For Quick Alerts
ALLOW NOTIFICATIONS  
For Daily Alerts
 

'ಜಸ್‌ಪ್ರೀತ್‌ ಬೂಮ್ರಾ ಪರ್ಪಲ್ ಕ್ಯಾಪ್‌ ಗೆಲ್ಲೋದನ್ನು ಮಾಲಿಂಗ ಬಯಸಿದ್ದರು'

Lasith Malinga wanted Jasprit Bumrah to win Purple Cap: Mahela Jayawardene

ದುಬೈ: ವಿಶ್ವದಲ್ಲೇ ಬೆಸ್ಟ್ ಟಿ20 ತಂಡ ಅನ್ನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮಂಗಳವಾರ (ನವೆಂಬರ್ 10) ಮುಕ್ತಾಯಗೊಂಡಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇದು ಮುಂಬೈಗೆ ಲಭಿಸುತ್ತಿರುವ ಐದನೇ ಐಪಿಎಲ್ ಟ್ರೋಫಿ.

ಮುಂಬೈ ಇಂಡಿಯನ್ಸ್ ಇಷ್ಟು ಬಲಿಷ್ಠ ತಂಡವಾಗಿ ಬೆಳೆಯೋದಕ್ಕೆ ಕಾರಣವಿದೆ. ಮುಂಬೈನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗ ಬಲಿಷ್ಠವಾಗಿದೆ. ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಕ್ವಿಂಟನ್ ಡಿ ಕಾಕ್, ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ಹಾರ್ದಿಕ್ ಪಾಂಡ್ಯ ಇಂತ ಪ್ರತಿಭಾನ್ವಿತ ಆಟಗಾರರಿಂದಾಗಿ ಎಂಐ ಐಪಿಎಲ್‌ನಲ್ಲಿ ಯಶಸ್ವಿ ತಂಡವೆನಿಸಿದೆ.

ಮುಂಬೈನಲ್ಲಿದ್ದ ಮತ್ತೊಬ್ಬ ಶ್ರೇಷ್ಠ ಬೌಲರ್ ಲಸಿತ್ ಮಾಲಿಂಗ ಈ ಬಾರಿ ಟೂರ್ನಿಯಲ್ಲಿ ಆಡಿಲ್ಲ. ವೈಯಕ್ತಿಕ ಕಾರಣದಿಂದಾಗಿ ಆಡಲಾಗುತ್ತಿಲ್ಲ ಎಂದು ಮಾಲಿಂಗ ಮೊದಲೇ ತಿಳಿಸಿದ್ದರು. ಈ ಸೀಸನ್‌ನಲ್ಲಿ ಅತೀ ಹೆಚ್ಚು ವಿಕೆಟ್‌ ಪಡೆದಿದ್ದಕ್ಕಾಗಿ ಕೊಡಲಾಗುವ ಪರ್ಪಲ್‌ ಕ್ಯಾಪ್‌ಗಾಗಿ ಮುಂಬೈಯ ಬೂಮ್ರಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಕಾಗಿಸೊ ರಬಾಡ ಮಧ್ಯೆ ಪೈಪೋಟಿ ನಡೆದಿತ್ತು.

ಅಂತಿಮವಾಗಿ 30 ವಿಕೆಟ್ ಪಡೆದಿದ್ದ ರಬಾಡ ಪರ್ಪಲ್ ಕ್ಯಾಪ್ ಪಡೆದುಕೊಂಡರು. ಬೂಮ್ರಾಗೆ 27 ವಿಕೆಟ್‌ಗಳು ಲಭಿಸಿದ್ದವು. ಈ ಸೀಸನ್‌ನ ಪರ್ಪಲ್ ಕ್ಯಾಪ್ ಬೂಮ್ರಾ ಪಡೆದುಕೊಳ್ಳುವುದನ್ನು ಮಾಲಿಂಗ ಬಯಸಿದ್ದರಂತೆ. 'ಬೂಮ್ರಾ ಪರ್ಪಲ್ ಕ್ಯಾಪ್ ಗೆಲ್ಲೋದನ್ನು ಮಲಿ ಬಯಸಿದ್ದರು,' ಎಂದು ಮುಂಬೈ ಹೆಡ್ ಕೋಚ್, ಮಾಜಿ ಲಂಕಾ ಬ್ಯಾಟ್ಸ್‌ಮನ್ ಮಹೇಲ ಜಯವರ್ಧನೆ ಹೇಳಿದ್ದಾರೆ.

Story first published: Wednesday, November 11, 2020, 20:50 [IST]
Other articles published on Nov 11, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+