ವೆಸ್ಟ್ ಬೆಂಗಾಲ್ ಸಿಎಂ ಪರಿಹಾರ ನಿಧಿಗೆ ಮಾಜಿ ಆಟಗಾರ ಲಕ್ಷ್ಮಿರತ್ನ ದೇಣಿಗೆ

ಕೋಲ್ಕತ್ತಾ: ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್, ಈಗ ಕಾಮೆಂಟೇಟರ್, ರಾಜಕಾರಣಿ ಆಗಿರುವ ಲಕ್ಷ್ಮಿರತ್ನ ಶುಕ್ಲಾ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರಲ್ಲಿ ಕಾಮೆಂಟರಿ ನೀಡಿರುವ ಸಂಪೂರ್ಣ ವೇತನದ ಹಣವನ್ನು ಕೊರೊನಾ ಪರಿಹಾರರ್ಥವಾಗಿ ವೆಸ್ಟ್ ಬೆಂಗಾಲ್ ಚೀಫ್ ಮಿನಿಸ್ಟರ್ ರಿಲೀಫ್ ಫಂಡ್‌ಗೆ ದೇಣಿಗೆಯಾಗಿ ನೀಡಿದ್ದಾರೆ.
ಲಕ್ಷ್ಮಿರತ್ನ ಶುಕ್ಲಾ ಅವರು 2016ರಿಂದ 2021ರ ವರೆಗೆ ಅಂದರೆ ಈ ವರ್ಷಾರಂಭದವರೆಗೆ ಕೋಲ್ಕತ್ತಾ ಸ್ಪೋರ್ಟ್ಸ್ ಆ್ಯಂಡ್ ಯೂತ್ ಅಫೇರ್ಸ್(ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ) ಸಚಿವರಾಗಿದ್ದರು. ಈಗ ಶುಕ್ಲಾ ಹೌರಾ ಉತ್ತರ ಕ್ಲೇತ್ರದಿಂದ ತೃಣಮೂಲ ಕಾಂಗ್ರೆಸ್‌ನ ಎಂಎಲ್‌ಎ ಆಗಿದ್ದಾರೆ.
'ನನ್ನ ಹುಟ್ಟುಹಬ್ಬದ ದಿನ ಐಪಿಎಲ್ 2021ರ ಕಾಮೆಂಟರಿಯಿಂದ ಬಂದ ಹಣವನ್ನು ನಾನು ರಾಜ್ಯದ ಕಲ್ಯಾಣಕ್ಕೆ ವಿನಿಯೋಸುತ್ತಿದ್ದೇನೆ ಎನ್ನಲು ನನಗೆ ಖುಷಿಯಾಗುತ್ತಿದೆ,' ಎಂದು ಶುಕ್ಲಾ ಹೇಳಿದ್ದಾರೆ. ಮೇ 6ರಂದು ಶುಕ್ಲಾ 40ನೇ ಹರೆಯಕ್ಕೆ ಕಾಲಿರಿಸಿದ್ದರು. ಇದೇ ದಿನ ತನ್ನ ಪಾಲಿನ ದೇಣಿಗೆಯನ್ನು ಶುಕ್ಲಾ ಘೋಷಿಸಿದ್ದರು.
ಮೂಲತಃ ಹೌರಾದವರೇ ಆದ ಶುಕ್ಲಾ, ಟೀಮ್ ಇಂಡಿಯಾ ಪರ 3 ಏಕದಿನ ಪಂದ್ಯಗಳಲ್ಲಿ 18 ರನ್, 1 ವಿಕೆಟ್, 34 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 405 ರನ್, 15 ವಿಕೆಟ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications