ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022: ಇಂಡಿಯಾ ಮಹಾರಾಜಾಸ್ vs ವರ್ಲ್ಡ್ ಜೈಂಟ್ಸ್, ಟಾಸ್ ವರದಿ ಆಡುವ ಬಳಗ

ಇಂಡಿಯಾ ಮಹಾರಾಜಾಸ್ ಹಾಗೂ ವರ್ಲ್ಡ್ ಲೈಂಟ್ಸ್ ತಂಡಗಳ ನಡುವಿನ ವಿಶೇಷ ಪಂದ್ಯ ಇಂದು ನಡೆಯುತ್ತಿದೆ. ಭಾರತದ ಸ್ವಾತಂತ್ರ್ಯೋತ್ಸವಕ್ಕೆ 75 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗರು ಹಾಗೂ ವಿಶ್ವದ ಇತರ ದಿಗ್ಗಜ ಆಟಗಾರರ ಮುಖಾಮುಖಿಯಾಗುತ್ತಿದ್ದು ಪಂದ್ಯ ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇಂಡಿಯಾ ಮಹಾರಾಜಾಸ್ ತಂಡವನ್ನು ವೀರೇಂದ್ರ ಸೆಹ್ವಾಗ್ ಮುನ್ನಡೆಸುತ್ತಿದ್ದು ಹರ್ಭಜನ್ ಸಿಂಗ್ ಮೊಹಮ್ಮದ್ ಕೈಫ್ ಮೊದಲಾದ ಆಟಗಾರರು ಪ್ರತಿನಿಧಿಸುತ್ತಿದ್ದಾರೆ. ನಿವೃತ್ತಿ ಪಡೆದಿರುವ ಕ್ರಿಕೆಟಿಗರನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡಲು ಈ ಮೂಲಕ ಅಭಿಮಾನಿಗಳಿಗೆ ಅವಕಾಶ ದೊರೆಯುತ್ತಿದೆ. ಇನ್ನು ವರ್ಲ್ಡ್ ಜೈಂಟ್ಸ್ ತಂಡವನ್ನು ಜಾಕ್ ಕ್ಯಾಲೀಸ್ ಮುನ್ನಡೆಸುತ್ತಿದ್ದು ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಮುತ್ತಯ್ಯ ಮುರಳೀಧರನ್ ಮೊದಲಾದ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ.
ವರ್ಲ್ಡ್ ಜೈಂಟ್ಸ್ ತಂಡದ ಪರವಾಗಿ ಕೆವಿನ್ ಓಬ್ರಿಯಾನ್ ಭರ್ಜರಿ ಅರ್ಧ ಶತಕ ಸಿಡಿಸಿ ಮಿಂಚಿದ್ದು ದಿನೇಶ್ ರಾಮ್‌ದಿನ್ ಸ್ಪೋಟಕ 42 ರನ್‌ಗಳನ್ನು ಗಳಿಸಿದ್ದಾರೆ. ಉಳಿದಂತೆ ತಿಸರ ಪೆರೆರ ಅವರಿಂದ 23 ರನ್‌ಗಳ ಕೊಡುಗೆ ಬಂದಿದೆ. ಹೀಗಾಗಿ ವರ್ಲ್ಡ್ ಜೈಂಟ್ಸ್ ತಂಡ ಭರ್ಜರಿ 170 ರನ್‌ಗಳನ್ನು ಗಳಿಸಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ದೊಡ್ಡ ಮೊತ್ತದ ಗುರಿ ನೀಡಿದೆ.
ಇನ್ನು ಬೌಲಿಂಗ್‌ನಲ್ಲಿ ಭಾರತದ ಪರವಾಗಿ ಪಂಕಜ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ನಾಲ್ಕು ಓವರ್‌ಗಳ ಬೌಲಿಂಗ್ ಕೋಟಾದಲ್ಲಿ ಕೇವಲ 26 ರನ್‌ಗಳನ್ನು ನೀಡಿ 5 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ನಾಯಕ ಹರ್ಭಜನ್ ಸಿಂಗ್, ಜೋಗಿಂದರ್ ಶರ್ಮಾ ಹಾಗೂ ಮೊಹಮ್ಮದ್ ಕೈಫ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ
ವರ್ಲ್ಡ್ ಜೈಂಟ್ಸ್ ಸ್ಕ್ವಾಡ್
ವರ್ಲ್ಡ್ ಜೈಂಟ್ಸ್ : ಜಾಕ್ ಕಾಲಿಸ್, ಲೆಂಡ್ಲ್ ಸಿಮನ್ಸ್, ಸನತ್ ಜಯಸೂರ್ಯ, ಇಯಾನ್ ಮಾರ್ಗನ್(ಸಿ), ದಿನೇಶ್ ರಾಮ್ಡಿನ್(ವಿಕೆಟ್ ಕೀಪರ್), ಜಾಂಟಿ ರೋಡ್ಸ್, ಬ್ರೆಟ್ ಲೀ, ಮಿಚೆಲ್ ಜಾನ್ಸನ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇಯ್ನ್, ಹ್ಯಾಮಿಲ್ಟನ್ ಮಸಕಡ್ಜಾ, ಕೆವಿನ್ ಓ ಬ್ರಿಯೆನ್ಜಾ, ಅಸ್ಗರ್ ಅಫ್ಘಾನ್, ಮಶ್ರಫೆ ಮೊರ್ತಜಾ, ನಾಥನ್ ಮೆಕಲಮ್, ಮ್ಯಾಟ್ ಪ್ರಯರ್
ಇಂಡಿಯಾ ಮಹಾರಾಜಾಸ್ ಸ್ಕ್ವಾಡ್
ಇಂಡಿಯಾ ಮಹಾರಾಜಾಸ್ ತಂಡ: ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಹರ್ಭಜನ್ ಸಿಂಗ್ (ನಾಯಕ), ಜೋಗಿಂದರ್ ಶರ್ಮಾ, ಆರ್ ಪಿ ಸಿಂಗ್, ಎಸ್ ಶ್ರೀಶಾಂತ್, ಎಸ್ ಬದ್ರಿನಾಥ್, ಯೂಸುಫ್ ಪಠಾಣ್, ಅಶೋಕ್ ದಿಂಡಾ, ಸ್ಟುವರ್ಟ್ ಬಿನ್ನಿ, ಅಜಯ್ ಜಡೇಜಾ, ರೀತೀಂದರ್ ಸೋಧಿ, ನಮನ್ ಓಜಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications