ಕ್ರಿಕೆಟ್ ದಿಗ್ಗಜ ಲಾರಾ ಪ್ರಕಾರ, ಟೀಂ ಇಂಡಿಯಾದ ಭರವಸೆಯ ಆಟಗಾರ ಯಾರು?

ಲಂಡನ್, ಜೂನ್ 16: ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಕದನಕ್ಕೂ ಮುನ್ನ ತಮ್ಮ ಅಂಕಣದಲ್ಲಿ ಬ್ರಿಯಾನ್ ಲಾರಾ ಅವರು ತಮ್ಮ ನೆಚ್ಚಿನ ಭರವಸೆ ಆಟಗಾರನನ್ನು ಹೆಸರಿಸಿದ್ದಾರೆ.
ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯಾಳುವಾಗಿದ್ದು, ಈ ಮಹತ್ವದ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಇನಿಂಗ್ಸ್ ಯಾರು ಆರಂಭಿಸಲಿದ್ದಾರೆ? ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ? ಎಂಬ ಚರ್ಚೆ ನಡೆಸಲಾಗಿತ್ತು. ಈ ನಡುವೆ ಕೆಎಲ್ ರಾಹುಲ್ ಅವರು ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವುದು, ವಿಜಯ್ ಶಂಕರ್ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಎಂದು ನಿಗದಿಯಾಗಿದೆ.
ಭಾರತದ ತಂಡದ ಬಗ್ಗೆ ಬರೆದಿರುವ ಲಾರಾ ಅವರು ತಮ್ಮ ನೆಚ್ಚಿನ ಭರವಸೆ ಆಟಗಾರನಾಗಿ ಕೆಎಲ್ ರಾಹುಲ್ ಅವರನ್ನು ಹೆಸರಿಸಿದ್ದಾರೆ. ತಾಂತ್ರಿಕವಾಗಿ ಕೆಎಲ್ ರಾಹುಲ್ ಅವರು ಸೂಕ್ತ ಆಟಗಾರ ಯಾವುದೇ ಕ್ರಮಾಂಕವಿರಲಿ, ಯಾವುದೇ ಮೈದಾನವಿರಲಿ ರಾಹುಲ್ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಕೌಶಲ್ಯ ಹೊಂದಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ಗಾಗಿ ಬರೆದಿರುವ ಅಂಕಣದಲ್ಲಿ ಹೇಳಿದ್ದಾರೆ.
ಇನ್ನಿಂಗ್ ಕಟ್ಟುವುದು, ಜೊತೆಯಾಟ ಬೆಳೆಸುವುದರಲ್ಲಿ ರಾಹುಲ್ ಅನುಭವ ಹೊಂದುತ್ತಿದ್ದಾರೆ ಎಂದು 50 ವರ್ಷ ವಯಸ್ಸಿನ ಲಾರಾ ಬರೆದಿದ್ದಾರೆ. ಹಾಲಿ ಟೀಂ ಇಂಡಿಯಾದ ಕ್ರಮಾಂಕ ಬಲಿಷ್ಠವಾಗಿದ್ದು, ನಾನೇನಾದರೂ ಎದುರಾಳಿ ತಂಡದ ನಾಯಕನಾಗಿದ್ದಾರೆ, ಭಾರತದ ಬ್ಯಾಟಿಂಗ್ ಕ್ರಮಾಂಕ 8ರ ತನಕ ಬಲಿಷ್ಠವಾಗಿದೆ ಏನು ಮಾಡುವುದು ಎಂದು ಮೊದಲಿಗೆ ಚರ್ಚಿಸುತ್ತಿದ್ದೆ ಎಂದಿದ್ದಾರೆ. ಟೀಂ ಇಂಡಿಯಾದ ಬೌಲರ್ ಗಳು ಸೂಕ್ತವಾದ ಬೆಂಬಲ ನೀಡುತ್ತಿದ್ದು, ವಿಶ್ವಕಪ್ ನ ಮುಂದಿನ ಹಂತದಲ್ಲಿ ಮಹತ್ವದ ಪಾತ್ರ ವಹಿಸಬೇಕಾಗುತ್ತದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications