ನಾನು ಬುಮ್ರಾ ಬಗ್ಗೆ ಹೇಳಿದಾಗ 'ಆತ ಏನು ಆಡ್ತಾನೆ ಬಿಡು' ಎಂದಿದ್ರು ಕೊಹ್ಲಿ ಎಂದ ಆರ್‌ಸಿಬಿ ಮಾಜಿ ಆಟಗಾರ!

ವಿಶ್ವದ ಶ್ರೀಮಂತ ಹಾಗೂ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಡುವ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ಆರಂಭವಾಗಿದ್ದು, ಐದು ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಿ ಸೋಲನ್ನು ಅನುಭವಿಸಿದೆ. ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಕಳಪೆ ಪ್ರದರ್ಶನ ತೋರಿದ್ದ ಮುಂಬೈ ಇಂಡಿಯನ್ಸ್ ಈ ಬಾರಿಯ ಮೆಗಾ ಹರಾಜಿನ ನಂತರ ಸಾಕಷ್ಟು ಬದಲಾವಣೆಯನ್ನು ಹೊಂದಿದ್ದು, ಹಲವಾರು ನೂತನ ಆಟಗಾರರನ್ನೊಳಗೊಂಡಿದೆ. ಹಾಗೂ ತಮ್ಮ ತಂಡದ ಪರ ಉತ್ತಮ ಪ್ರದರ್ಶನ ನೀಡಿ ಒಳ್ಳೆಯ ಫಾರ್ಮ್‌ನಲ್ಲಿರುವ ಆಟಗಾರರನ್ನು ಬೇರೆ ತಂಡಗಳಿಗೆ ಬಿಟ್ಟುಕೊಡದ ಫ್ರಾಂಚೈಸಿ ಎಂದೂ ಸಹ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಮೆಗಾ ಹರಾಜಿನಲ್ಲಿಯೂ ತನ್ನ ತಂಡದ ಕೆಲ ಆಟಗಾರರನ್ನು ಖರೀದಿಸಿ ಮರಳಿ ತಂಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಇನ್ನು ತಮ್ಮ ತಂಡದ ಬಹುಮುಖ್ಯ ಆಟಗಾರರಲ್ಲಿ ಓರ್ವನಾದ ಜಸ್ಪ್ರಿತ್ ಬುಮ್ರಾನನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿಯೇ ರಿಟೈನ್ ಮಾಡಿಕೊಂಡಿದ್ದು, ಈ ಬಾರಿಯೂ ಸಹ ಬುಮ್ರಾ ಮುಂಬೈ ಜೆರ್ಸಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ.
ಇನ್ನು 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದ ಬುಮ್ರಾ ಸತತವಾಗಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾಗುತ್ತಿರುವ ಕಾರಣ ತಂಡದ ಪ್ರಮುಖ ಆಟಗಾರನಾಗಿ ಉಳಿದುಕೊಂಡಿದ್ದು, ಈ ಹಿಂದೆ ಇದೇ ಬುಮ್ರಾ ಬಗ್ಗೆ ವಿರಾಟ್ ಕೊಹ್ಲಿ ಆತ ಏನು ಆಡ್ತಾನೆ ಬಿಡು ಎಂದು ಕಡೆಗಣಿಸಿದ್ದರು ಎಂಬ ಹೇಳಿಕೆ ನೀಡುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಜಿ ಕ್ರಿಕೆಟಿಗರೊಬ್ಬರು ತುಸು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾಮಾನ್ಯವಾಗಿ ನಾವು ನೀವು ನೋಡಿರುವ ವಿರಾಟ್ ಕೊಹ್ಲಿ - ಜಸ್ಪ್ರಿತ್ ಬುಮ್ರಾ ತುಂಬಾ ಆತ್ಮೀಯರಾಗಿದ್ದು, ಇಬ್ಬರೂ ಸಹ ಒಳ್ಳೆಯ ಸ್ನೇಹಿತರು ಎಂಬುದು ಅವರು ಮೈದಾನದಲ್ಲಿ ಹಾಗೂ ಮೈದಾನದಿಂದಾಚೆ ನಡೆದುಕೊಳ್ಳುವುದರಿಂದಲೇ ತಿಳಿದು ಬರುತ್ತದೆ. ಆದರೆ ಇದೀಗ ಮಾಜಿ ಕ್ರಿಕೆಟಿಗನೋರ್ವ ಈ ಕೆಳಕಂಡಂತೆ ಹೇಳಿಕೆ ನೀಡುರುವುದು ಸದ್ಯ ಕೆಲ ವಿವಾದಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ.

