ಮುಂಬೈ ವೇಗಿ ಲಸಿತ್ ಮಾಲಿಂಗ ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಆಡುತ್ತಿಲ್ಲ

ಮುಂಬೈ, ಆಗಸ್ಟ್ 21: ಇಂಡಿಯನ್ ಪ್ರೀಮಿಯರ್ ಲೀಗ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವೇಗಿ, ಶ್ರೀಲಂಕಾದ ಲಸಿತ್ ಮಾಲಿಂಗ ಐಪಿಎಲ್ ಆರಂಭಿಕ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿರುವ ಐಪಿಎಲ್‌ಗಾಗಿ ಮುಂಬೈ ತಂಡ ಶುಕ್ರವಾರ (ಆಗಸ್ಟ್ 21) ಭಾರತದಿಂದ ಪ್ರಯಾಣ ಹೊರಡುತ್ತಿದೆ. ಈ ತಂಡದೊಂದಿಗೆ ಮಾಲಿಂಗ ಯುಎಇಗೆ ಪ್ರಯಾಣಿಸುತ್ತಿಲ್ಲ.
ಇಎಸ್‌ಪಿಎನ್ ಕ್ರಿಕ್ ್ಇನ್ಫೋ ವರದಿಯ ಪ್ರಕಾರ, 2009ರಿಂದಲೂ ಎಂಐನಲ್ಲಿರುವ ಲಸಿತ್ ಮಾಲಿಂಗ ಐಪಿಎಲ್ ಮೊದಲ ಕೆಲ ಪಂದ್ಯಗಳಲ್ಲಿ ಆಡುತ್ತಿಲ್ಲ. ತನ್ನ ತಂದೆಗೆ ಆರೋಗ್ಯ ಸರಿಯಿಲ್ಲದಿರುವುದರಿಂದ ಅವರು ಕೊಂಚ ಕಾಲ ಶ್ರೀಲಂಕಾದಲ್ಲೇ ಉಳಿದುಕೊಳ್ಳಲಿದ್ದಾರೆ. ಮಾಲಿಂಗ ತಂದೆಗೆ ಮುಂದಿನ ವಾರ ಶಸ್ತ್ರ ಚಿಕಿತ್ಸೆ ನಡೆಯಲಿದೆ.
ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್ ಸರದಾರರಲ್ಲಿ ಮುಂಚೂಣಿಯಲ್ಲಿರುವ ಮಾಲಿಂಗ, ಈವರೆಗೆ ಒಟ್ಟು 170 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ವರ್ಷವೂ ಅದ್ಭುತ ಪ್ರದರ್ಶನ ತೋರಿದ್ದ ಮಾಲಿಂಗ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಗೆಲುವಿಗೆ ಕಾರಣವಾಗಿದ್ದರು. ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಜಯ ಗಳಿಸಿತ್ತು.
ಕಳೆದ ಮಾರ್ಚ್‌ನಲ್ಲಿ ಗ್ಯಾಲೆಯಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐನಲ್ಲಿ ಮಾಲಿಂಗ ಆಡಿದ್ದೇ ಕೊನೆ. ಆ ಬಳಿಕ ಲಸಿತ್ ಯಾವುದೇ ಪಂದ್ಯಗಳನ್ನಾಡಿಲ್ಲ. ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ 13ನೇ ಆವೃತ್ತಿಯ ಐಪಿಎಲ್ ಯುಎಇಯ ದುಬೈ, ಶಾರ್ಜಾ ಮತ್ತು ಅಬುಧಾಬಿ ತಾಣಗಳಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications