ಟಿ20 ವಿಶ್ವಕಪ್‌ನಲ್ಲಿ ಲಸಿತ್ ಮಾಲಿಂಗ ಪಾಲ್ಗೊಳ್ಳುವ ಬಗ್ಗೆ ಶ್ರೀಲಂಕಾ ಆಯ್ಕೆ ಸಮಿತಿ ಭರವಸೆ

ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ವೇಗದ ಬೌಲರ್‌ಗಳ ಪೈಕಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಲಸಿತ್ ಮಾಲಿಂಗ ಕೂಡ ಒಬ್ಬರು. 37ರ ಹರೆಯದ ಲಸಿತ್ ಮಲಿಂಗ ಈಗ ಕ್ರಿಕೆಟ್ ವೃತ್ತಿ ಜೀವನದ ನಿವೃತ್ತಿಯ ಅಂಚಿನಲ್ಲಿದ್ದಾರೆ. ಆದರೆ ಈ ಬಾರಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಲಸಿತ್ ಮಲಿಂಗ ಪಾಲ್ಗೊಳ್ಳುವ ಬಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಭರವಸೆಯನ್ನು ವ್ಯಕ್ತಪಡಿಸಿದೆ.
ಶ್ರಿಲಂಕಾ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥ ಪ್ರಮೋದ್ಯ ವಿಕ್ರಮಸಿಂಘೆ ಈ ಬಗ್ಗೆ ಮಾತನಾಡಿದ್ದು ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ವಿಚಾರವಾಗಿ ಹಿರಿಯ ವೇಗಿಯ ಜೊತೆ ಚರ್ಚೆಯನ್ನು ನಡೆಸುವುದಾಗಿ ತಿಳಿಸಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಈ ಮಾತುಕತೆ ನಡೆಯುವ ಸಾಧ್ಯತೆಯಿದೆ.
"ನಾವು ಲಸಿತ್ ಅವರೊಂದಿಗೆ ಶೀಘ್ರದಲ್ಲಿಯೇ ಮಾತಿಕತೆಯನ್ನು ನಡೆಸಲಿದ್ದೇವೆ. ಈಗ ಅವರು ನಮ್ಮ ಮುಂದಿನ ಟಿ20 ಪ್ರವಾಸಗಳು ಹಾಗೂ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಯೋಜನೆಯಲ್ಲಿ ಇದ್ದಾರೆ" ಎಂದು ವಿಕ್ರಮಸಿಂಘೆ ಪ್ರತಿಕ್ರಿಯೆ ನೀಡಿದ್ದಾರೆ.
"ಈಗಿನ ಫಾರ್ಮ್‌ನಲ್ಲಿಯೀ ಆತ ನಮ್ಮ ದೇಶ ಕಂಡ ಅತ್ಯಂತ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು ಎಂಬುದನ್ನು ನಾವು ಯಾವತ್ತಿಗೂ ಕಡೆಗಣಿಸುವಂತಿಲ್ಲ. ಅವರ ದಾಖಲೆಗಳೇ ಅದನ್ನು ಹೇಳುತ್ತದೆ. ಮುಂದಿನ ದಿನಗಳಲ್ಲಿ ಎರಡು ಟಿ20 ವಿಶ್ವಕಪ್‌ಗಳು ಬರಲಿದೆ. ಈ ವರ್ಷ ಹಾಗೂ ಮುಂದಿನ ವರ್ಷ ಈ ವಿಶ್ವಕಪ್‌ಗಳು ನಡೆಯಲಿದೆ" ಎಂದು ವಿಕ್ರಮಸಿಂಘೆ ಪ್ರತಿಕ್ರಿಯಿಸಿದ್ದಾರೆ.
ಲಸಿತ್ ಮಲಿಂಗ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಮಾದರಿಗೆ ಈ ಹಿಂದೆಯೇ ನಿವೃತ್ತಿಯನ್ನು ಘೋಷಿಸಿದ್ದಾರೆ. 37 ಹರೆಯದ ಅನುಭವಿ ಮಲಿಂಗ ಅವರ ನೇತೃತ್ವದಲ್ಲಿ ಲಂಕಾ ಕ್ರಿಕೆಟ್ ತಂಡ 2014ರಲ್ಲಿ ಐಸಿಸಿ ಟಿ20 ವಿಶ್ವಕಪ್‌ನ ವಿಜೇತ ತಂಡವಾಗಿ ಹೊರಹೊಮ್ಮಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications