ಜಿಂಬಾಬ್ವೆ ಪ್ರವಾಸದಿಂದ ಸ್ಪಿನ್ನರ್ ಕರಣ್ ಶರ್ಮ ಔಟ್
ಬೆಂಗಳೂರು, ಜುಲೈ, 06: ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿದ್ದ ಲೆಗ್ ಸ್ಪಿನ್ನರ್ ಕರಣ್ ಶರ್ಮ ಅವರ ಕನಸು ಭಗ್ನವಾಗಿದೆ. ಗಾಯಾಳುವಾಗಿರುವ ಕರಣ್ ಅವರು ಜಿಂಬಾಬ್ವೆ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ ಘೋಷಿಸಿದೆ.
ಜಿಂಬಾಬ್ವೆ ಪ್ರವಾಸಕ್ಕಾಗಿ 15 ಮಂದಿ ಆಟಗಾರರ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಕಳೆದ ವಾರ ಪ್ರಕಟಿಸಿತ್ತು. ಅಜಿಂಕ್ಯ ರಹಾನೆ ನಾಯಕತ್ವದ ತಂಡದಲ್ಲಿದ್ದ ಕರಣ್ ಶರ್ಮ ಅವರು ಮಧ್ಯದ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರವಾಸಕ್ಕೆ ತೆರಳುವ ತಂಡವನ್ನು ಸೇರುತ್ತಿಲ್ಲ. ಕರಣ್ ಬದಲಿಗೆ ಬೇರೆ ಯಾವ ಆಟಗಾರನನ್ನು ಕಳಿಸುತ್ತಿಲ್ಲ ಎಂದು ಬಿಸಿಸಿಐ ದೃಢಪಡಿಸಿದೆ.

ಜುಲೈ 10 ರಿಂದ ಆರಂಭವಾಗಲಿರುವ ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾ 3 ಏಕದಿನ ಕ್ರಿಕೆಟ್ ಪಂದ್ಯ ಹಾಗೂ 2 ಟಿ 20 ಪಂದ್ಯಗಳನ್ನಾಡಲಿದೆ. ಕರಣ್ ಅವರ ಎಡಗೈ ಮಧ್ಯದ ಬೆರಳು ಮುರಿದುಕೊಂಡಿದ್ದಾರೆ. ಗಾಯ ತಕ್ಷಣಕ್ಕೆ ಗುಣಮುಖವಾಗುವುದಿಲ್ಲ ಎಂದು ವರದಿ ಬಂದಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ವರದಿ ನೀಡಿದೆ.
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Karn Sharma ruled out of Zimbabwe tour
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications