಶ್ವಕಪ್‌ ಫೈನಲ್‌ಗೆ ಅರ್ಹತೆ ಪಡೆದಿತ್ತು. 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಪಂದ್ಯದ ವೇಳೆ ಲಂಕಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಅಲ್ಲದೆ 2009 ಹಾಗೂ 2012ರ ವಿಶ್ವಕಪ್‌ ವೇಳೆ ರನ್ನರ್‌ ಅಪ್‌ ಸ್ಥಾನವನ್ನು ಅಲಂಕರಿಸಿತ್ತು. ಲಂಕಾ ಎರಡನೇ ಬಾರಿಗೆ ಟಿ20 ವಿಶ್ವಕಪ್‌ ಗೆಲ್ಲುವ ಕನಸು ಕಾಣುತ್ತಿದೆ.

ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಫೆ.8 ರಂದು ಆರಂಭಿಸಲಿದೆ. ಈ ಪಂದ್ಯದಲ್ಲಿ ಆತಿಥೇಯ ಲಂಕಾ ತಂಡ ಐರ್ಲೆಂಡ್‌ ವಿರುದ್ಧ ಮೊದಲ ಪಂದ್ಯ ಆಡಲಿದೆ. ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಐರ್ಲೆಂಡ್‌, ಓಮನ್‌, ಜಿಂಬಾಬ್ವೆ ತಂಡಗಳು ಸ್ಥಾನ ಪಡೆದಿವೆ. ಫೆ.12 ರಂದು ಓಮನ್‌ ವಿರುದ್ಧ, ಫೆ.16 ರಂದು ಆಸ್ಟ್ರೇಲಿಯಾ ವಿರುದ್ಧ, ಫೆ.19 ರಂದು ಜಿಂಬಾಬ್ವೆ ವಿರುದ್ಧ ಶ್ರೀಲಂಕಾ ಲೀಗ್‌ ಹಂತದ ಪಂದ್ಯಗಳನ್ನು ಆಡಲಿದೆ.

Lasith Malinga Appointed as Sri Lanka s Bowling Coach for 2026 T20 World Cup

ಮಲಿಂಗ ಸಾಧನೆ

ಶ್ರೀಲಂಕಾದ ದಿಗ್ಗಜ ವೇಗದ ಬೌಲರ್‌ ಲಸಿತ್ ಮಲಿಂಗ ತಮ್ಮ ಬಿಗುವಿನ ದಾಳಿಯಂತೆ, ಕೋಚಿಂಗ್‌ ಸ್ಕಿಲ್‌ ಮೂಲಕವೂ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಇವರು ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಪರ ಕೋಚ್‌ ಆಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಲಸಿತ್ ಮಲಿಂಗ ಅವರು ಶ್ರೀಲಂಕಾ ತಂಡಕ್ಕೆ ಎಂಟ್ರಿ ನೀಡಿದ್ದು, ನಿಶ್ಚಿತವಾಗಿ ತಂಡಕ್ಕೆ ಬೂಸ್ಟ್ ನೀಡಿದಂತೆ ಆಗಿದೆ. ಈ ವೇಳೆ ತಂಡ 11 ವರ್ಷಗಳಿಂದ ಮಾಯಾ ಜಿಂಕೆಯಂತೆ ಕಾಡುತ್ತಿರುವ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದೆ. 22 ಯಾರ್ಡ್‌ ಸರ್ಕಲ್‌ನಲ್ಲಿ ತಮ್ಮ ಕರಾರುವಾಕ್‌ ಯಾರ್ಕರ್‌ನಿಂದ ಗಮನ ಸೆಳೆದಿದ್ದ ಮಲಿಂಗ, ಇನ್ನು ಕೋಚ್‌ ಕ್ಯಾಪ್‌ ಧರಿಸಲಿದ್ದಾರೆ.

Story first published: Wednesday, December 31, 2025, 19:52 [IST]
Other articles published on Dec 31, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+