ಏಷ್ಯಾ ಕಪ್ 2018 : ಶ್ರೀಲಂಕಾ ತಂಡಕ್ಕೆ ಮರಳಿದ ಲಸಿತ್ ಮಾಲಿಂಗಾ

ಕೊಲಂಬೋ, ಸೆಪ್ಟೆಂಬರ್ 02: ಏಷ್ಯಾಕಪ್ ಕ್ರಿಕೆಟ್ ಟೂರ್ನಿ 2018ಗಾಗಿ 16 ಮಂದಿ ಸದಸ್ಯರುಳ್ಳ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ವೇಗಿ ಲಸಿತ್ ಮಾಲಿಂಗಾ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮಾಲಿಂಗಾ ಮರಳಿದ್ದಾರೆ.
301 ಏಕದಿನ ವಿಕೆಟ್ ಗಳನ್ನು ಗಳಿಸಿರುವ ಅನುಭವಿ ವೇಗಿ ಮಾಲಿಂಗಾ ಅವರು ಸೆಪ್ಟೆಂಬರ್ 03, 2017ರಂದು ಕೊನೆ ಪಂದ್ಯವಾಡಿದ್ದರು. ಆನಂತರ ಟಿ20 ಪಂದ್ಯವೊಂದರನ್ನು ಆಡಿದ್ದು ಬಿಟ್ಟರೆ, ತಂಡದಿಂದ ದೂರ ಉಳಿದಿದ್ದರು.
ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಬಿ ಗುಂಪಿನಲ್ಲಿವೆ. ಲಂಕನ್ನರು ಸೆಪ್ಟೆಂಬರ್ 15ರಂದು ತಮ್ಮ ಮೊದಲ ಪಂದ್ಯವನ್ನು ದುಬೈನಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಲಿದೆ.
ಶ್ರೀಲಂಕಾ ತಂಡ : ಏಂಜೆಲೋ ಮ್ಯಾಥ್ಯೂಸ್ (ನಾಯಕ), ಕುಸಲ್ ಪೆರೆರಾ, ಕುಸಲ್ ಮೆಂಡಿಸ್, ಉಪುಲ್ ತರಂಗಾ, ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಥಿಸರಾ ಪೆರೆರಾ, ದಸುನ್ ಶನಕ, ಧನಂಜಯ ಡಿ ಸಿಲ್ವಾ, ಅಕಿಲ ಧನಂಜಯ, ದುಲ್ರುವಾನ್ ಪೆರೆರಾ, ಅಮಿಲಾ ಅಪೊನ್ಸೊ, ಕಸುನ್ ರಂಜಿತಾ, ಸುರಂಗಾ ಲಕ್ಮಲ್, ದುಷ್ಮಂತಾ ಚಮೀರಾ, ಲಸಿತ್ ಮಾಲಿಂಗಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications