Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS: ಬಾರ್ಡರ್- ಗವಾಸ್ಕರ್ ಟ್ರೋಫಿ ಗೆಲ್ಲುವ ತಂಡದ ಭವಿಷ್ಯ ನುಡಿದ ದಿಗ್ಗಜ ಕ್ರಿಕೆಟಿಗ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಈ ವರ್ಷದ ಕೊನೆಯಲ್ಲಿ
ನಡೆಯಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 5 ಟೆಸ್ಟ್ ಪಂದ್ಯಗಳು ನಡೆಯುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು.

ಭಾರತ 2014-15 ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಸತತವಾಗಿ ಗೆಲ್ಲುತ್ತ ಬಂದಿದೆ. ನವೆಂಬರ್ 22 ರಿಂದ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನೊಂದಿಗೆ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಆರಂಭವಾಗಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಟ್ರೋಫಿಯನ್ನು ಉಳಿಸಿಕೊಳ್ಳಲು ಮಾತ್ರವಲ್ಲದೆ ಆಸ್ಟ್ರೇಲಿಯಾದ ನೆಲದಲ್ಲಿ ಟೆಸ್ಟ್ ಸರಣಿಯ ಹ್ಯಾಟ್ರಿಕ್ ಗೆಲುವಿನ ಮೇಲೆಯೂ ಕಣ್ಣಿಟ್ಟಿದೆ.

Legendary cricketer who predicted Border- Gavaskar Trophy winning team

ದಿಗ್ಗಜ ಕ್ರಿಕೆಟಿಗ ಭವಿಷ್ಯ

2018-19 ಮತ್ತು 2020-21ರಲ್ಲಿ ಭಾರತ ತಂಡವು ತನ್ನ ಕೊನೆಯ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದು ಬೀಗಿದೆ. ಇದೀಗ ಈ ಸರಣಿಗೂ ಮುನ್ನ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಈ ಐದು ಟೆಸ್ಟ್‌ಗಳ ಸರಣಿಯನ್ನು 3-1 ಅಂತರದಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

"ಇದು ಖಂಡಿತವಾಗಿಯೂ ರೋಮಾಂಚಕ ಸರಣಿಯಾಗಲಿದೆ. ಈ ಸರಣಿಯಕ್ಕು ಎರಡೂ ತಂಡಗಳ ಪ್ರತಿಭೆ ಸೇರಿದೆ. ಟೆಸ್ಟ್ ಕ್ರಿಕೆಟ್ ನಮ್ಮ ಪ್ರೀತಿಯ ಆಟದ ಅಂತಿಮ ಸ್ವರೂಪ ಎಂಬುದನ್ನು ಸಹ ಈ ಸರಣಿಯು ತೋರಿಸುತ್ತದೆ. ಈ ಸರಣಿಯನ್ನು ಭಾರತ 3-1 ಅಂತರದಿಂದ ಗೆಲ್ಲಲಿದೆ" ಎಂದು ಗವಾಸ್ಕರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾಕ್ಕೆ ಆರಂಭಿಕ ಸಮಸ್ಯೆ

ಅನುಭವಿ ಸ್ಪೋಟಲ ಬ್ಯಾಟರ್ ಡೇವಿಡ್ ವಾರ್ನರ್ ಎಲ್ಲಾ ಮಾದರಿ ಕ್ರಿಕೆಟ್‌ನಿಂದ
ನಿವೃತ್ತಿಯಾಗಿರುವುದರಿಂದ ಆಸ್ಟ್ರೇಲಿಯಾ ತನ್ನ ಆರಂಭಿಕ ಬ್ಯಾಟಿಂಗ್ ಬಗ್ಗೆ ಚಿಂತಿಸುತ್ತಿದೆ ಎಂದು ಎಂದು ಗವಾಸ್ಕರ್ ಹೇಳಿದ್ದಾರೆ. 'ಡೇವಿಡ್ ವಾರ್ನರ್ ಅವರ ನಿವೃತ್ತಿಯ ನಂತರ, ಅವರ ಆರಂಭಿಕ ಬ್ಯಾಟಿಂಗ್ ಸಮಸ್ಯೆಗಳು ಹೆಚ್ಚಿವೆ. ಮಧ್ಯಮ ಕ್ರಮಾಂಕ ಕೂಡ ಸ್ವಲ್ಪ ದುರ್ಬಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಸವಾಲಿಗೆ ಸಜ್ಜಾಗಿದೆ ಎಂದಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ

ಮೊದಲನೇ ಟೆಸ್ಟ್: ನವೆಂಬರ್ 22-26 (ಪರ್ತ್ ಸ್ಟೇಡಿಯಂ, ಪರ್ತ್)

ಎರಡನೇ ಟೆಸ್ಟ್: ಡಿಸೆಂಬರ್ 6-10 (ಅಡಿಲೇಡ್ ಓವಲ್, ಅಡಿಲೇಡ್)- ಡೇ ನೈಟ್ ಟೆಸ್ಟ್

ಮೂರನೇ ಟೆಸ್ಟ್: ಡಿಸೆಂಬರ್ 14-18 (ದಿ ಗಬ್ಬಾ, ಬ್ರಿಸ್ಬೇನ್)

ನಾಲ್ಕನೇ ಟೆಸ್ಟ್: ಡಿಸೆಂಬರ್ 26-30 (ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್)- ಬಾಕ್ಸಿಂಗ್ ಡೇ ಟೆಸ್ಟ್

ಐದನೇ ಟೆಸ್ಟ್: ಜನವರಿ 3-7 (ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ)- ಪಿಂಕ್ ಬಾಲ್‌ ಟೆಸ್ಟ್‌

Story first published: Sunday, September 1, 2024, 19:44 [IST]
Other articles published on Sep 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+