ಐಪಿಎಲ್‌ನಲ್ಲಿ ಲಸಿತ್ ಮಾಲಿಂಗ ಆಡಲ್ಲ, ಮುಂಬೈಗೆ ಜೇಮ್ಸ್ ಪ್ಯಾಟಿನ್ಸನ್ ಸೇರ್ಪಡೆ

ಮುಂಬೈ: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಆಡುತ್ತಿಲ್ಲ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ, ಮಾಲಿಂಗ ಬದಲಿಗೆ ಆಸ್ಟ್ರೇಲಿಯಾ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ವೈಯಕ್ತಿಕ ಕಾರಣದಿಂದಾಗಿ ಮಾಲಿಂಗ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರು ಶ್ರೀಲಂಕಾದಲ್ಲಿ ಅವರ ಕುಟುಂಬದ ಜೊತೆಗಿರಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಹೇಳಿದೆ. ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಎಂಐ ಈ ವಿಚಾರ ತಿಳಿಸಿದೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಆರಂಭಗೊಳ್ಳಲಿದೆ.
ಜೇಮ್ಸ್ ಪ್ಯಾಟಿನ್ಸನ್ ಅವರು ಈ ವಾರದ ಕೊನೆಗೆ ಅಬುಧಾಬಿಯಲ್ಲಿರುವ ಎಂಐ ಬಳಗವನ್ನು ಸೇರಿಕೊಳ್ಳಲಿದ್ದಾರೆ. ಮುಂಬೈ ಮಾಲೀಕ ಆಕಾಶ್ ಅಂಬಾನಿ ಪ್ಯಾಟಿನ್ಸನ್‌ಗೆ ಸ್ವಾಗತ ಕೋರಿದ್ದಾರೆ. ಜೊತೆಗೆ ಲಸಿತ್ ಮಾಲಿಂಗಗೆ ತಮ್ಮೆಲ್ಲ ಬೆಂಬಲವಿದೆ ಎಂದವರು ಹೇಳಿದ್ದಾರೆ.
'ಲಸಿತ್ ಮಾಲಿಂಗ ಒಬ್ಬ ದಂತಕತೆ ಮತ್ತು ಎಂಐನ ಆಧಾರ ಸ್ಥಂಬಗಳ ಮುಖ್ಯ ಶಕ್ತಿ ಅವರು. ಆದರೆ ವಾಸ್ತವ ಸಂಗತಿಯನ್ನು ಹೆಚ್ಚು ದಿನ ಮುಂದೂಡುವಂತಿಲ್ಲ. ಈ ಸೀಸನ್‌ನಲ್ಲಿ ನಾವು ಲಸಿತ್ ಅವರ ಆಟವನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಈ ಸಂದರ್ಭದಲ್ಲಿ ಮಾಲಿಂಗ ತನ್ನ ಕುಟುಂಬದ ಜೊತೆಗೆ ಶ್ರೀಲಂಕಾದಲ್ಲಿ ಇರಬೇಕಿದೆ ಎಂದು ನಮಗೆ ಅರ್ಥವಾಗಿದೆ,' ಎಂದು ಎಂಐ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications