Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ತಂಡವನ್ನು ಬದಲಾಯಿಸಲು ಇದೇ ಕೊನೆ ದಿನ; ಟೀಮ್‌ ಘೋಷಣೆ ಮಾಡಿಲ್ಲ ಪಾಕ್‌!

ಮೇ 24 ಶುಕ್ರವಾರ, ಜೂನ್ 2 ರಿಂದ ಆರಂಭವಾಗುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯ ವಹಿಸಿವೆ.

ಈ ಟೂರ್ನಿಗೆ 19 ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. ಪಾಕಿಸ್ತಾನ ಮಾತ್ರ ತಂಡವನ್ನು ಘೋಷಣೆ ಮಾಡಿಲ್ಲ. ಟಿ20 ವಿಶ್ವಕಪ್‌ಗಾಗಿ ಎಲ್ಲಾ ದೇಶಗಳು ತಮ್ಮ ತಂಡಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಈಗ ಕೊನೆಯ ಅವಕಾಶವನ್ನು ಹೊಂದಿವೆ.

Last day to change team for T20 World Cup but Pakistan team has not announced

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟಿ20 ವಿಶ್ವಕಪ್‌ಗಾಗಿ ತನ್ನ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಮೇ 25 ಕೊನೆಯ ದಿನಾಂಕ ಎಂದು ನಿಗದಿಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇಶಗಳು ತಮ್ಮ ತಂಡಗಳಲ್ಲಿ ಬದಲಾವಣೆಗಳನ್ನು ಮಾಡಲು ಕೊನೆಯ ಅವಕಾಶವನ್ನು ಹೊಂದಿವೆ.

ಟೀಮ್‌ ಇಂಡಿಯಾದಲ್ಲಿ ಬದಲಾವಣೆಗೆ ಅವಕಾಶವಿಲ್ಲ

ಬಿಸಿಸಿಐ ಆಯ್ಕೆ ಸಮಿಮಿ ಈ ಬಾರಿಯ ವಿಶ್ವಕಪ್‌ಗೆ ಭಾರತ ತಂಡವನ್ನು ಏಪ್ರಿಲ್ 30 ರಂದು ಪ್ರಕಟಿಸಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್‌ ಇಂಡಿಯಾ ಟಿ20 ವಿಶ್ವಕಪ್‌ ಗೆಲ್ಲಲು ಸಜ್ಜಾಗಿದೆ.

ತಂಡದಲ್ಲಿ ಅನುಭವಿ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಆಲ್‌ರೌಂಡರ್‌ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಇಲ್ಲ.

ಹೀಗಿರುವಾಗ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಯಾವಾಗ ಪ್ರಕಟಿಸಬಹುದು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇನ್ನೂ ತಮ್ಮ ತಂಡವನ್ನು ಪಾಕ್‌ ಘೋಷಿಸಿಲ್ಲ. ಈಗ ಅವರು ತಮ್ಮ 15 ಸದಸ್ಯರ ತಂಡದ ಪಟ್ಟಿಯನ್ನು ಐಸಿಸಿಗೆ ಮೇ 25 ರಂದು ಸಲ್ಲಿಸಬೇಕಾಗುತ್ತದೆ. '

ಹೀಗಾಗಿ ನಾಳೆಯೇ ಕೊನೆ ದಿನವಾಗಿರುವುದರಿಂದ ಪಾಕ್‌ ತಂಡ ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬಾರಿಯ ವಿಶ್ವಕಪ್‌ನಲ್ಲೂ ಬಾಬರ್ ಅಜಮ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ತಂಡದಲ್ಲಿ ವಿಕೆಟ್‌ಕೀಪರ್‌ ಮೊಹಮ್ಮದ್ ರಿಜ್ವಾನ್ ಆಡಲಿದ್ದಾರೆ.

ಇದರೊಂದಿಗೆ ಶಾದಾಬ್ ಖಾನ್ ಮತ್ತು ಶಾಹೀನ್ ಅಫ್ರಿದಿ ಅವರಿಗೂ ಪಾಕ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಆದರೆ ಕಳೆದ ಎರಡು ದಿನಗಳ ಹಿಂದೆ ಅಪಾಯಕಾರಿ ವೇಗದ ಬೌಲರ್‌ ಹಸನ್ ಅಲಿ ಅವರನ್ನು ಕೌಂಟಿ ಕ್ರಿಕೆಟ್ ಆಡಲು ಪಾಕಿಸ್ತಾನ ಕಳುಹಿಸಿದೆ.

ಹೀಗಾಗಿ ಟಿ20 ವಿಶ್ವಕಪ್‌ ಪಾಕ್‌ ತಂಡದಲ್ಲಿ ಹಸನ್‌ ಆಲಿ ಇರುವುದಿಲ್ಲ. ಇದಲ್ಲದೆ ಬ್ರಾರ್ ಅಹ್ಮದ್ ಮತ್ತು ಅಬ್ಬಾಸ್ ಅಫ್ರಿದಿ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಗಳಿವೆ.

ಪಾಕಿಸ್ತಾನ ಸಂಭಾವ್ಯ ತಂಡ ಹೀಗಿದೆ : ಮೊಹಮ್ಮದ್ ರಿಜ್ವಾನ್, ಸೈಮ್ ಅಯೂಬ್, ಬಾಬರ್ ಆಜಮ್ (ನಾಯಕ), ಫಖರ್ ಜಮಾನ್, ಅಜಮ್ ಖಾನ್ (ವಿಕೆಟ್ ಕೀಪರ್), ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ಅಮೀರ್, ನಸೀಮ್ ಶಾ, ಶಾದಾಬ್ ಖಾನ್, ಇರ್ಫಾನ್ , ಉಸ್ಮಾನ್ ಖಾನ್, ಅಘಾ ಸಲ್ಮಾನ್.

ಮೀಸಲು ಆಟಗಾರರು: ಬ್ರಾರ್ ಅಹ್ಮದ್ ಮತ್ತು ಅಬ್ಬಾಸ್ ಅಫ್ರಿದಿ.

Story first published: Friday, May 24, 2024, 18:56 [IST]
Other articles published on May 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+