2014ರಲ್ಲಿ ಬುಮ್ರಾ ಬಗ್ಗೆ ಕೊಹ್ಲಿ ಬಗ್ಗೆ ಹೇಳಿದ್ದೆ
ವಿರಾಟ್ ಕೊಹ್ಲಿ ಬುಮ್ರಾ ಏನು ಆಡ್ತಾನೆ ಬಿಡು ಎಂದು ಹೇಳಿದ್ದರು ಎಂಬುದನ್ನು ಹೇಳಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್. ಹೌದು, ಕ್ರೀಡಾ ವೆಬ್‌ತಾಣವಾದ ಕ್ರಿಕ್‌ಬಜ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಪಾರ್ಥಿವ್ ಪಟೇಲ್' 2014ರಲ್ಲಿ ನಾನು ಆರ್‌ಸಿಬಿಯಲ್ಲಿದ್ದಾಗ, ಬುಮ್ರಾ ಎಂಬ ಬೌಲರ್ ಇದ್ದಾನೆ ಎಂದು ಕೊಹ್ಲಿಗೆ ಹೇಳಿದ್ದೆ. ಆತನನ್ನು ನೋಡಿ ಇದಕ್ಕೆ ಉತ್ತರಿಸಿದ ವಿರಾಟ್ ಬಿಡಿ, ಅಂತಹ ಆಟಗಾರರು ಏನು ಆಡುತ್ತಾರೆ' ಎಂದು ಹಳೆಯ ಘಟೆನೆಯನ್ನು ಮೆಲುಕು ಹಾಕಿದ್ದಾರೆ.

ರಣಜಿಯಲ್ಲಿ ಒಂದೇ ತಂಡದ ಪರ ಆಡಿದ್ದರು ಬುಮ್ರಾ, ಪಟೇಲ್
ಹೀಗೆ ಬುಮ್ರಾ ಕುರಿತಾಗಿ ಕೊಹ್ಲಿ ಹೇಳಿದ್ದ ಮಾತುಗಳನ್ನು ಹಂಚಿಕೊಂಡಿರುವ ಪಾರ್ಥಿವ್ ಪಟೇಲ್ ರಣಜಿ ಟ್ರೋಫಿಯಲ್ಲಿ ಗುಜರಾತ್ ತಂಡದ ಪರ ಬುಮ್ರಾ ಜತೆ ಕಣಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಬುಮ್ರಾ ಆಟವನ್ನು ಹತ್ತಿರದಿಂದ ಗಮನಿಸಿದ್ದ ಪಾರ್ಥಿವ್ ಪಟೇಲ್ ಆತನ ಕುರಿತು ಕೊಹ್ಲಿ ಬಳಿ ಚರ್ಚಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಪಟೇಲ್ 2013 ಮತ್ತು 2014ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬುಮ್ರಾ ಕಳಪೆ ಪ್ರದರ್ಶನ ನೀಡಿದ ಕಾರಣ ಟೂರ್ನಿಯ ಮಧ್ಯದಲ್ಲಿಯೇ ಮನೆಗೆ ಹೋಗಲಿದ್ದಾರೆ ಎಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗಿದ್ದವು ಎಂದು ಹೇಳಿಕೆ ನೀಡಿದ್ದಾರೆ.

ಬುಮ್ರಾ ಐಪಿಎಲ್ ಅಂಕಿಅಂಶ
ಇದುವರೆಗೂ ಒಟ್ಟು 107 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಜಸ್ಪ್ರಿತ್ ಬುಮ್ರಾ ಒಟ್ಟು 130 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ಬುಮ್ರಾ ನಂತರ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ತಮ್ಮ ಉತ್ತಮ ಪ್ರದರ್ಶನದಿಂದ ಗುರುತಿಸಿಕೊಂಡು ಇದೀಗ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿ ನಿಂತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications